Assembly Election ಚುನಾವಣೆಗಳು ನಡೆಯುವ ದಿನಗಳಲ್ಲಿ ದೊಂಬಿ, ಗಲಭೆಗಳು ಇತ್ತೀಚೆಗೆ ಸಾಮಾನ್ಯ ಸುದ್ದಿಯಾಗಿವೆ.
ಆದರೆ ಈ ಬಾರಿ ಕರ್ನಾಟಕದ ಹದಿನಾರನೇ ವಿಧಾನಸಭೆಗೆ ನಡೆದ ಚುನಾವಣೆ ಒಟ್ಟಾರೆ ಶಾಂತಿಯುತ ಎಂಬ ವರದಿ ನೋಡಿ ಸಮಾಧಾನವಾಯಿತು.
ಅಂದರೆ ಒಂದೂ ಗಲಾಟೆ ನಡೆದಿಲ್ಲವೆ? ಎಂಬ ಪ್ರಶ್ನೆ ಕೇಳಬಹುದು.
ಆದರೆ ಮಾಧ್ಯಮಗಳಲ್ಲಿ ಒಂದು ಪದ ಜಾಣ್ಮೆಯಿಂದ ಬಳಸಲಾಗುತ್ತದೆ.
“ಬಹುತೇಕ” ಶಾಂತಿಯುತ.
ಎಲ್ಲೋ ಕೆಲವೆಡೆ ನಡೆದಿದೆ.ಅದು ಲೆಕ್ಕಕ್ಕೆ ಬರುವುದಿಲ್ಲ ಎಂರ್ಥದಲ್ಲಿ ಪದ ಪ್ರಯೋಗವಾಗಿರುತ್ತದೆ.
Assembly Election ಸ್ವಾರಸ್ಯಕರ ಸಂಗತಿಗಳು ಚುನಾವಣೆಯ ದಿನ ನಡದಿವೆ. ಬಳ್ಳಾರಿ ಜಿಲ್ಲೆ ಕುರುಗೋಡಿನ ಕೊರ್ಲಗುಂದಿಯಲ್ಲಿ ಮತದಾನಕ್ಕೆ ಆಗಮಿಸಿದ ಗರ್ಭಿಣಿಗೆ ಅಲ್ಲಿಯೇ ಹೆರಿಗೆಯಾಗಿದೆ. ಆ ತಾಯಿ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ.
ಸಹಜ ಹೆರಿಗೆಯಂತೆ.ಅಂತೂ ಅಲ್ಲಿನ ಸಿಬ್ಬಂದಿ ಹಾಗೂ ಮತದಾನಕ್ಕೆ ಆಗಮಿಸಿದ್ದ ಹೆಣ್ಣುಮಕ್ಕಳು ತಕ್ಷಣ ಸಹಕರಿಸಿ ತಮ್ಮ ಮಾನವೀಯತೆ ಮೆರೆದಿದ್ದಾರೆ.3.85 ಕೋಟಿ ಮಂದಿ ಮತಚಲಾಯಿಸಿದ್ದಾರೆ.
58,545 ಮತಗಟ್ಟೆಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 6 ರವರೆಗೆ ಮತದಾನ ನಡೆದಿದೆ. ಒಟ್ಟು ಅರ್ಹತೆ ಪಡೆದಿದ್ದ 5,30,85,566 ಮಂದಿ ಮತದಾರರಪೈಕಿ ಶೇ.72.67 ರಷ್ಟು (3.85 ಕೋಟಿ) ಮಂದಿ ಮತಚಲಾವಣೆ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲೆಗೆ ಹೊಂದಿಕೊಂಡಿರುವ ಜಿಲ್ಲೆಗಳ ಶೇಕಡಾ ಮತದಾನ ವಿವರ ಹೀಗಿದೆ
ಶಿವಮೊಗ್ಗ 79.14
ದಾವಣಗೆರೆ 77.47
ಚಿತ್ರದುರ್ಗ 80.37
ಚಿಕ್ಕಮಗಳೂರು 77.89
ಉಡುಪಿ 78.46 2018 ರ ಸಾರ್ವತ್ರಿಕ ಚುನಾವಣೆಯಲ್ಲಿ ಶೇ 71.1 ಮತದಾನವಾಗಿತ್ತು.
2023 ರಲ್ಲಿ ಶೇ 72.67 ಮತದಾನವಾಗಿದೆ.
Assembly Election ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ
ಗರಿಷ್ಠ ಶೇ 85.83
ಬೆಂಗಳೂರು ದಕ್ಷಿಣ ದಲ್ಲಿ ಶೇ 52.80 ವಾರದ ನಡುವಿನ ದಿನ ಮತದಾನ ಇಟ್ಟುಕೊಂಡದ್ದರಿಂದ ಈ ಸಾಧನೆ ಸಾಧ್ಯವಾಗಿರಬಹುದು. ಇಲ್ಲದೇ ಇದ್ದಿದ್ದರೆ ಇನ್ನಷ್ಟೂ ಇಳಿಕೆಯಾಗುತ್ತಿತ್ತೇನೊ?
ಅಂತೂ ಚುನಾವಣೆ ಅಲ್ಲಲ್ಲಿ ಸಣ್ಣಪುಟ್ಟ ಘಟನೆ ಬಿಟ್ಟರೆ ಬಹುತೇಕ ಶಾಂತಿಯುತ ನಡೆದಿದೆ ಎಂದೇ ಮುಗಿಸಬಹುದು.