Karnataka CM News ಚಿಕ್ಕಮಗಳೂರು, ರಾಜ್ಯದ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಸಿದ್ದರಾಮಯ್ಯನವರು ಅಹಿಂದ ಹಾಗೂ ದಲಿತಪರ ನಾಯಕ ಎಂದು ಹೇಳಿಕೊಳ್ಳುವುದಾದರೆ ಮೂಲ ದಲಿತ ನಾಯಕರು ಅಥವಾ ಅಲ್ಪಸಂಖ್ಯಾ ತರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಗೊಳಿಸಬೇಕು ಎಂದು ದಸಂಸ (ಪ್ರೊ. ಕೃಷ್ಣಪ್ಪ ಸ್ಥಾಪಿತ ಬಣ) ಜಿಲ್ಲಾ ಸಂಚಾಲಕ ಕಬ್ಬಿಗೆರೆ ಮೋಹನ್‌ಕುಮಾರ್ ಒತ್ತಾಯಿಸಿದ್ದಾರೆ.
ಈ ಸಂಬಂಧ ತಮ್ಮ ಹೇಳಿಕೆಯಲ್ಲಿ ತಿಳಿಸಿರುವ ಅವರು ಕಾಂಗ್ರೆಸ್ ಪಕ್ಷ ಹಾಗೂ ಸಿದ್ದರಾಮಯ್ಯನವರು ದಲಿತರು ಹಾಗೂ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಹೊಂದಿದ್ದರೆ ಪಕ್ಷದಲ್ಲಿರುವ ಡಾ.ಜಿ.ಪರಮೇಶ್ವರ್, ಕೆ.ಹೆಚ್. ಮುನಿಯಪ್ಪ ಅಥವಾ ಅಲ್ಪಸಂಖ್ಯಾತರಲ್ಲಿ ಜಮೀರ್ ಅಹ್ಮದ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದರೆ ಮಾತ್ರ ಸಿದ್ದರಾಮಯ್ಯ ಅವರನ್ನು ದಲಿತರಪರ ಹೋರಾಟಗಾರ ಎಂದು ನಂಬಲು ಸಾಧ್ಯ ಎಂದಿದ್ದಾರೆ.
ಕಳೆದ ಕಾಂಗ್ರೆಸ್‌ನ ಹಿಂದಿನ ಸರ್ಕಾರದಲ್ಲಿ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಸ್ಥಾನವನ್ನು ಸಿದ್ದರಾಮಯ್ಯ ವಹಿಸಿಕೊಂಡಿದ್ದರು. ಇದೀಗ ಅಹಿಂದಾ ಹಾಗೂ ದಲಿತಪರ ಹೋರಾಟಗಾರ ಎನ್ನುವುದಾದರೆ ಪಕ್ಷದಲ್ಲಿ ಮೊದಲಿಂದಲೂ ದುಡಿದಿರುವ ದಲಿತ ನಾಯಕರಿಗೆ ಸ್ಥಾನ ನೀಡಲಿ. ದಲಿತರ ಅತ್ಯಧಿಕ ಮತಗಳಿಂದ ರಾಜ್ಯದಲ್ಲಿ ಅಧಿಕಾರ ಪಡೆದುಕೊಂಡಿರುವ ಕಾಂಗ್ರೆಸ್ ಪಕ್ಷವು ತಮ್ಮಲ್ಲಿರುವ ಮೂಲ ದಲಿತ ನಾಯಕರನ್ನು ಮುಖ್ಯಮಂತ್ರಿ ಮಾಡಲು ಯೋಚಿಸುವುದೇಕೆ ಎಂದು ಪ್ರಶ್ನಿಸಿದ್ದಾರೆ.
Karnataka CM News ಇತರೆ ಪಕ್ಷದಿಂದ ವಲಸೆ ಬಂದಿರುವವರಿಗಿಂತ ಕಾಂಗ್ರೆಸ್‌ನಲ್ಲೇ ಹಲವಾರು ವರ್ಷಗಳಿಂದ ಪಕ್ಷಸೇವೆಯಲ್ಲಿ ತೊಡಗಿರುವ ಮುಖಂಡರುಗಳು, ದಲಿತರು ಹಾಗೂ ಅಲ್ಪಸಂಖ್ಯಾತರಿಗೆ ಸಿ.ಎಂ. ಸ್ಥಾನ ನೀಡಿದರೆ ಅಭಿವೃದ್ದಿ ಸಾಧಿ ಸಲು ಸಾಧ್ಯ. ಆ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವು ದಲಿತರು ಅಥವಾ ಅಲ್ಪಸಂಖ್ಯಾತರ ಬಗ್ಗೆ ಕಿಂಚಿತ್ತು ಕಾಳಜಿ ಹೊಂದಿದ್ದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ನೀಡಿ ಮುನ್ನೆಡೆಸಬೇಕು ಎಂದು ಆಗ್ರಹಿಸಿದ್ದಾರೆ.