Congress Kisan Cell ದೇಶದ ಗೃಹಮಂತ್ರಿ ಹಾಗೂ ಬಿಜೆಪಿ ಸಂಘಟನಾ ಕಾರ್ಯದರ್ಶಿಗಳು ರಾಜ್ಯದ ಚುನಾವಣಾ ಸಮಯದಲ್ಲಿ ದೇಶವನ್ನು ಒಡೆದಾಳುವ ರೀತಿಯಲ್ಲಿ ಭಾಷಣ ಹಾಗೂ ಹೇಳಿಕೆ ನೀಡುವ ಮೂಲಕ ಸಂವಿಧಾನ ವಿರೋಧ ನಡೆಯನ್ನು ಅನುಸರಿಸುತ್ತಿದೆ ಎಂದು ಕಾಂಗ್ರೆಸ್ ಕಿಸಾಲ್ ಸೆಲ್ ರಾಜ್ಯ ಸಂಚಾಲಕ ಸಿ.ಎನ್. ಅಕ್ಮಲ್ ಆರೋಪಿಸಿದ್ದಾರೆ.
ಈ ಸಂಬಂಧ ಹೇಳಿಕೆಯಲ್ಲಿ ತಿಳಿಸಿರುವ ಅವರು, ದೇಶದ ಗೃಹಮಂತ್ರಿ ಅಮಿತ್ ಶಾ ಅವರು ಚುನಾವಣಾ ರ‍್ಯಾಲಿ ಹಾಗೂ ಕಾರ್ಯಕರ್ತರುಗಳ ಸಭೆಗಳಲ್ಲಿ ಬಿಜೆಪಿ ಹೊರತುಪಡಿಸಿ ರಾಜ್ಯದಲ್ಲಿ ಬರ‍್ಯಾವ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಗಲಭೆ ಎಬ್ಬಿಸುವುದಾಗಿ ಪ್ರಚೋದಕಾರಿ ಭಾಷಣ ಮಾಡಿ ಮತದಾರರಲ್ಲಿ ಭಯಹುಟ್ಟಿ ಸುವ ಕಾರ್ಯ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಭಾರತ ದೇಶದ ಗೃಹಮಂತ್ರಿಯಾಗಿ ಉನ್ನತ ಹುದ್ದೆಯನ್ನು ಅಲಂಕರಿಸಿರುವ ಅವರಿಗೆ ಈ ರೀತಿಯ ಪ್ರಚೋ ದಕಾರಿ ಹೇಳಿಕೆ ನೀಡುವುದು ಶೋಭೆ ತರುವುದಿಲ್ಲ. ಹಾಗಾದರೆ ಮತದಾರರು ತಮ್ಮ ಅಭ್ಯರ್ಥಿಯ ಆಯ್ಕೆ ವಿಷಯದಲ್ಲಿ ಹಕ್ಕು ಚಲಾಯಿಸಲು ಸ್ವಾತಂತ್ರ್ಯವಿಲ್ಲ ಎಂದು ಪ್ರಶ್ನಿಸಿದ ಅವರು ಜಾತ್ಯಾತೀತತೆ ಎಂದು ಹೇಳಿಕೊ ಳ್ಳುವ ಪ್ರಧಾನ ಮಂತ್ರಿಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದಿದ್ದಾರೆ.
ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಈಚೆಗೆ ರಾಜ್ಯದಲ್ಲಿ ಲಿಂಗಾಯಿತ ಸಮಾ ಜದ ಮತ ಬೇಡ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ. ಲಿಂಗಾಯಿತ ಮತ ಬೇಡವಾಡರೆ ಇರಾನ್‌ನಿಂದ ಕರೆಸಿ ಮತ ಚಲಾಯಿಸುತ್ತಾರೆಯೇ. ಪ್ರತಿ ಬಾರಿಯೂ ಹಿಂದುತ್ವ ಎಂದು ಹೇಳಿಕೊಳ್ಳುವ ಅವರಿಗೆ ಹಿಂದೂ ಎಂದರೆ ಅರ್ಥ ತಿಳಿಸಲಿ ಎಂದು ಸವಾಲು ಹಾಕಿದ್ದಾರೆ.
ಕೇವಲ ಹಿಂದುತ್ವ ಎಂದು ಹೇಳಿಕೊಂಡು ಎಲ್ಲಾ ಸಮಾಜದವರನ್ನು ಪ್ರಚಾರ ಕಾರ್ಯದಲ್ಲಿ ಬಳಸಿ ಲಾಭ ಮಾಡಿಕೊಳ್ಳುವ ಬಿಜೆಪಿ ಮುಖಂಡರುಗಳಿಗೆ ಚುನಾವಣಾ ಸಮಯದಲ್ಲಿ ಲಿಂಗಾಯಿತ, ಲಂಬಾಣಿ ಹಾಗೂ ದಲಿತರು ಮತ ಬೇಡವಾದರೆ ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಯಾರಿಗೋಸ್ಕರಬೇಕು. ಇದು ಅಂಬೇಡ್ಕರ್ ನೀಡಿರುವ ಸಂವಿಧಾನಕ್ಕೆ ಧಕ್ಕೆ ತಂದಾಗಿದೆ ಎಂದಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಯಾವುದೇ ಸಬ್ಸಿಡಿಯಲ್ಲದೇ ಬಡವರಿಗೆ ಉಚಿತವಾಗಿ ಮನೆ ವಿತರಿ ಸಲಾಗಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸಬ್ಸಿಡಿಯಲ್ಲಿ ಮನೆಯನ್ನು ವಿತರಿಸಿದ್ದು ಅದರಲ್ಲೂ ಭಾರೀ ಭ್ರಷ್ಟಚಾರ ನಡೆಸಿ ಗುಣಮಟ್ಟವಿಲ್ಲದ ಮನೆಗಳನ್ನು ನಿರ್ಮಿಸಿದ್ದು ಆ ಮನೆಗಳು ಸಹ ಒಂದು ವರ್ಷವೂ ಬಾಳಿಕೆ ಬರುತ್ತಿಲ್ಲ ಎಂದು ಆರೋಪಿಸಿದ್ದಾರೆ.
Congress Kisan Cell ಕೂಡಲೇ ಗೃಹ ಮಂತ್ರಿಗಳು ಹಾಗೂ ಬಿಜೆಪಿ ಮುಖಂಡರುಗಳು ಪ್ರಚೋದಕಾರಿ ಭಾಷಣಗಳಿಗೆ ಕಡಿವಾಣ ಹಾಕಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸದಿದ್ದಲ್ಲಿ ಎಲ್ಲಾ ಸಮುದಾಯದ ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯ ಕರ್ತರುಗಳು ದೆಹಲಿಯವರೆಗೂ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.