ಬೆಂಗಳೂರಿನ ಹೊಟೆಲ್ ನಲ್ಲಿ ಕಾಂಗ್ರೆಸ್ ಪಕ್ಷದ ಸಭೆ.
ಮುಂದಿನ ಮುಖ್ಯಮಂತ್ರಿ ಅಯ್ಕೆ ಬಗ್ಗೆ ಹೈವೋಲ್ಟೇಜ್ ಮೀಟಿಂಗ್.
ಶಾಂಗ್ರಿಲಾ ಹೊಟೆಲ್ ಹೊರಗೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅಭಿಮಾನಿಗಳ ಬಿತುಸಿನ ಪ್ರದರ್ಶನ. ಪರ ಘೋಷಣೆಗಳು. ಬ್ಯಾನರ್ ಗಳು ,ಭಿತ್ತಿಚಿತ್ರಗಳನ್ನ ಹೊತ್ತವರಿಂದ
ಘೋಷಣೆಗಳು ಮುಗಿಲು ಮುಟ್ಟುವಂತಿತ್ತು.
ಈ ನಡುವೆ ಡಿಕೆಶಿ ಅವರು ಮೊದಲ ಅವಧಿಯ ಮುಖ್ಯಮಂತ್ರಿ ಪಟ್ಟ ತನಗೇ ಬೇಕು.ಆರೋಗ್ಯ ಸರಿಯಿಲ್ಲ ಎಂದು ಡಿಮ್ಯಾಂಡ್ ಮಾಡಿದ್ದಾರೆಂದು ಮಾಧ್ಯಮಗಳು ವರದಿಮಾಡಿವೆ.
ಶಾಸಕಾಂಗದ ಸಭೆಯಲ್ಲಿ ಪಕ್ಷದ ವೀಕ್ಷಕರೂ ಉಪಸ್ಥಿತರಿದ್ದಾರೆ.
ಉಸ್ತುವಾರಿ ಸುರ್ಜೆವಾಲ ಮತ್ತು ವೇಣುಗೋಪಾಲ್ ಅವರ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸಭೆ ನಡೆಯುತ್ತಿದೆ.