- Interesting Election News ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ರಾಜಧಾನಿಯಲ್ಲಿ ವಾಸ್ತವ್ಯ ಹೂಡಿದ್ದ ಕಾಂಗ್ರೆಸ್ ನ ಯುವರಾಜ ರಾಹುಲ್ ಗಾಂಧಿಯವರು ಸರಳ ಮಾರ್ಗವನ್ನು ಉಪಯೋಗಿಸಿ ಪ್ರಚಾರ ಮಾಡುವ ಮುಖಾಂತರ ಎಲ್ಲರ ಗಮನ ಸೆಳೆದಿದ್ದಾರೆ.
ಕನ್ನಿಂಗ್ ಹ್ಯಾಮ್ ರಸ್ತೆಯ ಥರ್ಡ್ ವೇವ್ ಕಾಫಿ ಕೆಫೆ ಯಲ್ಲಿ ಜನಸಾಮಾನ್ಯರೊಂದಿಗೆ ಕಾಫಿ ಸವಿದಿದ್ದಾರೆ. ಬಿ ಎಂ ಟಿ ಸಿ ಬಸ್ ಕೆ ಹತ್ತಿ ಜನಸಾಮಾನ್ಯರೊಂದಿಗೆ ಪ್ರಯಾಣ ಕೂಡ ಮಾಡಿದ್ದಾರೆ.
- ಮಾಜಿ ಪ್ರಧಾನಿ, ಪ್ರಿಯ ರಾಜಕಾರಣಿ, ನಾಡಿನ ಬಗ್ಗೆ ಚಿಂತಿಸುವ ಚೇತನ ಶ್ರೀ. ಎಚ್ ಡಿ ದೇವೇಗೌಡರು ಇಂದಿನ ಚುನಾವಣಾ ಸನ್ನಿವೇಶದಲ್ಲಿ ಸಂಭ್ರಮದಿಂದ ಓಡಾಡುತ್ತಿದ್ದಾರೆ. 90ರ ವಯೋಮಾನದಲ್ಲಿಯೂ ಅವರು ನಡೆದಾಡುವ ರೀತಿ ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಅವರ ಚುರುಕಿನ ಮನಸ್ಸು ಈಗಿರುವ ವಯಸ್ಸನ್ನು ಮರೆಸಿದೆ. ರಾಜಕೀಯ ಪ್ರವೇಶ ಮಾಡುವವರಿಗೆ ಮಾರ್ಗದರ್ಶಿಯು ಆಗಿದ್ದಾರೆ. ಈ ಹಿರಿಯ ಮುತ್ಸದ್ದಿ.
- Interesting Election News ಜಿಲ್ಲಾಡಳಿತ, ಜಿ.ಪಂ ಆಯಾಯ ಗ್ರಾಮ ಪಂಚಾಯಿತಿಗಳ ಮೂಲಕ ಅವಶ್ಯಕತೆ ಇರುವವರಿಗೆ ಮತಗಟ್ಟೆಗೆ ಬಂದು ಮನೆಗೆ ಹಿಂತಿರುಗಲು ವಾಹನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಯಾವುದೇ ಅಭ್ಯರ್ಥಿ ಅಥವಾ ಪಕ್ಷಗಳು ವಾಹನ ವ್ಯವಸ್ಥೆ ಮಾಡುವಂತಿಲ್ಲ ಇಂದು ತುಮಕೂರು ನೀತಿ ಸಂಹಿತೆ ನೋಡಲ ಅಧಿಕಾರಿ ಮತ್ತು ಜಿಲ್ಲಾ ಪಂಚಾಯತ್ ಸಿಇಓ ಡಾ. ಕೆ ವಿದ್ಯಾ ಕುಮಾರಿ ಅವರು ತಿಳಿಸಿದ್ದಾರೆ.