ಬೆಂಗಳೂರಿನ ಶಾಂಗ್ರಿಲಾ ಹೊಟೆಲ್ ನಲ್ಲಿ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯುತ್ತಿದೆ.
ನೂತನ ಶಾಸಕರೆಲ್ಲಾ ಒಂದೆಡೆ ಸೇರಿದ್ದಾರೆ.
ಗೆದ್ದ ಶಾಸಕರ ಚಿತ್ತ ಸಚಿವ ಸ್ಥಾನದತ್ತ.ಆದರೆ ಸೀಎಂ ಪಟ್ಟ ಯಾರಿಗೆ ?ಅನಿಶ್ಚಿತ. ಈಗಾಗಲೇ ದೆಹಲಿಗೆ ಹಲವು
ಶಾಸಕರು ಖರ್ಗೆ ಅವರ ನಿವಾಸದ ಬಾಗಿಲು ತಟ್ಟಿದ್ದಾರೆ. ಮತ್ತೂ ಕೆಲವರು ಹಿರಿತನದ ತಮಗೇ ಸಚಿವ ಸ್ಥಾನ ಒಲಿದು ಬರುತ್ತದೆ ಎಂದು ತುಂಬು ವಿಶ್ವಾಸದಿಂದ ಬೀಗುತ್ತಿದ್ದಾರೆ. ಮೆಜಾರಿಟಿ ಬಂದ ಪಕ್ಷದಲ್ಲಿ ಇದೆಲ್ಲಾ ಮಾಮೂಲಿ ಸಂಗತಿ.
ಆದರೆ ಮಂತ್ರಿಗಿರಿ ಆಕಾಂಕ್ಷಿಗಳು ಕಡಿಮೆಯೇನಿಲ್ಲ.
ಮತ್ತೊಂದು ಮುಖ್ಯ ವಿಚಾರವೆಂದರೆ ಡಿಸಿಎಂ ಸ್ಥಾನಗಳ ರಚನೆ. ಅಲ್ಲೂ ಒಂದಿಷ್ಟು ಅಸಮಾಧಾನ ಹೊಗೆಯಾಡುತ್ತದೆ.
ಜಾತಿ, ವರ್ಗಗಳ ಸಮಸ್ಯೆ ಕಾಡುತ್ತದೆ.
ಈಗಾಗಲೇ ಒಕ್ಕಲಿಗ ಸಮುದಾಯದ ಮಠಾಧೀಶರು ಸಭೆ ನಡೆಸಿದ್ದಾರೆ. ಮುಖ್ಯಮಂತ್ರಿಯ ಆಯ್ಕೆ ಬಗ್ಗೆ ಸಂದೇಶ ಹೋಗಿದೆ.
ಇನ್ನು ಲಿಂಗಾಯತ ಸಿಎಂ ಆಗಬೇಕು ಅಂತ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಚುನಾವಣೆಗೆ ಮುನ್ನವೇ ಫರ್ಮಾನು ರೀತಿ ಸಲಹೆ ಸೂಚಿಸಿದ್ದಾರೆ. ಇವೆಲ್ಲಾ ಒಳಸುಳಿಗಳನ್ನೂ ಹೈಕಮಾಂಡ್ ಗಮನಿಸಬೇಕಾಗುತ್ತದೆ.
ಮುಖ್ಯಮಂತ್ರಿ ಆಯ್ಕೆ ಮೀಟಿಂಗ್ ಕಾವೇರುತ್ತಿದೆ.
ಕಡೆಗೆ ಹೈಕಮಾಂಡ್ ಅಂಗಳಕ್ಕೆ ಸಿಎಂ ಆಯ್ಕೆ ಚೆಂಡು ದೆಹಲಿಗೆ ತಲುಪುವುದರಲ್ಲಿ ಸಂದೇಹವಿಲ್ಲ.