The Kerala Story Review ದಿ ಕೇರಳ ಸ್ಟೋರಿ ಸಿನಿಮಾ ದೇಶಾದ್ಯಂತ ತೆರೆಕಂಡಿದೆ. ಸುದೀಪ್ತೋ ಸೇನ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ನಟಿ ಅದಾ ಶರ್ಮಾ ಅವರು ಕಾಣಿಸಿಕೊಂಡಿದ್ದಾರೆ. ದಿ ಕೇರಳ ಸ್ಟೋರಿ ಮೇ 5 ರಂದು ಬಿಡುಗಡೆಯಾಗಿದೆ. ಈ ಚಿತ್ರದ ಟೀಸರ್ ಬಿಡುಗಡೆಯಾದಾಗಲೇ ಈ ಸಿನಿಮಾದ ಬಗ್ಗೆ ಕೌತುಕ ಮೂಡಿತ್ತು. ಈ ಸಿನಿಮಾಗೆ ವಿಪುಲ್ ಅಮೃತ್ ಲಾಲ್ ಷಾ ಅವರು ಬಂಡವಾಳ ಹೂಡಿದ್ದಾರೆ. ಈ ಸಿನಿಮಾ ಹಿಂದಿ ಮಾತ್ರವಲ್ಲದೆ ತೆಲುಗು, ಮಲಯಾಳಂ, ತಮಿಳು ಭಾಷೆಗಳಲ್ಲಿ ತೆರೆಕಂಡಿದೆ. ದಿ ಕೇರಳ ಸ್ಟೋರಿ ಭಯೋತ್ಪಾದನೆ, ಐ ಎಸ್ ಐ ಎಸ್ ಸಂಘಟನೆ, ಮತಾಂತರ, ಲವ್ ಜಿಹಾದ್ ವಿಚಾರಗಳ ಸುತ್ತಲೇ ಹೆಣೆದಿರುವ ಕಥೆಯಾಗಿದೆ. ಈ ಸಿನಿಮಾ ಕಥೆಯ ಬಗ್ಗೆ ಸಾಕಷ್ಟು ವಾದ ವಿವಾದಗಳು ನಡೆಯುತ್ತಿದೆ.
ಈ ಸಿನಿಮಾದಲ್ಲಿ ಕೇರಳದ ಮೂರು ಹೆಣ್ಣು ಮಕ್ಕಳ ಕಥೆಯನ್ನು ಹೇಳಲಾಗಿದೆ. ಈ ಕಥೆ ನಿಜವಾಗಿಯೂ ನಡೆದಿರುವ ಕಥೆ ಎಂದು ಚಿತ್ರತಂಡವು ಹೇಳಿಕೊಂಡಿದೆ.
ಕಾಸರಗೋಡಿನ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಶಾಲಿನಿ, ಗೀತಾಂಜಲಿ ಮತ್ತು ನಿಮ್ಹಾ ಅವರ ಬದುಕಿನಲ್ಲಿ ನಡೆದ ಕಥೆಯನ್ನು ಇಲ್ಲಿ ಹೇಳಲಾಗಿದೆ. ಈ ಮೂರು ಹೆಣ್ಣು ಮಕ್ಕಳು ಅನುಭವಿಸುವ ಯಾತನೆಯ ಕುರಿತು ಈ ಸಿನಿಮಾದಲ್ಲಿ ಗಾಢವಾಗಿ ತೋರಿಸಲಾಗಿದೆ.
ತಾಂತ್ರಿಕವಾಗಿ ಉತ್ತಮವಾಗಿರುವ ಡಿ ಕೇರಳ ಸ್ಟೋರಿಯಲ್ಲಿ ಛಾಯಾಗ್ರಹಣ ಮೂಡಿಬಂದಿದೆ. ಅಫ್ಘಾನಿಸ್ತಾನದ ಗಡಿಯಲ್ಲಿ ಚಿತ್ರೀಕರಣ ಉತ್ತಮವಾಗಿ ಮೂಡಿಬಂದಿದೆ. ಡಿ ಕೇರಳ ಸ್ಟೋರಿ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಕೇರಳದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.
The Kerala Story Review ಕೇರಳದ ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಮೇಲೆ ಕಂಡಿದೆ. ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಪ್ರಮುಖವಾಗಿ ಶಾಲಿನಿ ಉನ್ನಿ ಕೃಷ್ಣನ್ ಎಂಬ ಯುವತಿ ಫಾತಿಮಾ ಆದ ಕತೆಯಾಗಿದೆ. ಕೇರಳದ ಶಾಲಿನಿ ಎಂಬ ಮುದ್ದು ಹುಡುಗಿ ಓದಲು ಕಾಸರಗೋಡಿನ ಕಾಲೇಜಿಗೆ ಸೇರುತ್ತಾರೆ. ಅಲ್ಲಿ ಇರುಳು ಹಾಸ್ಟೆಲ್ ಗೆ ಸೇರಿಕೊಳ್ಳುತ್ತಾಳೆ. ಆ ಹಾಸ್ಟೆಲ್ ನಲ್ಲಿ ಆಕೆಗೆ ಹೊಸ ಸ್ನೇಹಿತರು ಪರಿಚಯವಾಗುತ್ತಾರೆ. ಆ ಸ್ನೇಹಿತರಲ್ಲಿ ಒಬ್ಬಳು ಹಿಂದೂ, ಇನ್ನೊಬ್ಬಳು ಕ್ರಿಶ್ಚಿಯನ್, ಮತ್ತುಗಳು ಮುಸ್ಲಿಂ. ಮುಸ್ಲಿಂ ಹುಡುಗಿ ಹಿಂದೂ ಹುಡುಗಿಗೆ ಇಸ್ಲಾಂ ಧರ್ಮ ತುಂಬಿ ಮತಾಂತರಗೊಳ್ಳುವಂತೆ ಮಾಡುವ ಸ್ಟೋರಿ ಇದಾಗಿದೆ…