Conference of Doctors ಕರ್ನಾಟಕ ರಾಜ್ಯ ವಂಶಪಾರಂಪರ್ಯ ನಾಟಿ ವೈದ್ಯ ಸಿದ್ದವೈದ್ಯ ಹಾಗೂ ಆಯುರ್ವೇದ ವೈದ್ಯರ ಕ್ಷೇಮಾಭಿವೃದ್ದಿ ಸಂಘ ಬೆಂಗಳೂರು ಹಾಗೂ ಆಯುರ್ವೇದ ವೈದ್ಯರ ಮಹಾಸಭಾ ಸಂಯುಕ್ತ ಆಶ್ರಯದಲ್ಲಿ ಮೇ .20 ರಂದು ಎನ್.ಆರ್.ಪುರ ಅಗ್ರಹಾರ ಉಮಾ ಮಹೇಶ್ವರ ಸಭಾಭವನದಲ್ಲಿ ಪಾರಂಪರಿಕ ವೈದ್ಯರ ಅಭಿವೃದ್ದಿಯ ಬೆಳವಣಿಗೆ ಸಮ್ಮೇಳನ ನಡೆಯಲಿದೆ.
ಹರಿಹರ ಪುರದ ಶ್ರೀ ಸ್ವಯಂ ಪ್ರಕಾಶ್ ಸಚ್ಚಿದಾನಂದ ಸರಸ್ವತಿ ಮಹಾ ಸ್ವಾಮಿಗಳು ಡಾಕ್ಟರ್ ಕೌನ್ಸಿಲ್ ಉದ್ಘಾಟಿಸಲಿದ್ದು, ನಾಟಿ ವೈದ್ಯರ ವೆಬ್‌ಸೈಟ್ ಹಾಗೂ ವೈದ್ಯ ಪುಸ್ತಕವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಲಿದ್ದಾರೆ.
ಸರ್ಕಾರದ ಮುಖ್ಯ ಕಾರ‍್ಯದರ್ಶಿ ವಂದಿತಾ ಶರ್ಮಾ ಹಾಗೂ ರಾಜೇಗೌಡ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
Conference of Doctors ಈ ಕಾರ್ಯಕ್ರಮದಲ್ಲಿ ಮತ್ತೂರಿನ ಡಾ.ಸನತ್‌ಕುಮಾರ್, ಎನ್.ಆರ್.ಪುರದ ಕೆ.ಅನಂತ ಶರ್ಮಾ, ಹೆಬ್ಬಾಳದ ಡಾ.ರವೀಂದ್ರ ಇವರುಗಳನ್ನು ಸನ್ಮಾನಿಸಲಾಗುತ್ತದೆ.