Chikkamagaluru Gnanarashmi School ಚಿಕ್ಕಮಗಳೂರು, ನಗರ ಸಮೀಪದ ಜ್ಞಾನರಶ್ಮಿ ಶಾಲೆಗೆ 2022-23 ನೇ ಸಾಲಿನ ಎಸ್.ಎಸ್. ಎಲ್.ಸಿ. ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ಪಡೆದು ಪ್ರತಿವರ್ಷದಂತೆ ಯಶಸ್ವಿಯಾಗಿ ಮುನ್ನಡೆದಿದೆ.
ಶಾಲೆಯಲ್ಲಿ ಪ್ರಥಮ ಸ್ಥಾನವನ್ನು ಎಸ್.ನವಮಿ 618೬ ಅಂಕ ಪಡೆಯುವ ಮೂಲಕ ಶೇ.98.88೯, ದ್ವಿತೀಯ ಸ್ಥಾನವನ್ನು ಸಿ.ಐ.ಅಲ್ಪಾ 584ಕ್ಕೆ ಶೇ.93.44 ಹಾಗೂ ತೃತೀಯ ಸ್ಥಾನವನ್ನು ಏ.ಆರ್ಶಿಯ 562ಕ್ಕೆ ಶೇ.90 ಫಲಿತಾಂಶ ಪಡೆದು ತೇರ್ಗಡೆಯಾಗಿದ್ದಾರೆ.
ಶಾಲೆಯ ಎಸ್.ಎಸ್.ಎಸ್.ಸಿ ಪರೀಕ್ಷೆಯಲ್ಲಿ ಒಟ್ಟು 45 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಉತ್ತಿರ್ಣರಾ ಗಿದ್ದಾರೆ. ಕನ್ನಡ ವಿಷಯದಲ್ಲಿ ಎಸ್.ನವಮಿ 125ಕ್ಕೆ 125 ಅಂಕ ಹಾಗೂ ಹಿಂದಿ ವಿಷಯದಲ್ಲಿ ಸಿ. ಅಲ್ಪಾ ಹಾಗೂ ಫರ್ಹಾನ್‌ಖಾನ್ 100ಕ್ಕೆ 100ಕ್ಕೆ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.
ಈ ವೇಳೆ ಶಾಲೆಯ ಕಾರ್ಯದರ್ಶಿ ನಂದಕುಮಾರ್ ಮಾತನಾಡಿ ಶಾಲೆಯು ಸತತವಾಗಿ 13 ವರ್ಷಗಳಿಂದ ಶೇ.100 ಫಲಿತಾಂಶ ಪಡೆದು ತೇರ್ಗಡೆಯಾಗುತ್ತಿರುವುದು ಖುಷಿ ತಂದಿದೆ. ಈ ಬಾರಿಯು ಸಹ 3 ವಿದ್ಯಾರ್ಥಿಗಳು ಅತ್ಯಧಿಕ ಅಂಕ ಪಡೆದು ಉನ್ನತ ಮಟ್ಟದಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ತಿಳಿಸಿದರು.
Chikkamagaluru Gnanarashmi School ಇದೇ ವೇಳೆ ಎಸ್.ಎಸ್.ಎಲ್.ಸಿ.ಯಲ್ಲಿ ಅತಿಹೆಚ್ಚು ಅಂಕಗಳಿಸಿದ ಶಾಲೆಯ ಮೂವರು ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿಯು ಸಿಹಿ ತಿನಿಸುವ ಮೂಲಕ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಎನ್.ಪಿ.ಲಿಖಿತ, ಪ್ರಾಂಶುಪಾಲ ಹೆಚ್.ಪಾಲಾಕ್ಷಮ್ಮ, ಶಿಕ್ಷಕರಾದ ಸಹೇರಾ ಬಾನು, ಮುಬೀನಾ ತಾಜ್, ಗಾಯತ್ರಿ, ಮಕ್ಕಳ ಪೋಷಕರಾದ ಸುರೇಶ್, ಸಹನಾ, ಜಹರಾ ಇದ್ದರು.