Voting Rights ಮತದಾನ ನಮ್ಮ ಹಕ್ಕು, ಮತದಾನ ಮಾಡುವ ಮೂಲಕ ಕರ್ತವ್ಯ ನಿರ್ವಹಿಸಬೇಕು. ಮೇ 10ರಂದು ಬೆಳಗ್ಗೆ 7ರಿಂದ ಸಂಜೆ 6ವರೆಗೆ ನಡೆಯುವ ವಿಧಾನಸಭೆ ಚುನಾವಣೆ ಮತದಾನ ಪ್ರಕ್ರಿಯೆಯಲ್ಲಿ ತಪ್ಪದೇ ಮತ ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಎನ್‌ಎಸ್‌ಎಸ್, ಐಕ್ಯೂಎಸಿ, ಯುವ ರೆಡ್‌ಕ್ರಾಸ್, ಎನ್‌ಸಿಸಿ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮತದಾರರು ನಿರ್ಭಿತಿಯಿಂದ ಮತದಾನ ಮಾಡಬೇಕು. ಮತದಾನ ದಿನ ಯಾವುದೇ ಕಾರಣ ನೀಡಿ ತಪ್ಪಿಸಿಕೊಳ್ಳಬಾರದು. ಬೆಳಗ್ಗೆಯೇ ಮತದಾನ ಮಾಡಬೇಕು. ಮತದಾನದ ಬಗ್ಗೆ ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ಜಾಗೃತಿ ಮೂಡತ್ತಿದೆ. ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನ ಆಗುವ ನೀರಿಕ್ಷೆಯಿದೆ. ಚುನಾವಣಾ ಆಪ್ ಬಳಸಬೇಕು ಎಂದು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕುಲಸಚಿವ ಪ್ರೊ. ಎನ್.ಕೆ.ಹರಿಯಪ್ಪ ಮಾತನಾಡಿ, ಮತದಾನ ಮಾಡದಿದ್ದರೆ ನಾವು ನಮ್ಮ ಹಕ್ಕು ಕಳೆದುಕೊಂಡಂತೆ, ಸದೃಢ ಸರ್ಕಾರ ರಚನೆಗೆ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು. ಯುವಜನರು ಮೊದಲ ಬಾರಿ ಮತದಾನ ಮಾಡುವವರು ತಪ್ಪದೇ ಮತ ಚಲಾಯಿಸಬೇಕು ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಮಾತನಾಡಿ, ಪ್ರತಿಯೊಂದು ಮತವು ಅಮೂಲ್ಯ. ಒಂದು ಮತದ ಅಂತರದಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಉದಾಹರಣೆ ಇದೆ. ಮತದಾನದ ಎಲ್ಲ ಕಡೆಗಳಲ್ಲಿಯೂ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.
Voting Rights ಪ್ರಾಚಾರ್ಯ ಪ್ರೊ. ಕಾಜೀಂ ಷರಿಷ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮತದಾನ ಜಾಗೃತಿ ಪ್ರಯುಕ್ತ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ನೂತನ ಹೊಸ ಮತದಾರರಿಗೆ ಕಾರ್ಡ್ಗಳನ್ನು ವಿತರಿಸಲಾಯಿತು.
ಪ್ರೊ. ಕೆ.ಎಂ.ನಾಗರಾಜು, ಪ್ರೊ. ಎಸ್.ಜಗದೀಶ್, ಪ್ರೊ. ಮಂಜುನಾಥ್, ಸ್ಮಿತಾ ರೂಪೇಶ್, ಮತ್ತಿತರರು ಉಪಸ್ಥಿತರಿದ್ದರು.