Karnataka Congress ನಮ್ಮ ಹಿರಿಯರು ಕೆಲವೊಮ್ಮೆ ಕಿರಿಯರ ಅತಿ ಮಾತಿಗೆ ಬೈದು ಹೇಳುವುದುಂಟು. ತಲೆಹರಟೆ ಮಾಡಬೇಡ ತಿಳೀತ? ಅಂತ.
ಇಷ್ಟಾದರೂ ಹಿರಿಯರ ಮಾತನ್ನ
ಸೀರಿಯಸ್ ಆಗಿ ತಗೊಳ್ಳದೇ ಇದ್ದಾಗ ಅಂಥವರನ್ನ ಉಪೇಕ್ಷಿಸುತ್ತಾರೆ.
ಅಂತಹ ಎರಡು ಮಾತಿನ ಸಂಗತಿಗಳು ಮಾಧ್ಯಮಗಳಲ್ಲಿ ಬಿತ್ತರವಾಗಿವೆ.
ಗೌರವಾನ್ವಿತ ಸಚಿವ ಎಂ.ಬಿ.ಪಾಟೀಲರು ಇತ್ತೀಚೆಗೆ ಮೈಸೂರಿನಲ್ಲಿ ಪಕ್ಷದ ಹೈಕಮಾಂಡ್ ಸೂಚನೆಯನ್ನ
ಮರೆತು ಮಾತಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ
ಕಗ್ಗಂಟಾಗಿದ್ದ ಸೀಎಂ ಮತ್ತು ಡಿಸಿಎಂ ಸ್ಥಾನಗಳ ಬಗ್ಗೆ ನಡೆದ ಪೈಪೋಟಿ ಎಲ್ಲರಿಗೂ ಗೊತ್ತಿದೆ.
ಆದರೆ ಹೈಕಮಾಂಡ್ ಏನೆಲ್ಲಾ ಸರ್ಕಸ್ ಮಾಡಿ ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನ ಸಂಧಾನದ ಮೂಲಕ
ಒಪ್ಪಿಸಿತ್ತು.
ಪ್ರತಿಯೊಬ್ಬರೂ ಐದು ವರ್ಷದ ಅಧಿಕಾರವನ್ನ ಸಮನಾಗಿ ಹಂಚಿಕೊಳ್ಳಬೇಕೆಂದು ಸೂಚಿಸಿತ್ತು. ಅಷ್ಟೇ ಅಲ್ಲದೇ
ಅಧಿಕಾರ ಹಂಚಿಕೆ ಬಗ್ಗೆ ಸಾರ್ವಜನಿಕ ಚರ್ಚೆ ಮಾಡಕೂಡದೆಂದು ನೀಡಿದ ನಿರ್ದೇಶನ ಮಾಧ್ಯಮಗಳಲ್ಲಿ ಪ್ರಸಾರವಾಗಿ ಹಳತಾಗಿದೆ
ಆದರೂ ಸಚಿವ ಎಂ .ಬಿ. ಪಾಟೀಲರು ಸಿದ್ಧರಾಮಯ್ಯನವರೇ ಪೂರ್ಣಾವಧಿ ಸಿಎಂ ಎಂದೂ ಹೇಳಿಕೆ ನೀಡಿರುವುದು ವರದಿಯಾಗಿದೆ.
ಇದು ಪಕ್ಷದ ಸದಸ್ಯರು ಮತ್ತು ಪಕ್ಷಕ್ಕೆ ಬಿಟ್ಟ ವಿಚಾರ.ಆದರೆ
ರಾಜ್ಯದ ರಾಜಕೀಯದಲ್ಲಿ ಈಗತಾನೇ ಬಹಮತ ಪಡೆದು
ಬಂದ ಕಾಂಗ್ರೆಸ್ ಗೆದ್ದು ಬೀಗುತ್ತಿದ್ದಾಗಲೇ ವಿವಾದಾತ್ಮಕ ಹೇಳಿಕೆ ನೀಡಿದರೆ ವ್ಯಕ್ತಿಗಳ ಬಗ್ಗೆ
ಶಿಸ್ತಿನ ಬಗ್ಗೆ ಸಂದೇಹ ಬರುತ್ತದೆ.
ಈ ಬಗ್ಗೆ ಉಪಮುಖ್ಯಮಂತ್ರಿ
ಡಿ.ಕೆ.ಶಿವಕುಮಾರ್ ಮಾದ್ಯಮಗಳು ಪ್ರತಿಕ್ರಿಯೆ ಕೇಳಿದಾಗ “ನೋ ಕಾಮೆಂಟ್ಸ್ “
ಎಂದಿದ್ದಾರೆ.
Karnataka Congress ಆಡಳಿತಕ್ಕೆ ಬಂದಾಗ ಮುಂದಿನ ದಾರಿ ಸಾಧನೆ ಪ್ರತಿಯೊಬ್ಬರ
ಮುಂದಿರುತ್ತದೆ. ಅಂತಹ ಹೊಣೆ ಇದ್ದಾಗ ಪೂರ್ಣಾವಧಿ ,ಅರ್ಧಾವಧಿ ಇತ್ಯಾದಿ ಕಾಮೆಂಟ್ಸ್ ನೀಡುತ್ತಿದ್ದರೆ
ಪಕ್ಷದೊಳಗೆ, ಸಾರ್ವಜನಿಕರಲ್ಲಿ
ಯಾವಾವ ರೀತಿಯ ಭಾವನೆ ಉಂಟುಮಾಡುತ್ತದೆ ಎಂಬುದನ್ನು ಅವರು ಗಮನಿಸಬೇಕು ಎಂಬುದೇ
ಪರಿಣಿತರು ಹೇಳುವ ಮಾತು.
ಮತ್ತೊಮ್ಮೆ ಮಾಧ್ಯಮದವರಿಗೆ ಸಿಕ್ಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಯಾರು ಏನೇ ಹೇಳಲಿ ಹೈಕಮಾಂಡ್ ನೋಡಿಕೊಳ್ಳುತ್ತದೆ
ಎಂದು ಸ್ವಲ್ಪ ಖಾರವಾಗಿಯೇ ಹೇಳಿದ್ದಾರೆ.