Ayanur Manjunath ನಿರೀಕ್ಷೆಗೆ ವಿರುದ್ಧವಾಗಿ ಮತಗಳು ಬಂದಿದೆ. ಅತ್ಯಂತ ವಿನಯ ಪೂರ್ವಕವಾಗಿ ನಾನು ಸೋಲನ್ನ ಸ್ವೀಕರಿಸುತ್ತೇನೆ ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರು ನಿರೀಕ್ಷೆ ಮಾಡಿರೋದಷ್ಟು ಕಡಿಮೆ ಮತಗಳು ಬಂದಿದೆ. ಸೋಲಿನಿಂದ ವಿಚಲಿತನಾಗಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಜಾತಿ ಹೆಸರಿನಲ್ಲಿ, ಬಿಜೆಪಿಯವರು ಆಂಜನೇಯನನ್ನು ಮುಂದಿಟ್ಟುಕೊಂಡು, ಕೇರಳ ಸ್ಟೋರಿ ಚಿತ್ರದ ಮೂಲಕ ಮುಸ್ಲಿಮರ ಬಗ್ಗೆ ಭಯಸೃಷ್ಟಿಸಿ ಮತ ಸೆಳೆದಿದ್ದಾರೆ ಎಂದು ಹೇಳಿದ್ದಾರೆ.
ಸೋಲು ಗೆಲುವು ನನಗೆ ಹೊಸದಲ್ಲ. ಶಿವಮೊಗ್ಗ ನಗರಕ್ಕೆ ಒಳ್ಳೆಯದಾಗುವ ರೀತಿ ಕೆಲಸ ಮಾಡುವ ಎಲ್ಲರಿಗೂ ಸಹಕಾರ ನೀಡುತ್ತೇನೆ. ರಾಜಕೀಯವಾಗಿ ಇನ್ನೊಂದು ಗುರಿ ಮುಟ್ಟಿದ್ದೇವೆ ಎಂಬ ಭಾವನೆ ನನಗಿದೆ. ಆಡಳಿತ ವಿರೋಧಿ ಅಲೆ, ಕಾಂಗ್ರೆಸ್ನ ಭರವಸೆಗಳು ಜನರನ್ನು ಸೆಳೆದಿದೆ. ರಾಜ್ಯದಲ್ಲಿ ಬಿಜೆಪಿಗೆ ಬಹುದೊಡ್ಡ ಪೆಟ್ಟು ಬಿದ್ದಿದೆ. ಅಧಿಕಾರದಲ್ಲಿದ್ದರೆ ಏನು ಬೇಕಾದರೂ ಮಾಡಬಹುದು ಎನ್ನುತ್ತಿದ್ದವರನ್ನು, ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದ ಎಲ್ಲರನ್ನು ಜನತೆ ಮನೆಗೆ ಕಳುಹಿಸಿದ್ದಾರೆ. ಪ್ರಣಾಳಿಕೆಯಲ್ಲಿನ ಅಂಶಗಳನ್ನು ಕಾಂಗ್ರೆಸ್ ಪೂರೈಸಬೇಕು ಎಂದು ಹೇಳಿದ್ದಾರೆ.
Ayanur Manjunath ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಮಾಜಿ ಶಾಸಕ ಕೆ ಬಿ ಪ್ರಸನ್ನ ಕುಮಾರ್, ದೀಪಕ್ ಸಿಂಗ್ ಇನ್ನೂ ಮುಂತಾದ ಉಪಸ್ಥಿತರಿದ್ದರು.