Rotary Club Shivamogga ಇಂದಿನ ಯುವಜನರಲ್ಲಿ ವಿಶೇಷವಾಗಿ ಸೇವಾ ಮನೋಭಾವ, ದೇಶಭಕ್ತಿ, ಪರಿಸರ ಪ್ರಜ್ಞೆ, ಮುಖಂಡತ್ವದ ಒಲವು, ವೃತ್ತಿಯಲ್ಲಿ ಪ್ರೀತಿ ಮತ್ತು ಅಂತರರಾಷ್ಟ್ರೀಯ ತಿಳವಳಿಕೆ ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ರೋಟರಿ ಮಾಜಿ ಸಹಾಯಕ ಗವರ್ನರ್ ಯು.ರವೀಂದ್ರನಾಥ ಐತಾಳ ಹೇಳಿದರು.
ಶಿವಮೊಗ್ಗದ ರೋಟರಿ ಕ್ಲಬ್ ಸೆಂಟ್ರಲ್ ಮತ್ತು ರೋಟರಿ ಶಿವಮೊಗ್ಗ ಪೂರ್ವ ಆಯೋಜಿಸಿದ್ದ ಜಂಟಿ ಸಭೆಯಲ್ಲಿ ಯುವಜನ ಸೇವಾ ಮಾಸದ ವಿಶೇಷ ಸಭೆಯಲ್ಲಿ ಮಾತನಾಡಿ, ಯುವಜನತೆ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ತಕ್ಕ ಪರಿಹಾರ ಕಂಡುಕೊಳ್ಳುವ ಶಕ್ತಿಯನ್ನು ಹೊಂದಿದವರಾಗಬೇಕು. ರೋಟರಿ ಸಂಸ್ಥೆ ವಿಶ್ವದಲ್ಲಿ ನೈಪುಣ್ಯತೆ ಪಡೆದಿರುವ ಯುವಜನರನ್ನು ಗುರುತಿಸಿ ತರಬೇತಿ ನೀಡಿ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ರೋಟರಿ ಸದಸ್ಯರಾಗಿ ಸೇರ್ಪಡೆಯಾಗಬೇಕು. ರೋಟರಿ ತತ್ವಗಳನ್ನು ಸಮುದಾಯಕ್ಕೆ ತಿಳಿಸಬೇಕು. ರೋಟರಿ ಯುವ ಸೇನೆಯ ಮೂಲಕ ಸಮಾಜದಲ್ಲಿ ಒಡನಾಟ, ಸೇವೆ , ಶಾಂತಿ ಸದ್ಭಾವನೆಯನ್ನು ಬೆಳೆಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಮಾರಂಭದಲ್ಲಿ ಸೆಂಟ್ರಲ್ ಅಧ್ಯಕ್ಷ ಚಂದ್ರು ಜೆ.ಪಿ ಮಾತನಾಡಿ, ಒಂದು ವರ್ಷದ ಅವಧಿಯಲ್ಲಿ ಅತಿ ಹೆಚ್ಚು ಸೇವಾಕಾರ್ಯ ಮಾಡಿದ ತೃಪ್ತಿ ನನಗಿದೆ. ನಿಮ್ಮೆಲ್ಲರ ತನು ಮನ ಧನದ ಸಹಾಯದಿಂದ ನಾನು ಧನ್ಯನಾಗಿದ್ದೇನೆ. ಇನ್ನುಳಿದ ಎರಡು ತಿಂಗಳಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡುವುದಾಗಿ ತಿಳಿಸಿದರು.
Rotary Club Shivamogga ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ ಮಾತನಾಡಿ, ಗುಡ್ ಲಕ್ ಅರೈಕೆ ಕೇಂದ್ರದ ಜನ ಮೆಚ್ವುವ ಕೆಲಸ ಅದರಣೀಯ ಹಾಗೂ ಅನುಕರಣೀಯ ಅಂತ ತಿಳಿಸಿದರು.
ಇದೇ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ರವೀಂದ್ರನಾಥ ಐತಾಳರವರಿಗೆ ಮತ್ತು ಸುಮತಿ ಅವರಿಗೆ ಸನ್ಮಾನ ಮಾಡಿದರು. ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಎಸ್ ಜಿ. ಅನಂದ್, ಚೂಡಾಮಣಿ ಪವಾರ್ ಮತ್ತು ನಿಯೋಜಿತ ಸಹಾಯಕ ಗವರ್ನರ್ ರವಿ ಕೋಟೋಜಿಸೆಂಟ್ರಲ್ ಕಾರ್ಯದರ್ಶಿ ಬಸವರಾಜಪ್ಪ, ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕುಮಾರಸ್ವಾಮಿ, ಶಿವರಾಜ ಉಪಸ್ಥಿತರಿದ್ದರು.