Vanijya Kalarava Program ಇಂದಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವವರು ಕಾಲೇಜಿನ ಹಳೆಯ ವಿದ್ಯಾರ್ಥಿಗಳು, ಜೀವನದಲ್ಲಿ ಯಶಸ್ಸು ಸಾಧಿಸಲು ಹಾಗೂ ಕಾಲೇಜಿನ ಕೀರ್ತಿ ಹೆಚ್ಚಿಸಲು ಸಲಹೆ ನೀಡುತ್ತಾರೆ ಎಂದು ಹಿರಿಯ ವಿದ್ಯಾರ್ಥಿ ಶರೀಫ್ ಹೇಳಿದರು.
ಶಿವಮೊಗ್ಗದ ಎಟಿಎನ್ ಸಿಸಿ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿ ಬಳಗ ಆಯೋಜಿಸಿದ್ದ “ವಾಣಿಜ್ಯ ಕಲರವ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಕಾಲೇಜಿನ ಆಸ್ತಿ, ನಮ್ಮ ಹಳೆಯ ವಿದ್ಯಾರ್ಥಿಗಳು. ಇಂದು ರಾಜ್ಯ, ದೇಶಾದ್ಯಂತ ಅತ್ಯುನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಲೇಜಿಗೆ ಹಿರಿಮೆ ಹೆಚ್ಚಿಸಿದ್ದಾರೆ. ಈ ರೀತಿ ಕಾರ್ಯಕ್ರಮಗಳು ಸ್ನೇಹ ಜೀವನಕ್ಕೆ ನಾಂದಿ ಎಂದು ತಿಳಿಸಿದರು.
ಕಾಲೇಜಿನ ಮಾಜಿ ಪ್ರಾಚಾರ್ಯ ಹೆಚ್.ಎಮ್.ಸುರೇಶ್ ಕಾಲೇಜಿನಲ್ಲಿ ಹಿಂದೆ ಹಲವು ಸಂಘಟನೆ ಪ್ರಾರಂಭಿಸಿದರು.
ಇಂದಿನ ಸಂಘಟನೆ ನೊಂದಾಯಿಸಿದ್ದು, ಪ್ರತೀ ಸಾಲಿನಲ್ಲೂ ಲೆಕ್ಕಪತ್ರ ಮಂಡಣೆ ಮಾಡುತ್ತಿದ್ದು, ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದರು.
Vanijya Kalarava Program ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್.ವಾಗೇಶ್ ಸಂತೃಪ್ತಿ ಜೀವನಕ್ಕೆ ಸ್ನೇಹದ ಕೊಡುಗೆ ಹೆಚ್ಚು. ಜೀವನದ ಬಂಗಾರದ ಸಮಯ ಕಳೆದ ಪ್ರದೇಶದಲ್ಲಿ ಹಳೆ ನೆನಪುಗಳೊಂದಿಗೆ, ಹೊಸ ನೆನಪು ಕೊಂಡಯ್ಯಲು ಕಾರ್ಯಕ್ರಮ ಆಯೋಜಿಸಲಾಗಿದೆ. ಕಾಲೇಜು ಪ್ರಾರಂಭದಿಂದ ಕಳೆದ ಸಾಲಿನ ವಿದ್ಯಾರ್ಥಿಗಳು ಇಂದು ಭಾಗವಹಿಸಿದ್ದು, ಹಳೆಯ ವಿದ್ಯಾರ್ಥಿಗಳ ಪ್ರತಿಭೆ ಅನಾವರಣ ಗೊಳ್ಳಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.