My Life, My Swachh Nagar program ಶಿವಮೊಗ್ಗ,ಕೇಂದ್ರ ವಸತಿ ಮತ್ತುನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಛ ಭಾರತ್ ಮಿಷನ್ ನಗರ 2.0 ಯೋಜನೆಯಡಿ ಹೆಚ್ಚಿನ ರೀತಿಯಲ್ಲಿ ರಾಷ್ಟ್ರಮಟ್ಟದಲ್ಲಿ ಪರಿಣಾಮ ಬೀರುವ ಮೇರಾ ಸ್ವಚ್ಛ ಶೆಹರ್ ಅಭಿಯಾನದ ಅಂಗವಾಗಿ ಶಿರಾಳಕೊಪ್ಪ ಪುರಸಭೆ ವತಿಯಿಂದ ಮೇ-20 ರಿಂದ ಜೂನ್ 5 ರವರೆಗೆ “ನನ್ನ ಲೈಫ್, ನನ್ನ ಸ್ವಚ್ಛ ನಗರ” ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಶಿರಾಳಕೊಪ್ಪ ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ತಮ್ಮ ಮನೆಯಲ್ಲಿ ಸಂಗ್ರಹಿಸಿದ/ ಶೇಖರಿಸಿದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಆಟಿಕೆ ವಸ್ತುಗಳು, ಬಳಸಿದ ಬಟ್ಟೆಗಳು, ದಿನಪತ್ರಿಕೆಗಳು, ಹಳೆಯ ಪುಸ್ತಕ ಹಾಗೂ ಎಲೆಕ್ಟಾçನಿಕ್ ವಸ್ತುಗಳಂತಹ 6 ಬಗೆಯ ನವೀಕರಿಸಿ ಮರು ಬಳಸಬಹುದಾದಂತಹ ವಸ್ತುಗಳನ್ನು ನೀಡುವ ಸಲುವಾಗಿ ಪುರಸಭೆ ಕಚೇರಿ ಹಿಂಭಾಗ ಮತ್ತು ತಡಗಣಿಯಲ್ಲಿರುವ ಸ್ವಚ್ಛ ಸಂಕೀರ್ಣವನ್ನು Reduce,Reuse,Recycle ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
My Life, My Swachh Nagar program ಶಿರಾಳಕೊಪ್ಪ ಪುರಸಭೆ ವ್ಯಾಪ್ತಿಯಲ್ಲಿನ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ 6 ಬಗೆಯ ನವೀಕರಿಸಿ ಮರು ಬಳಸಬಹುದಾದಂತಹ ವಸ್ತುಗಳನ್ನು RRR ಕೇಂದ್ರಗಳಲ್ಲಿ ನೀಡುವ ಮೂಲಕ ತ್ಯಾಜ್ಯ ದೇಣಿಗೆದಾರರಾಗಿ ತ್ಯಾಜ್ಯ ನಿರ್ವಹಣೆ ನಿಟ್ಟಿನಲ್ಲಿ ಸುಸ್ಥಿರ ಜೀವನ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ “ನನ್ನ ಲೈಫ್, ನನ್ನ ಸ್ವಚ್ಛ ನಗರ” ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸುವಂತೆ ಶಿರಾಳಕೊಪ್ಪ ಪುರಸಭೆಯ ಮುಖ್ಯಾಧಿಕಾರಿ ಹಾಗೂ ಆಡಳಿತಾಧಿಕಾರಿಗಳು ತಿಳಿಸಿರುತ್ತಾರೆ.
