Artist Bhadravati Guru Created Voter Awareness ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ಯಾವುದೇ ಧಕ್ಕೆ ಆಗದಂತೆ ಮತದಾನದ ದಿನ ಎಲ್ಲರೂ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು. ಮತದಾನವು ಪ್ರಜಾಪ್ರಭುತ್ವದ ಒಂದು ಧ್ವನಿ. ನಮ್ಮ ನಾಯಕರನ್ನು ನಾವೇ ಆಯ್ಕೆ ಮಾಡಿಕೊಳ್ಳುವ ಒಂದು ಪ್ರಕ್ರಿಯೆ. ಜನರಲ್ಲಿ ಮತದಾನದ ಕುರಿತು ಅರಿವು ಮೂಡಿಸುವಂತಹ ಕೆಲಸಗಳು ನಡೆಯುತ್ತಿವೆ.
ಜನರಲ್ಲಿ ಮತದಾನದ ಜಾಗೃತಿ ಕುರಿತು ಅನೇಕ ಅಭಿಯಾನಗಳು ನಡೆಯುತ್ತದೆ. ಅದೇ ರೀತಿ ನೂರು ಕಿಲೋಮೀಟರ್ ಮತದಾನ ಜಾಗೃತಿ ಅಭಿಯಾನದ ಬೋರ್ಡ್ ಬರವಣಿಗೆ ಶಿವಮೊಗ್ಗದ ಗ್ರಾಮೀಣ ಪ್ರದೇಶದಲ್ಲಿ ನಡೆಸಲಾಗಿದೆ.
Artist Bhadravati Guru Created Voter Awareness ನಿಮ್ಮ ಮತ ನಿಮ್ಮ ಹಕ್ಕು. ನಿಮ್ಮ ನಡೆ ಮತಗಟ್ಟೆ ಕಡೆ. ಥಿಂಕ್ ಮಾಡಿ ವೋಟ್ ಮಾಡಿ. ನಮ್ಮ ಮತ ಮಾರಾಟಕ್ಕಿಲ್ಲ ಹೀಗೆ ಅನೇಕ ಸಾಲುಗಳನ್ನು ಕಟ್ಟಡಗಳ ಮೇಲೆ ಬರೆಯಲಾಗಿದೆ. ಈ ಮೂಲಕ ಜನರಲ್ಲಿ ಮತದಾನದ ಅರಿವು ಮೂಡಿಸುವಂತಹ ಕೆಲಸ ನಡೆದಿದೆ. ಈ ಶ್ಲಾಘನೀಯ ಕೆಲಸ ಮಾಡಿರುವುದು ಭದ್ರಾವತಿಯ ಪ್ರಖ್ಯಾತ ಕಲಾವಿದ ಭದ್ರಾವತಿ ಗುರು. ಮತದಾರ ಜಾಗೃತಿಯನ್ನು ತಮ್ಮ ಸುಂದರ ಬರವಣಿಗೆಯಲ್ಲಿ ಮೂಡಿಸಿ ಕಲಾ ಮಾಧ್ಯಮವನ್ನು ಬೆಳಗಿದ ಭದ್ರಾವತಿ ಗುರು ಅವರ ಈ ಕಲವಂತಿಕೆ ಬೆಳೆಯಲಿ ಎಂದು ಆಶಿಸೋಣ…