Shivamogga Karnataka Sangha ಸಾಹಿತ್ಯ ಜೀವನ ದೃಷ್ಟಿ ರೂಪಿಸಿಕೊಳ್ಳಬೇಕಾದರೆ, ಸಾಹಿತಿಯು ಹೊಂದಿರುವ ಸಾಹಿತ್ಯಕ ದೃಷ್ಟಿ ಮುಖ್ಯವಾಗಿರುತ್ತದೆ. ಸಾಹಿತ್ಯಕ ದೃಷ್ಟಿ ಬೇರೆಯಾಗಿರುತ್ತದೆ. ಸಹಜವಾದ ಮನುಷ್ಯನ ದೃಷ್ಟಿಯ ಬೇರೆಯಾಗಿರುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಕೋಡಂಗಲ್ಲಿನ ಖ್ಯಾತ ಸಾಹಿತಿಗಳಾದ ಶ್ರೀ. ಅರವಿಂದ ಚೊಕ್ಕಾಡಿಯವರು ಹೇಳಿದರು.
ಶಿವಮೊಗ್ಗದ ಕರ್ನಾಟಕ ಸಂಘ ಭವನದಲ್ಲಿ ಆಯೋಜಿಸಿದ ತಿಂಗಳ ಅತಿಥಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಸಾಹಿತ್ಯ ಮತ್ತು ಜೀವನ ದೃಷ್ಟಿ ವಿಷಯದ ಕುರಿತು ಮಾತನಾಡಿದರು. ಜೀವನ ವಿಧಾನ ಎಂಬುದು ಜೀವನ ದೃಷ್ಟಿಯನ್ನು ಅವಲಂಬಿಸಿರುತ್ತದೆ ಎಂದರು.
Shivamogga Karnataka Sangha ಈ ಸಂದರ್ಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಎಂ ಎನ್ ಸುಂದರ್ ರಾಜ್, ಕರ್ನಾಟಕ ಸಂಘದ ಕಾರ್ಯದರ್ಶಿಗಳಾದ ಪ್ರೊ. ಎಂ ಆಶಾಲತಾ, ಸಾಹಿತ್ಯಾಸ್ತಕರು ಉಪಸ್ಥಿತರಿದ್ದರು.