Special Inspection Program ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ ಚುನಾವಣಾ ಪ್ರಯುಕ್ತ ಮಾರ್ಚ್ 29 ರಿಂದ ಏಪ್ರಿಲ್ 03 ರವರೆಗೆ ವಿಶೇಷ ತಪಾಸಣಾ ಕಾರ್ಯಕ್ರಮ ಕೈಗೊಂಡಿದ್ದಾರೆ.
106 ವಾಹನಗಳನ್ನು ಮುಟ್ಟುಗೋಲು ಹಾಕಿ, ಒಟ್ಟು ರೂ.25,48,043 ಗಳನ್ನು ವಸೂಲು ಮಾಡಲಾಗಿದೆ.
Special Inspection Program ಒಟ್ಟು 1191 ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ನಿಯಮಬಾಹಿರವಾಗಿ ಮಾರ್ಪಾಡುಗೊಳಿಸಲಾದ ವಾಹನಗಳ ಸಂಖ್ಯೆ 03, ಪರವಾನಗಿ ಉಲ್ಲಂಘನೆ ಮಾಡಿದ ಪ್ರಕರಣ 01, ಸರಕು-ಸಾಗಣೆ ವಾಹನಗಳಲ್ಲಿ ಜನರನ್ನು ಕೊಂಡೊಯ್ಯುವ ಪ್ರಕರಣ 06, ದೋಷಪೂರಿತ ನೋಂದಣಿ ಫಲಕಗಳುಳ್ಳ ವಾಹನ 01, ಪರವಾನಗಿರಹಿತ/ಅರ್ಹತಾ ಪತ್ರ ನವೀಕರಿಸದ/ತೆರಿಗೆ ಪಾವತಿಸದ/ಅಧಿಕ ಭಾರ ಕೊಂಡೊಯ್ಯುವ ಪ್ರಕರಣ 228 ಸೇರಿದಂತೆ ಒಟ್ಟು 239 ಪ್ರಕರಣಗಳನ್ನು ದಾಖಲಿಸಿ ರೂ.11,01,009 ತೆರಿಗೆ ಹಾಗೂ ರೂ.14,47,034 ದಂಡದ ಮೊತ್ತ ಸೇರಿ ಒಟ್ಟು ರೂ.25,48,043 ಗಳನ್ನು ವಸೂಲು ಮಾಡಲಾಗಿದೆ. ಹಾಗೂ ಒಟ್ಟು 106 ವಾಹನಗಳನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ ತಿಳಿಸಿದ್ದಾರೆ.