Sringeri Sharada Peetham ಶಾ. ಶಕೆ 1945, ಶೋಭಕೃತ್ ನಾಮ ಸಂವತ್ಸರ, ವೈಶಾಖ ಕೃಷ್ಣ ಷಷ್ಠಿ, ಗುರುವಾರ 11-5-2023ರ ಸಂಜೆ 5.30ಗೆ ಬೆಂಗಳೂರಿನ ಎನ್ಆರ್ ಕಾಲೋನಿ ರಾಮ ಮಂದಿರ ಶ್ರೀ ಮಜ್ಜಗದ್ಗು ರು ಕೂಡಲಿ ಶೃಂಗೇರಿ ಮಹಾ ಸ್ವಾಮಿಗಳಾದ ಶ್ರೀ ಶ್ರೀ ವಿದ್ಯಾ ಭಿನವ ವಿದ್ಯಾರಣ್ಯ ಭಾರತಿ ಮಹಸ್ವಾಮಿಗಳು ಹಾಗೂ ಶ್ರೀ ಕ್ಷೇತ್ರ ಹೆಬ್ಬಳ್ಳಿಯ ಸದ್ಗುರು ಶ್ರೀ ಬ್ರಹ್ಮ ಚೈತನ್ಯ ಮಹಾರಾಜ ಸ್ಥಿರಪಾದುಕಾ ಆಶ್ರಮದ ಪ. ಪೂ. ಶ್ರೀ. ದತ್ತಾವಾಧೂತ ಗುರುಗಳ ದಿವ್ಯ ಸಾನಿಧ್ಯದಲ್ಲಿ ಅನೇಕ ಭಕ್ತರೊಂದಿಗೆ ಸಭೆಯನ್ನು ನಡೆಸಲಾಯಿತು.
ಉಭಯ ಗುರುಗಳು ಉದಾರಾಜ್ಞೆಯಂತೆ ಶ್ರೀ ದತ್ತರಾಜ ದೇಶಪಾಂಡೆ ಎಂಬ ನೈಷ್ಟಿಕ ಬ್ರಹ್ಮಚಾರಿಗಳನ್ನು ಶ್ರೀ ಕೂಡಲಿ ಶೃಂಗೇರಿ ಪೀಠಕ್ಕೆ ಉತ್ತರಾಧಿಕಾರಿಗಳನ್ನಾಗಿ ನೇಮಿಸಬೇಕೆಂದು ಸಭೆಯಲ್ಲಿ ಹೇಳಲಾಯಿತು.
ಈ ಸಭೆಯಲ್ಲಿ ಮೇ 22ರಂದು ಶುಭ ಮುಹೂರ್ತದಲ್ಲಿ ಶ್ರೀ ಕ್ಷೇತ್ರ ಕೂಡಲಿಯಲ್ಲಿ ಸನ್ಯಾಸಾಶ್ರಮ ಈಕಾರ ಸಮಾರಂಭ ನೆರವೇರಿಸಲು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಮಜ್ಜಗದ್ಗುರು ಕಾಂಚಿ ಕಾಮಕೋಟಿ ಪೀಠದ ವತಿಯಿಂದ ಪ್ರತಿನಿಧಿಗಳು ಆಗಮಿಸಿದ್ದು, ಶ್ರೀ ಶ್ರೀ ಜಗದ್ಗುರು ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮಿಗಳ ಆಶೀರ್ವಾದ ಹಾಗೂ ಅನುಮೋದನೆ ಇರುವುದೆಂದು ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಅದರ ಅಧ್ಯಕ್ಷರಾದ ಶ್ರೀ ಅಶೋಕ್ ಹಾರನಹಳ್ಳಿ ಅವರು ಬ್ರಾಹ್ಮಣ ಮಹಾಸಭಾ ಈ ಕಾರ್ಯಕ್ರಮಕ್ಕೆ ತಮ್ಮ ಅನುಮೋದನೆಯನ್ನು ತಿಳಿಸಿದ್ದಾರೆ.
ಈ ಬಗ್ಗೆ ಪ್ರಮೋದ ಮುತಾಲಿಕ ಇವರು ಸಹ ತಮ್ಮ ಅನುಮೋದನೆಯನ್ನು ತಿಳಿಸಿದ್ದಾರೆ. ಎಲ್ಲಾ ಭಕ್ತಾದಿಗಳು ಈ ಸದರಿ ಕಾರ್ಯಕ್ಕೆ ತಮ್ಮೆಲ್ಲರ ತನು ಮನ ಧನಗಳೊಂದಿಗೆ ಸದ್ಗುರು ಪರಂಪರಾ ಕಾರ್ಯಕ್ಕೆ ಕೈಜೋಡಿಸುವುದಾಗಿ ಎಲ್ಲರೂ ಸಹ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
Sringeri Sharada Peetham ಸದರಿ ಸಂಪೂರ್ಣ ಅಂಶಗಳನ್ನು ಬ್ರಹ್ಮಚಾರಿಗಳಾದ ಶ್ರೀ ದತ್ತರಾಜ ದೇಶಪಾಂಡೆ ಇವರಲ್ಲಿ ಪ್ರಸ್ತಾಪಿಸಿದಾಗ ಸದರಿಯವರು ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ ತಮ್ಮ ಆತ್ಮ ಸಂತೋಷದಿಂದ ಸಭೆಯಲ್ಲಿ ತಮ್ಮ ಒಪ್ಪಿಗೆಯನ್ನು ಸೂಚಿಸಿದ್ದಾರೆ.