H Halappa Harathalu ರಾಜ್ಯಾದ್ಯಂತ ಪಕ್ಷ ಸೋತಿರುವ ಈ ಸಮಯದಲ್ಲಿ ಕಾರ್ಯಕರ್ತರು ಧೃತಿಗೆಡಬಾರದು. ಸೋಲನ್ನು ಸವಾಲಾಗಿ ಸ್ವೀಕರಿಸೋಣ ಎಂದು ಸಾಗರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಹರತಾಳು ಹಾಲಪ್ಪ ಅವರು ಹೇಳಿದರು.
ಸಾಗರದಲ್ಲಿ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಮತದಾರರು, ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಸಮಾಧಾನವಾಗಿ ಸ್ವೀಕರಿಸಬೇಕು. ಅಂಬೇಡ್ಕರ್, ಪ್ರಧಾನಿಯಾಗಿದ್ದಂತಹ ವಾಜಪೇಯಿ, ನಮ್ಮ ನಾಯಕರಾದ ಬಂಗಾರಪ್ಪ, ಯಡಿಯೂರಪ್ಪ, ಕಾಗೋಡು ತಿಮ್ಮಪ್ಪ, ದೇವೇಗೌಡ ರು, ಈಶ್ವರಪ್ಪ ಈ ಮೊದಲಾದ ದಿಗ್ಗಜರೆಲ್ಲರೂ ಚುನಾವಣೆಯಲ್ಲಿ ಸೋಲನ್ನ ಅನುಭವಿಸಿದ್ದರೂ ಜನರೊಂದಿಗೆ ಇದ್ದು ಹೋರಾಡಿದವರು. ಆದ್ದರಿಂದ ಜನರ ತೀರ್ಪನ್ನು ಗೌರವಿಸೋಣ ಎಂದು ತಿಳಿಸಿದರು.
H Halappa Harathalu ಎದುರಾಳಿಗಳ ಪ್ರಚೋದನೆಗೆ ತಲೆಕೆಡಿಸಿಕೊಳ್ಳಬೇಡಿ. ಸಮಾಧಾನದಿಂದ ವ್ಯವಹರಿಸಿ. ಜೊತೆಯಲ್ಲಿ ಸೋಲಿನಲ್ಲಿ ಜನರ ತಪ್ಪನ್ನು ಹುಡುಕಬಾರದು. ಅವರನ್ನ ಗೌರವಿಸಬೇಕು. ಬಿಜೆಪಿಗೆ 72,000 ಮತ ನೀಡಿದ ಮತದಾರರಿಗೆ ಅಭಿನಂದನೆ. ಕ್ಷೇತ್ರದ ಮತದಾರರು 5 ವರ್ಷದ ಅವಧಿಯಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದರು. ನನ್ನ ಕೈಲಾದಷ್ಟು ಅಭಿವೃದ್ಧಿ ಮಾಡಿದ್ದೇನೆ. ಚುನಾವಣೆಯಲ್ಲಿ ಸೋತಿರುವುದಕ್ಕೆ ಪಲಾಯನ ಮಾಡುವ ಪ್ರಶ್ನೆಯೇ ಇಲ್ಲ. ಸೋತವರು ಸಹನೆಯಿಂದ ಇರಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಹಜ ಎಂದು ಹೇಳಿದರು.