Saturday, September 28, 2024
Saturday, September 28, 2024

Voters Awareness ಯಾವುದೇ ಆಮಿಷಕ್ಕೊಳಗಾಗದೇ ಮತ‌ನೀಡಿ-ಶ್ರೀನಿವಾಸ್

Date:

Voters Awareness ಶಾಸಕ ಸ್ಥಾನದಲ್ಲಿ ಎಬಿಸಿಡಿ ತಿಳಿಯದ ಹೊಸ ಮುಖಗಳಿಗೆ ಮಣೆ ಹಾಕುವ ಬದಲು ನಾಲ್ಕು ಬಾರಿ ಶಾಸಕರಾಗಿ ಉತ್ತಮ ಅನುಭವ ಪಡೆದಿರುವ ಸಿ.ಟಿ.ರವಿ ಅವರಿಗೆ ಮತ ನೀಡಿದರೆ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ದಿ ಕಾರ್ಯಗಳಾಗುವುದರಲ್ಲಿ ಸಂಶಯವಿಲ್ಲ ಎಂದು ತುರುವೆಕೆರೆ ಮಾಜಿ ಶಾಸಕ ಹಾಗೂ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ್ ಹೇಳಿದರು.

ಚಿಕ್ಕಮಗಳೂರು ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿಯ ಬಿಳೇಕಲ್ಲಹಳ್ಳಿ, ನಿಡಘಟ್ಟ, ನಾಗೇನಹಳ್ಳಿ, ದೇವನೂರು, ಎಸ್.ಬಿದರೆ, ಬಾಣೂರು, ಹೋಚಿಹಳ್ಳಿ, ಹೊಸಹಳ್ಳಿ, ಸಿಂದಿಗೆರೆ, ಹುಲಿಕೆರೆ, ಕಬನಿ, ಕೆ.ಬಿ.ಹಾಳ್, ಈಶ್ವರಹಳ್ಳಿ ಸೇರಿ ದಂತೆ ವಿವಿಧ ಗ್ರಾಮಗಳ ನೇಕಾರರು ಮತ್ತು ದೇವಾಂಗ ಸಮಾಜದ ಬಾಂಧವರನ್ನು ಭೇಟಿ ನೀಡಿ ಶಾಸಕ ಸಿ.ಟಿ.ರವಿ ಪರ ಮಂಗಳವಾರ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

Voters Awareness ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡ ಅವರೊಂದಿಗೆ ಉತ್ತಮ ಒಡನಾಟವನ್ನು ಹೊಂದಿರುವ ಶಾಸಕ ಸಿ.ಟಿ.ರವಿ ಅವರಿಗೆ ಈ ಬಾರಿ ಕ್ಷೇತ್ರದ ಜನತೆ ಅಮೂಲ್ಯವಾದ ಮತ ನೀಡಿ ಜಯಶೀಲರಾಗಿಸಿದ್ದಲ್ಲಿ ರಾಷ್ಟ್ರಮಟ್ಟದಲ್ಲಿ ಚಿಕ್ಕಮಗಳೂರು ಜಿಲ್ಲೆ ಉತ್ತಮ ಮನ್ನಣೆ ಗಳಿಸಲಿದ್ದು ಜಿಲ್ಲೆಯ ಪ್ರತಿಯೊಬ್ಬರಿಗೂ ಇದೊಂದು ಹೆಮ್ಮೆಯ ವಿಷಯವಾಗಲಿದೆ ಎಂದರು.

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಸಣ್ಣ ಸಮಾಜವಾದ ನೇಕಾರರ ಶಾಖಾಮಠ ನಿರ್ಮಿಸಲು ಸುಮಾರು 05 ಕೋಟಿಯಷ್ಟು ಅನುದಾನವನ್ನು ಶಾಸಕ ಸಿ.ಟಿ.ರವಿಯವರ ಪ್ರಯತ್ನದಿಂದ ಬಿಡುಗಡೆಗೊಳಿಸಿದ್ದು ಇದೀಗ ಕಾಲೇಜು ಹಾಗೂ ಮಠವನ್ನು ಸ್ಥಾಪಿಸಿ ಅಭಿವೃದ್ದಿಪಡಿಸಿ ಸಮುದಾಯಕ್ಕೆ ಅನುಕೂಲ ಕಲ್ಪಿಸಿದೆ. ಜೊತೆಗೆ ರಾಜಕೀಯ ಹಾಗೂ ಆರ್ಥಿಕವಾಗಿ ಜನಾಂಗವನ್ನು ಮೇಲೆತ್ತುವ ಕಾರ್ಯದಲ್ಲಿ ತೊಡಗಿದೆ ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ನೇಕಾರ ಮತ್ತು ದೇವಾಂಗ ಸಮಾಜದವರು ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಅನೇಕ ಮಂದಿ ವಾಸಿಸುತ್ತಿದ್ದಾರೆ. ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದೇವಾಲಯ ಜೀರ್ಣೋದ್ದಾರ, ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ 26 ಒಳಪಂಡಗಳೊಂದಿಗೆ ಸುಮಾರು 60 ಲಕ್ಷ ಜನಸಂಖ್ಯೆಯಲ್ಲಿ ಹೊಂದಿರುವ ಜನಾಂಗದವರಿಗೆ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಬಿಜೆಪಿ ಸರ್ಕಾರ ಸ್ಪಂದಿಸುವ ಕಾರ್ಯದಲ್ಲಿ ಮುಂದಾಗಿದೆ ಎಂದರು.

