Zero Traffic Facility ಸಾಗರದ ಗ್ರಾಮಾಂತರ ಪೋಲಿಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಹೇಮಂತ್ ರವರಿಗೆ ಸುಮುಖ ಸ್ಪೆಶಾಲಿಟಿ ಆಸ್ಪತ್ರೆಯಿಂದ ಶಿವಮೊಗ್ಗ ಎನ್‌ಹೆಚ್ ಆಸ್ಪತ್ರೆಗೆ ಖಾಸಗಿ ಅಂಬುಲೆನ್ಸ್ ಹಾಗೂ ಪೊಲೀಸ್ ಇಲಾಖೆಯ ಹೈವೇ ಪೆಟ್ರೋಲಿಯಂ ವಾಹನದ ಸಹಕಾರದೊಂದಿಗೆ ಜೀರೋ ಟ್ರಾಫಿಕ್ ಮೂಲಕ ಶಿಫ್ಟ್ ಮಾಡಿರುವ ಘಟನೆ ಭಾನುವಾರ ನಡೆದಿದೆ .
ಶಿವಮೊಗ್ಗ ಜಿಲ್ಲೆಯ ಸಾಗರ ಗ್ರಾಮಾಂತರ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಹೇಮಂತ್ ಕರ್ತವ್ಯ ನಿರ್ವಹಿಸುತ್ತಿದ್ದರು. ಹೇಮಂತ್ ಎಂದಿನಂತೆ ಶನಿವಾರ ರಾತ್ರಿ ಕರ್ತವ್ಯ ಮುಗಿಸಿಕೊಂಡು ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಹೇಮಂತ್ ರವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಹೇಮಂತ್ ಸ್ನೇಹಿತರು ಹಾಗೂ ಕುಟುಂಬಸ್ಥರು ಸಾಗರದ ಚಾಮರಾಜಪೇಟೆಯಲ್ಲಿರುವ ಸುಮುಖ ಸ್ಪೆಶಾಲಿಟಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆಸ್ಪತ್ರೆಯ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಎನ್ಎಚ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದ್ದಾರೆ. ಮಾಹಿತಿ ಪಡೆದ ತಕ್ಷಣ ಸಾಗರ ಉಪ ವಿಭಾಗ ಪೊಲೀಸ ಅಧೀಕ್ಷಕರು ಎ.ಎಸ್.ಪಿ ರೋಹನ್ ಜಗದೀಶ್ ಐಪಿಎಸ್ ರವರು ಪೋಲಿಸ್ ಇಲಾಖೆಯ ಹೈವೇ ಪೆಟ್ರೋಲಿಯಂ ವಾಹನದ ಚಾಲಕರಿಗೆ ಮಾಹಿತಿ ನೀಡಿದ್ದಾರೆ, ತಕ್ಷಣ ಆಸ್ಪತ್ರೆಯ ಬಳಿ ಆಗಮಿಸಿದ ಹೈವೇ ಪೆಟ್ರೋಲಿಯಂ ವಾಹನ ಚಾಲಕ ಅಬ್ದುಲ್ ಸುಕುರ್, ASI Zero Traffic Facility ಮಂಜುನಾಥ್, PSI ನಾರಾಯಣ ಮಧುಗಿರಿ ರವರು ತಮ್ಮ ವಾಹನದ ಸಹಕಾರದೊಂದಿಗೆ ಖಾಸಗಿ ಅಂಬುಲೆನ್ಸ್ ಮೂಲಕ ಕೇವಲ 45 ನಿಮಿಷದಲ್ಲಿ ಸಾಗರದಿಂದ ಶಿವಮೊಗ್ಗದ ಎನ್ ಹೆಚ್ ಆಸ್ಪತ್ರೆಗೆ ಹೇಮಂತ್ ರವರಿಗೆ ದಾಖಲಿಸಿದ್ದಾರೆ.
ಎನ್ ಹೆಚ್ ಆಸ್ಪತ್ರೆಯ ವೈದ್ಯರು ತಕ್ಷಣ ಹೇಮಂತ್ ರವರಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಹೇಮಂತ್ ಆರೋಗ್ಯವಾಗಿ ಇದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.