Monday, February 2, 2026
Monday, February 2, 2026

Shivammogga Harihar Police Station ಶಿವಮೊಗ್ಗ ಹರಿಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾದವರ ಬಗ್ಗೆ ಮಾಹಿತಿ

Date:

Shivammogga Harihar Police Station ಶಿವಮೊಗ್ಗದ ಹರಿಹರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ದಿನಾಂಕಗಳಿಂದ ಕಾಣೆಯಾದವರ ಬಗ್ಗೆ ವಿವರ ನೀಡಿದೆ. ಈ ವ್ಯಕ್ತಿಗಳು ಎಲ್ಲಿಯಾದರೂ ಕಂಡು ಬಂದಲ್ಲಿ ಹರಿಹರ ನಗರ ಪೊಲೀಸ್ ಠಾಣೆ- 08192-272016, ಅಥವಾ 9480803258

ದಾವಣಗೆರೆ- 08192-253100/ 08192-253400ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

ವಿವರ ಕೆಳಗನಂತಿದೆ.
ಹರಿಹರನಗರದ ನಡುವಲಪೇಟೆ 2ನೇ ಕ್ರಾಸ್‌ನಲ್ಲಿ ವಾಸವಿರುವ ಯೋಗಪ್ಪ ಮಾಂತ ಎಂಬುವವರ ಮಗ 49ವರ್ಷದ ಬಸವರಾಜ ವೈ. ಎಂಬುವವರು ದಿ: 23.01.2021 ರಿಂದ ಕಾಣೆಯಾಗಿರುತ್ತಾರೆ.
ಈತನ ಚಹರೆ 5.5 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ಉರ್ದು, ಹಿಂದಿ ಭಾಷೆ ಮಾತನಾಡುತ್ತಾರೆ.

ಹರಿಹರ ನಗರದ ಹರ್ಲಾಪುರ 2ನೇ ಮುಖ್ಯರಸ್ತೆಯಲ್ಲಿ ವಾಸವಿರುವ ಆಯಾಜ್ ಕುರುಬು ಎಂಬುವವರ ಪತ್ನಿ 25ವರ್ಷ ನುಸರತ್ ಬಾನು ಎಂಬುವವರು ದಿ:16-04-2021 ರಿಂದ ಕಾಣೆಯಾಗಿರುತ್ತಾರೆ. ಈಕೆಯ ಚಹರೆ 4.9 ಅಡಿ ಎತ್ತರ, ದುಂಡುಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಮತ್ತು ಉರ್ದು ಭಾಷೆ ಮಾತನಾಡುತ್ತಾರೆ.

ಹರಿಹರನಗರದ ಗಾಂಧಿನಗರ 3ನೇ ಕ್ರಾಸ್‌ನಲ್ಲಿ ವಾಸವಿರುವ ಮೆಹಬೂಬ್ ಸಾಬ್ ಎಂಬುವವರ ಮಗ 28 ವರ್ಷದ ದಾದಪೀರ್  ಎಂಬುವವರು ದಿ: 24-01-2021 ರಿಂದ ಕಾಣೆಯಾಗಿರುತ್ತಾರೆ. ಈತನ ಚಹರೆ 5.4 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದು, ಕನ್ನಡ, ಉರ್ದು ಮಾತನಾಡುತ್ತಾರೆ.

ಹರಿಹರನಗರದ ರಾಜಾರಾಂ ನಗರ 13ನೇ ಕ್ರಾಸ್, ೩ನೇ ಮುಖ್ಯರಸ್ತೆಯಲ್ಲಿ ವಾಸವಿದ್ದ 98ವರ್ಷದ ವಿಠ್ಹಲ್ ಸಾ ಮೆಹರ್ವಾಡೆ ಎಂಬುವವರು ದಿ: 28/10/2021ರಿಂದ ಕಾಣೆಯಾಗಿರುತ್ತಾರೆ.

Shivammogga Harihar Police Station ಈತನ ಚಹರೆ 5.6ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ, ತೆಳ್ಳನೆ ಮೈಕಟ್ಟು ಹೊಂದಿದ್ದು, ಕನ್ನಡ, ಮರಾಠಿ, ಇಂಗ್ಲೀಷ್, ಹಿಂದಿ ಮಾತನಾಡುತ್ತಾರೆ. ಎಡಪಕ್ಕೆಯಲ್ಲಿ ಸಣ್ಣ ಕಪ್ಪು ಮಚ್ಚೆ ಇರುತ್ತದೆ.

ದಾವಣಗೆರೆ ನಗರದ ಎಸ್.ಜೆ.ಎಂ.ನಗರ, ರಿಂಗ್ ರಸ್ತೆಯ 16ನೇ ಕ್ರಾಸ್‌ನಲ್ಲಿ ವಾಸವಿರುವ ಮಾರುತಿ ಹೆಚ್. ಎಂಬುವವರ 23ವರ್ಷದ ಜ್ಯೋತಿ ಎಂ. ಎಂಬುವವರು ದಿ: 19/11/2021ರಿಂದ ಕಾಣೆಯಾಗಿರುತ್ತಾರೆ.  ಈಕೆಯ ಚಹರೆ 5.2 ಅಡಿ ಎತ್ತರ, ದುಂಡುಮುಖ, ನೀಳ ಮೂಗು, ತೆಳ್ಳನೆಯ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ತೆಲುಗು, ಇಂಗ್ಲೀಷ್ ಮಾತನಾಡುತ್ತಾರೆ. 

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...