ನೇಕಾರರು ಸೇರಿದಂತೆ ಗ್ರಾಮದ ವಿವಿಧ ಸಮುದಾಯದ ಪಂಗಡದವರು ಜಾತೀಯತೆಯನ್ನು ನೋಡದೇ ಸರ್ವರು ಸಮಾನರಂತೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿರುವ ಶಾಸಕ ಸಿ.ಟಿ.ರವಿ ಅವರಿಗೆ ಮೇ.10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತ ನೀಡುವ ಮೂಲಕ ಅತ್ಯಧಿಕ ಅಂತರದಿಂದ ಗೆಲ್ಲಿಸಲು ಪಣ ತೊಡಬೇಕು ಎಂದು ಮನವಿ ಮಾಡಿಕೊಂಡರು.

ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಸಿ.ಕಲ್ಮರುಡಪ್ಪ ಮಾತನಾಡಿ ಕ್ಷೇತ್ರದ ಶಾಸಕರು ಜಾತ್ಯಾತೀತ ನಿಲುವ ಹೊಂದಿರುವ ನಾಯಕ. ಇತರೆ ಪಕ್ಷದವರು ಜಾತ್ಯಾತೀತೆ ಎಂದು ಹೇಳಿಕೊಂಡು ಇಲ್ಲದಂತೆ ರಾಜಕಾರಣ ಮಾಡುತ್ತಿದ್ದಾರೆ.

ಆದರೆ ಸಿ.ಟಿ.ರವಿ ಅವರು ಎಲ್ಲಾ ಸಮುದಾಯವನ್ನು ಒಗ್ಗಟ್ಟಿನಿಂದ ನಡೆಸಿಕೊಂಡು ತಾಲ್ಲೂಕಿನ ಮೂಲಭೂತ ಸೌಕರ್ಯ ಗಳನ್ನು ಒದಗಿಸಿ ಮನೆ ಮಗನಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ದೇವಾಂಗ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಅರೇಕಲ್ ಪ್ರಕಾಶ್ ಮಾತನಾಡಿ ಇದೀಗ ಪ್ರಾದೇಶಿಕ ಪಕ್ಷವೊಂದು ದೇವಾಂಗ ಜನಾಂಗದ ವ್ಯಕ್ತಿಯೊಬ್ಬರನ್ನು ಚುನಾವಣೆಗೆ ಸ್ಪಂದಿಸಿ ಹಿಂಬದಿಯಿಂದ ಬೇರೆ ಪಕ್ಷಕ್ಕೆ ಬೆಂಬಲಿಸುತ್ತಿದ್ದಾರೆ. ಇದು ಜನಾಂಗಕ್ಕೆ ಮಾಡಿರುವ ದೊಡ್ಡ ದೋಹ್ರ. ಇದನ್ನು ಸಮುದಾಯವು ಪರಿಗಣನೆಗೆ ತೆಗೆದುಕೊಂಡು ಇನ್ನೊ ಮ್ಮೆ ಜನಾಂಗಕ್ಕೆ ಮೋಸವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಈ ಬಾರಿ ಬಿಜೆಪಿಗೆ ಮತ ನೀಡಿ ಬೆಳವಣಿಗೆಗೆ ಸಹ ಕರಿಸಬೇಕು ಎಂದು ತಿಳಿಸಿದರು.

ನಗರಸಭಾ ಮಾಜಿ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ ನೇಕಾರರು ಹಾಗೂ ದೇವಾಂಗವು ಕ್ಷೇತ್ರದಲ್ಲಿ ಶೇ.90 ಮಂದಿ ಬಿಜೆಪಿಯ ಬೆಂಬಲಿದ್ದಾರೆ. ಇದನ್ನು ಹೊಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ಪ್ರತಿಯೊ ಬ್ಬರು ಯಾವುದೇ ಆಮಿಷಕ್ಕೆ ಅಥವಾ ಭರವಸೆಗಳನ್ನು ಒಳಗಾಗದೇ ಅಭಿವೃದ್ದಿ ಹರಿಕಾರ ಶಾಸಕ ಸಿ.ಟಿ.ರವಿ ಅವರಿಗೆ ಮತ ನೀಡಿ ಜಯಶೀಲರಾಗಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ದೇವಾಂಗ ಸಂಘದ ರಾಜ್ಯ ಕಾರ್ಯದರ್ಶಿ ಕಾಯಿ ರವಿ, ಜಿಲ್ಲಾ ಉಪಾಧ್ಯಕ್ಷ ಸತ್ಯಮೂರ್ತಿ, ಖಜಾಂಚಿ ಪ್ರಕಾಶ್, ನಿರ್ದೇಶಕ ಕೆ.ಎಸ್.ಪ್ರಕಾಶ್, ವಿಶೇಷ ಆಹ್ವಾನಿತ ಶಕುನಗಿರಿ ರಮೇಶ್, ಸಂಘಟನಾ ಕಾರ್ಯದರ್ಶಿ ಎಸ್.ಆರ್.ದಿನೇಶ್, ಮುಖಂಡ ಬಿ.ಕೆ.ಬಸವರಾಜ್ ಹಾಗೂ ವಿವಿಧ ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...