BJP Manifesto ಬಡವರು, ಆರ್ಥಿಕ ಅಶಕ್ತರು, ಸಾಮಾಜಿಕ ಶೋಷಿತರಿಗಾಗಿ ಸ್ವಾತಂತ್ಯ್ರ ಬಂದ ಸಂದರ್ಭದಿಂದಲೂ ಕಾಂಗ್ರೇಸ್ ಪಕ್ಷ ನೂರಾರು ಉಚಿತ ಯೋಜನೆಗಳಾದ ಆಹಾರ, ಜಮೀನು, ನಿವೇಶನ ಹಂಚಿಕೆ, ಆರ್ಥಿಕ ಸಹಾಯಧನ ಕೊಡುತ್ತ ಬಂದಿರುವುದನ್ನು ಟೀಕಿಸುತ್ತಿದ್ದ ಭಾರತೀಯ ಜನತಾ ಪಕ್ಷದ ಘಟಾನುಘಟಿ ನಾಯಕರು ಚುನಾವಣೆಯಲ್ಲಿ ಸೋಲುತ್ತೇವೆಂಬ ಭಯಕ್ಕೆ ಬಿದ್ದು ಉಚಿತ ಅಗ್ಗದ ಯೋಜನೆಗಳನ್ನು ಘೋಷಿಸಿ ತಮ್ಮ ಜನವಿರೋಧಿ ಸಿದ್ದಾಂತ ಮತ್ತು ಮಾನಸಿಕ ಧಿವಾಳಿತನವನ್ನು ಪ್ರದರ್ಶಿದ್ದಾರೆಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ಅವರು ಟೀಕಿಸಿದ್ದಾರೆ.
ಭಾರತೀಯ ಜನತಾ ಪಕ್ಷದ ಮೊದಲ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಜನರಿಗೆ ಉಚಿತವಾಗಿ ಶಿಕ್ಷಣ, ಆರೋಗ್ಯ ಮತ್ತು ವಸತಿಯನ್ನು ಮಾತ್ರವೇ ಕೊಡಬೇಕು, ಇವುಗಳನ್ನು ಹೊರತುಪಡಿಸಿ ಯಾವುದೆ ಸೌಲಭ್ಯಗಳನ್ನು ಜನರಿಗೆ ಕೊಟ್ಟರೆ ದೇಶದ ಜನಗಳು ಸೋಂಭೇರಿಗಳಾಗುತ್ತಾರೆಂದು ಹೇಳಿದ್ದನ್ನು ವೇಧವಾಕ್ಯವೆಂದು ನಂಬಿರುವ ಇಂದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಬಿ.ಜೆ.ಪಿ. ಪಕ್ಷದ ಹಿರಿಯ, ಕಿರಿಯ ರಾಜಕಾರಣಿಗಳು, ಕಾಂಗ್ರೇಸ್ ಪಕ್ಷ ಜನರಿಗೆ ಉಚಿತ ಸೌಲಭ್ಯಗಳ ಕೊಡುತ್ತಿದ್ದುದನ್ನು ರಾಜಕೀಯ ಸಭೆ-ಸಮಾರಂಭಗಳಲ್ಲಿ ಟೀಕಿಸುತ್ತಿದ್ದರು. ಆದರೆ, ಈಗ ಬಿ.ಜೆ.ಪಿ. ವಿಘ್ನಸಂತುಷ್ಟಿಗಳಿಗೆ ಅದ್ಯಾವ ಜ್ಞಾನೋದಯ ಆಯಿತೋ, ರಾಜ್ಯದ ಜನರಿಗೆ ಉಪಯೋಗಕ್ಕೆ ಬಾರದ ಹಲವು ಉಚಿತ ಅಗ್ಗದ ಯೋಜನೆಗಳನ್ನು ಘೊಷಿಸಿರುವುದು ನೋಡಿದರೆ ಭಾರತೀಯ ಜನತಾ ಪಕ್ಷದ ನಾಯಕರಿಗೆ ಇದುವರೆಗೆ ರಾಜಕೀಯ ಪ್ರಬುಧ್ದತೆ ಏನಾದರೂ ಇತ್ತೇ ಎನ್ನುವ ಅನುಮಾನ ಉದ್ಬವಿಸಿರುತ್ತದೆ ಎಂದು ವಕ್ತಾರರಾದ ವೈ.ಬಿ.ಚಂದ್ರಕಾಂತ್ ಆರೋಪಿಸಿದ್ದಾರೆ.
ಆಡಳಿತದ ಅನುಭವ ಇಲ್ಲದ ಬಿ.ಜೆ.ಪಿ. ನಾಯಕರು ಬರೀ ದುರಾಡಳಿತ, ಭ್ರಷ್ಠಾಚಾರವನ್ನೆ ಆಡಳಿತವೆಂದು ನಂಬಿ ಜನರ ನಂಬಿಕೆಯ ದುರುಪಯೋಗ ಮಾಡಿಕೊಂಡು ದುರಾಡಳಿತ ನಡೆಸುತ್ತ ಜನರು ಕಷ್ಟಗಳಿಗೆ ಸ್ಪಂಧಿಸದೆ ಭಾರತದಲ್ಲಿ ಆರ್ಥಿಕ ಸಂಕಷ್ಟ ಇದ್ದರೂ ಅಗ್ಗದ ಪ್ರಚಾರಕ್ಕಾಗಿ ನೂರಾರು ವಿದೇಶಗಳ ಸುತ್ತುವುದು, ಕೆಲವು ದೇಶಗಳಿಗೆ ಸಾಲ ನೀಡಿ ದೊಡ್ಡಣ್ಣ ಎನಿಸಿಕೊಳ್ಳಲು ಹೋಗಿ ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನೇ ಮಕಾಡೆ ಮಲಗಿಸಿದ್ದಾರೆ.
BJP Manifesto ಬಿ.ಜೆ.ಪಿ. ಸರ್ಕಾರದ 9 ವರ್ಷಗಳ ದುರಾಡಳಿತದ ಬಣ್ಣ ಬಯಲಾಗಿದ್ದರಿಂದ ತಾವೆಲ್ಲಿ ಸೋಲುತ್ತೇವೆಂದು ಭಯಗೊಂಡು, ಬರುವ ಚುನಾವಣೆಯಲ್ಲಿ ಜನರ ಮತಗಳನ್ನು ಪಡೆಯುವ ಏಕೈಕ ಉದ್ದೇಶದಿಂದ ಅಪ್ರಯೋಜಕ ಯೋಜನೆಗಳನ್ನು ಘೋಷಿಸಿರುವ ಬಿ.ಜೆ.ಪಿ ಸರ್ಕಾರಕ್ಕೆ ರಾಜ್ಯದ ಜನರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆಂದು ಮತ್ತು ಕಾಂಗ್ರೇಸ್ ಪಕ್ಷ ಪ್ರಚಂಡ ಬಹುಮತದಿಂದ ಆಡಳಿತಕ್ಕೆ ಬರುವುದನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ರಂತವರು ಯಾರೇ ಬಂದರೂ ತಡೆಯಲಾಗದು ಎಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.