Congress Karnataka ಜನ ಬುದ್ಧಿ ಇಲ್ಲದೇ ಕಾಂಗ್ರೆಸ್ ಪಕ್ಷಕ್ಕೆತ ನೀಡಿಲ್ಲ. ಇದು ಸ್ಫುಟವಾಗಿ ಕಾಣುವುದು ನಮ್ಮ ಗ್ರಾಮೀಣರಲ್ಲಿ.
ಗ್ರಾಮಕ್ಕೆ ಮೀಟರ್ ರೀಡರ್ ವಿದ್ಯುತ್ ಬಿಲ್ ನೀಡಲು ಹೋದಾಗ ಜನ ಬಿಲ್ ಬೇಡ ಎಂದು ತಿರಸ್ಕರಿಸಿದ್ದಾರೆ.
ಕೆಲವರು ಕಚೇರಿಗೆ ಫೋನ್ ಮಾಡಿ ವಿಚಾರಿಸಿದಾಗ ಸರ್ಕಾರದ ಆದೇಶ. ಇನ್ನೂ ಬಂದಿಲ ಎಂಬುದಾಗಿ ಗ್ರಾಹಕರಿಗೆ ಉತ್ತರ ಬಂದಿದೆಯಂತೆ.
ಚಿತ್ರದುರ್ಗ ಜಿಲ್ಲೆಯ ಜಾಲಿಕಟ್ಟೆಯಲ್ಲಿ ಮೀಟರ್ ರೀಡರ್ ಬಿಲ್ ನೀಡಲು ಹೋದಾಗ ಜನ ಅದನ್ನ ಸ್ವೀಕರಿಸಲು ನಿರಾಕರಿಸಿದ್ದಾರೆ.
ಜೂನ್ ಒಂದರಿಂದ
ವಿದ್ಯುತ್ ಬಿಲ್ ಕಟ್ಟಬೇಡಿ ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದನ್ನ ಗ್ರಾಮಸ್ಥರು ನೆನಪಿಸುತ್ತಾರೆ.
ಬೆಸ್ಕಾಂ ವಲಯಕ್ಕೆ ಸಂಬಂಧಿಸಿದ ಪ್ರದೇಶದಲ್ಲಿ ಗ್ರಾಮಸ್ಥರ ಪ್ರತಿರೋಧ ಈ ರೀತಿಯಲ್ಲಿ. ಕಂಡುಬಂದಿದೆ.
ಮೀಟರ್ ರೀಡರ್ಗೆ ಮೀಟರ್ ರಿಉಡಿಂಗ್ ನೋಡಲು ಮನೆಯವರು ದೈಹಿಕವಾಗಿ ಅಡ್ಡಪಡಿಸಿದ್ದಾರೆ.
ಡಿಕೆಶಿ ಅವರ ಭಾಷಣದ ಸಂಗ್ರಹಿತ ರೂಪವನ್ನ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವುದನ್ನ ಜನ ವೀಕ್ಷಿಸಿದ್ದಾರೆ.
ಕೋಲಾರ ಜಿಲ್ಲೆಯಲ್ಲಿಂದಲೂ
ಈ ತರಹ ಘಟನೆಗಳು ವರದಿಯಾಗಿವೆ.
ಬಂಗಾರಪೇಟೆ ತಾಲ್ಲೂಕಿನಲ್ಲಿ
ಜನ ಈಗಾಗಲೇ ಕಾಂಗ್ರೆಸ್ ಭರವಸೆ ನೀಡಿದೆ. ತಾವು ವಿದ್ಯುತ್ ಬಿಲ್ ಪಾವತಿ ಮಾಡುವುದಿಲ್ಲವೆಂದು ಹೇಳಿಕೆ ನೀಡುತ್ತಿದ್ದಾರೆ.
ಗೃಹಜ್ಯೋತಿ ಯೋಜನೆಗೆ ಈಗಾಗಲೇ ₹700 ಕೋಟಿ ಅಂದಾಜಿಸಲಾಗಿದೆಯಂತೆ.
ರಾಜ್ಯದಲ್ಲಿ 1.9 ಕೋಟಿ ಗೃಹ ಬಳಕೆದಾರರಿದ್ದಾರೆ.
ಈ ಸಂಖ್ಯೆಯ ಮನೆಗಳಿಗೆ 200 ಯೂನಿಟ್ ಲೆಕ್ಕಹಾಕಿದರೆ ತಿಂಗಳಿಗೆ 3.845 ಮಿಲಿಯನ್ ಯೂನಿಟ್ ಗಳಾಗುತ್ತದೆ. ಸದ್ಯದ ಏರಿಕೆ ದರದಂತರಲೆ ಪ್ರತೀ ಯೂನಿಟ್ ಗೆ
₹ 8.75 ನಂತೆ ಲೆಕ್ಕಹಾಕಿದರೆ ತಿಂಗಳಿಗೆ ₹3.387 ಕೋಟಿ ಆಗಲಿದೆ. ವಾರ್ಷಿಕವಾಗಿ ₹44.404 ಕೋಟಿ ಆಗಲಿದೆ. ಈಗಿರುವ ಮನೆಗಳ ಪೈಕಿ ಅರ್ಧದಷ್ಟು ಸಂಖ್ಯೆಯ ಮನೆಗಳಿಗೆ ರಿಯಾಯಿತಿ ನೀಡಿದ್ದಲ್ಲಿ ಒಟ್ಟು ವಾರ್ಷಿಕವಾಗಿ ₹20.000 ಕೋಟಿ ಆಗುತ್ತದೆ ಎಂದು ಅಧಿಕಾರಿಗಳು ಮುದ್ರಣ ಮಾಧ್ಯಮಕ್ಕೆ ತಮ್ಮ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.
ಚುನಾವಣೆಯ ಸಂದರ್ಭಗಳಲ್ಲಿ ಪ್ರಣಾಳಿಕ, ಭರವಸೆಗಳನ್ನ ಎಲ್ಲ ಪಕ್ಷಗಳೂ ನೀಡುತ್ತವೆ. ಜನರಿಗೆ ಅವುಗಳ ಬಗ್ಗೆ ಸಹಜವಾಗಿ ಆಸಕ್ತಿ ಮೂಡುತ್ತದೆ.
Congress Karnataka ನಮಗೆ ಆರ್ಥಿಕ ಹೊರೆ ತಗ್ಗುವುದಾದರೆ ಎಷ್ಟು ಹಿತ ಎಂದು ಯೋಚಿಸುತ್ತಾರೆ.
ಈಗಾಗಲೇ ಅಂತಹ ಒಂದು ಯೋಜನೆಯನ್ನ
ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪ ನೀಡಿ ಅಮರರಾಗಿದ್ದಾರೆ.
ಸಣ್ಣರೈತರಿಗೆ( ನೀರಾವರಿ ಪಂಪ್ ಸೆಟ್ 10 HP ವರೆಗೆ) ಸರ್ವಕಾಲವೂ ಉಚಿತ ವಿದ್ಯುತ್ ನೀಡಿದ ಅವರ ದಿಟ್ಟಕ್ರಮ ಇವತ್ತಿಗೂ ಪ್ರಶ್ನಾತೀತ.
ಈಗ ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳು ಅಕ್ಷರಷಃ ಈಡೇರಿದಲ್ಲಿ ಪಕ್ಷಕ್ಕೆ
ರಾಜ್ಯದ ಇತಿಹಾಸದಲ್ಲಿಯೇ
ಹೊಸ ಅಧ್ಯಾಯ ಬರೆದಂತಾಗುತ್ತದೆ.