Sunday, December 7, 2025
Sunday, December 7, 2025

Kateel Ashok Pai Memorial College ಮಾನಸಿಕ ಒತ್ತಡವುಳ್ಳ ವಿವಿಧ ವ್ಯಕ್ತಿಗಳೊಂದಿಗೆ ವ್ಯವಹರಿಸುವ ಮಾನಸಿಕ ಸ್ಥೈರ್ಯ ನೀಡುವುದೇ ಕ್ಲಿನಿಕಲ್ ಸೈಕಾಲಜಿ

Date:

Kateel Ashok Pai Memorial College ನಮ್ಮನ್ನು ನಾವು ಬ್ರಾಂಡ್ ಗಳಾಗಿ ಪರಿವರ್ತಿಸಿಕೊಳ್ಳಬೇಕು. ಆತ್ಮವಿಶ್ವಾಸದೊಂದಿಗೆ ಕಾಯಕವನ್ನು ನಿರ್ವಹಿಸಬೇಕು ಎಂದು ಹೈದರಾಬಾದ್ ನ ಐಸಿಎಫ್ ಎಐ ಬಿಸಿನೆಸ್ ಸ್ಕೂಲ್ ನ ಪ್ರಾಧ್ಯಾಪಕರಾದ ಕೆ ಎನ್. ವಿಶ್ವನಾಥನ್ ಅವರು ಅಭಿಪ್ರಾಯಪಟ್ಟರು.

ಶಿವಮೊಗ್ಗ ನಗರದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಮತ್ತು ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಸಹಯೋಗದಲ್ಲಿ ಎಂ.
ಫಿಲ್ ಕ್ಲಿನಿಕಲ್ ಸೈಕಾಲಜಿಯ ಉದ್ಘಾಟನಾ ಸಮಾರಂಭ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಂ.ಫಿಲ್ ಎಂಬುವುದು ತುಂಬಾ ವಿಶೇಷವಾದ ಕೋರ್ಸ್. ಜನರಿಗೆ ಸೈಕಾಲಜಿಕಲ್ ಸಮಸ್ಯೆಗಳು ಇರುತ್ತವೆ. ಕ್ಲಿನಿಕಲ್ ಸೈಕಾಲಜಿಯಲ್ಲಿ ನಾವು ವಿವಿಧ ಮಾನಸಿಕ ಒತ್ತಡಯುಳ್ಳ ವ್ಯಕ್ತಿಗಳೊಂದಿಗೆ ವ್ಯವಹರಿಸುತ್ತೇವೆ. ಆದ್ದರಿಂದ ನಮ್ಮ ಮಾನಸಿಕ ಸ್ಥೈರ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಕ್ಕೆ ಸಂಯೋಜಿತವಾಗಿರುವ ಈ ಸಂಸ್ಥೆಯು ಭಾರತೀಯ ಪುನರ್ವಸತಿ ಮಂಡಳಿಯಿಂದ ಅನುಮೋದನೆಯನ್ನು ಪಡೆದುಕೊಂಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದು ಉದ್ಘಾಟನಾ ಭಾಷಣದಲ್ಲಿ‌ ತಿಳಿಸಿದರು.

Kateel Ashok Pai Memorial College ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ,ಅಲೈಡ್ ಹೆಲ್ತ್ ಸೈನ್ಸಸ್ , ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಡೀನ್ , ಬೆಂಗಳೂರಿನ ಪದ್ಮಶ್ರೀ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ನಿರ್ದೇಶಕರಾಗಿರುವ ಪ್ರೊ. ರಾಜೇಶ್ ಶೆಣೈ ಅವರು ಮಾತನಾಡಿ, ಮನಶಾಸ್ತ್ರ ಎನ್ನುವುದು ವಿವಿಧ ಮನಸ್ಸುಗಳೊಂದಿಗೆ ಸಂವಹನ ನಡೆಸಬೇಕಾಗುತ್ತದೆ. ಕ್ಲಿನಿಕಲ್ ಸೈಕಾಲಜಿಯಲ್ಲಿ ಎಂ.ಫಿಲ್ ಮಾಡುವುದು ಎಂದರೆ ಸಾಹಸವೇ ಸರಿ.. ಇತ್ತೀಚೆಗೆ ಪ್ರತಿ ವರ್ಷವೂ ಪಠ್ಯಕ್ರಮಗಳು ಬದಲಾಗುತ್ತಲೇ ಇರುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಹೆದರಿಕೊಳ್ಳುವ ಅಗತ್ಯವಿಲ್ಲ . ಪಠ್ಯಕ್ರಮದಲ್ಲಿ ನವೀಕರಣ ಉತ್ತಮ ಬದಲಾವಣೆಗಾಗಿಯೇ ಆಗಿರುತ್ತದೆ ಎಂದು ತಿಳಿಸಿದರು.

ನಂತರದಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಅವರು ಮಾತನಾಡಿ, ಕಾಲೇಜಿನಲ್ಲಿ ಕ್ಲಿನಿಕಲ್ ಸೈಕಾಲಜಿ ವಿಭಾಗ ನಡೆದು ಬಂದ ಹಾದಿ, ಒಂದು ಸಂಸ್ಥೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಾದರೆ ಅಲ್ಲಿರುವ ಬೋಧಕ ಬೋಧಕೇತರ ಸಿಬ್ಬಂದಿಗಳ ಶ್ರಮದ ಕುರಿತು ತಿಳಿಸಿದರು.

ಈ ಸಂದರ್ಭದಲ್ಲಿ ಮಾನಸ ಟ್ರಸ್ಟ್ ನ ನಿರ್ದೇಶಕರಾದ ರಜನಿ ಪೈ, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಬೋಧಕ, ಬೋಧಕೇತರು, ಎಂ.ಫಿಲ್ ವಿಭಾಗದ ಮುಖ್ಯಸ್ಥರಾದ ಪುಷ್ಪಲತಾ, ಮನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಅರ್ಚನಾ, ಪ್ರಾಧ್ಯಾಪಕರಾದ ಶ್ರಿದೇವಿ, ಅನನ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ನಿವೃತ್ತ ಅಧ್ಯಾಪಕರಿಗೆ ಪಂಚಣಿ ಪರಿಷ್ಕರಣೆಯಿಂದ ಅನ್ಯಾಯ, ಸರಿಪಡಿಸಲು ಆಗ್ರಹ

ನಿವೃತ್ತ ಅಧ್ಯಾಪಕರಿಗೆ ಆಗುವ ಅನ್ಯಾಯವನ್ನು ಸರಿಪಡಿಸುವಂತೆ ಜಿಲ್ಲಾ ವಿಶ್ವವಿದ್ಯಾಲಯ ಮತ್ತು ಪದವಿ...

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...