Karnataka Assembly Election 2023 ಕರ್ನಾಟಕ ರಾಜ್ಯದ ಶಾಸನ ಸಭೆಗೆ 2023ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಜನಾಭಿಪ್ರಾಯವನ್ನು ಪಡೆಯುವ ಸಲುವಾಗಿ ನಾನು ಹಾಗೂ ಈಶ್ವರ ದೈತೋಟ 90 ಕ್ಷೇತ್ರಗಳಲ್ಲಿ ಸಮೀಕ್ಷೆಯನ್ನು ಮಾಡಿದಾಗ ನಮಗೆ ಕಂಡು ಬಂದ ವಿಷಯವೆಂದರೆ ಆಡಳಿತ ವ್ಯವಸ್ಥೆ ವಿರುದ್ಧ ಜನಾಕ್ರೋಶ. ಸರ್ಕಾರದ ಭ್ರಷ್ಟಾಚಾರದ ಬಗ್ಗೆಯೂ ಜನ ತೀವ್ರ ಅಸಮಾಧಾನ ಹೊಂದಿದ್ದಾರೆ ಎಂದು ಹಿರಿಯ ಪತ್ರಕರ್ತರಾದ ಶೇಷಚಂದ್ರಿಕಾ ಅವರು ಹೇಳಿದ್ದಾರೆ.
ಡಾ. ಕೆ ಎಸ್ ಶರ್ಮಾ ಅವರ ತಂದೆ ದಿ. ಎಂಬಾರ್ ಭಾಷ್ಯಾಚಾರ್ಯ ಅವರ 38ನೇ ಶ್ರದ್ಧ ಸಮರ್ಪಣಾ ದಿನದ ಅಂಗವಾಗಿ ವಿಚಾರಣಾ ಸಂಕೀರ್ಣವನ್ನು ಆಯೋಜಿಸಲಾಗಿತ್ತು.
ಕರ್ನಾಟಕ 2023ರ ಚುನಾವಣೆ ಫಲಿತಾಂಶ, ಪರಿಣಾಮ ಹಾಗೂ ಪ್ರಭಾವದ ವಿಷಯದ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ಮಾತನಾಡಿದರು.
Karnataka Assembly Election 2023 ಕಾಂಗ್ರೆಸ್ ಪಕ್ಷ ಘೋಷಿಸಿದ ಐದು ಭರವಸೆಗಳು ಬಡ ಜನರಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ಬಲವನ್ನ ಮೂಡಿಸಿತ್ತು. ಈ ಎಲ್ಲಾ ಅಂಶಗಳು ಕಾಂಗ್ರೆಸ್ ಪ್ರಚಂಡ ಬಹುಮತವನ್ನು ಪಡೆಯಲು ಸಹಕಾರಿಯಾಯಿತು ಎಂದು ಹೇಳಿದರು.