- Election Updates ಚುನಾವಣೆ ಎಂಬ ಪದದಲ್ಲಿಯೇ ಒಂದು ವಿಧವಾದ ಸೆಳೆತವಿದೆ. ಚುನಾವಣೆ ಎಂಬ ಆಟದಲ್ಲಿ ರಾಜ ,ರಾಣಿ, ಜೋಕರ್ ಗಳು ಒಳಗೊಂಡಿರುತ್ತದೆ. ಚುನಾವಣೆ ಹತ್ತಿರ ಬರುತ್ತಿದ್ದ ಹಾಗೆ ಚುನಾವಣಾ ಅಭ್ಯರ್ಥಿಗಳು ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
- ಚುನಾವಣೆಯಲ್ಲಿ ಬಹುಮತ ಗಳಿಸಲು ಆಯಾ ಪಕ್ಷದ ನಾಯಕರು ಕೆಲವು ಗಿಮಿಕ್ ಗಳನ್ನು ಬಳಸುತ್ತಿದ್ದಾರೆ.
ರಾಷ್ಟ್ರೀಯ ಪಕ್ಷಿಗಳಿಗೆ ಹಣ ಬಲವೇ ಬಂಡವಾಳ. ನಮಗೆ ಜನ ಬಲವೇ ಶಕ್ತಿ. ಅವರಿಗೆ ಇರುವಷ್ಟು ಹಣಕಾಸಿನ ಶಕ್ತಿ ನಮ್ಮ ಪಕ್ಷಕ್ಕೆ ಇದ್ದಿದ್ದರೆ 150 ಸೀಟು ಸುಲಭವಾಗಿ ಗೆಲ್ಲುತ್ತಿದ್ದವು ಎಂದು ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.
- ಬೆಳಗಾವಿಯ ಅರಬಾವಿ ಮತಕ್ಷೇತ್ರದ ಅಭ್ಯರ್ಥಿ ರಾಜಪುರ ಗ್ರಾಮದ ಗುರುಪುತ್ರ ಕೊಳ್ಳುರ ತಮ್ಮ ಪ್ರಣಾಳಿಕೆಯಲ್ಲಿ ಅವಿವಾಹಿತ ಯುವಕರಿಗೆ ಮದುವೆ ಭಾಗ್ಯ ಎಂದು ಪ್ರಸ್ತಾಪಿಸಿ ಮತದಾರರಿಗೆ ಈ ಪ್ರಣಾಳಿಕೆಯ ಪತ್ರವನ್ನು ಹಂಚಿ ಎಲ್ಲರ ಗಮನ ಸೆಳೆದಿದ್ದಾರೆ.
*ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಸರ್ಕಾರ ಅತ್ಯುತ್ತಮ ರೀತಿಯಲ್ಲಿ ಆಡಳಿತ ನಡೆಸುತ್ತಿದೆ. ದುಷ್ಕರ್ಮಿಗಳು, ಪಾತಕಿಗಳು ಆ ರಾಜ್ಯದಲ್ಲಿ ತಲೆ ಎತ್ತುವಂತಿಲ್ಲ. ಗುಂಡಾಗಿರಿ ಮೆರೆಯುವವರಿಗೆ ಮತ್ತು ಹಿಂದುಗಳ ವಿರೋಧಿ ಉಂಡಾಟ ಮಾಡುವವರಿಗೆ ಗುಂಡೇಟು ಗ್ಯಾರಂಟಿ. ಬಿಜೆಪಿ ಅಧಿಕಾರಕ್ಕೆ ಬಂದರೆ ಕರ್ನಾಟಕದಲ್ಲಿ ಇದೇ ಮಾದರಿಯನ್ನು ಅನುಸರಿಸಲಾಗುತ್ತದೆ ಎಂದು ಬಿಜೆಪಿ ನಾಯಕ ಬಸವನಗೌಡ ಯತ್ನಾಳ್ ಅವರು ಹೇಳಿದ್ದಾರೆ.
*Election Updates ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಮೇಲೆ ಐಟಿ ದಾಳಿ ನಡೆಸುವ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡು ಚುನಾವಣೆ ಗೆಲ್ಲಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಆರೋಪಿಸಿದ್ದಾರೆ