Friday, December 5, 2025
Friday, December 5, 2025

Amit Shah Road Show in Shivamogga ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರ ಅಮಿತ್ ಶಾ ಭರ್ಜರಿ‌ ರೋಡ್ ಶೋ

Date:

Amit Shah Road Show in Shivamogga ಶಿವಮೊಗ್ಗದಲ್ಲಿ ಮೊದಲ ಸಲ ರೋಡ್ ಶೋ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಶಿವಮೊಗ್ಗದ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು.

ಅಮಿತ್ ಶಾ ಅವರು ರೋಡ್ ಶೋ ನಡೆಯುವ ಮಾರ್ಗವನ್ನು ಮಧ್ಯಾಹ್ನ 1 ಗಂಟೆಯಿಂದಲೇ ಬಂದ್ ಮಾಡಲಾಗಿತ್ತು.
ಇದರಿಂದ ಬಿಎಚ್ ರೋಡ್, ನೆಹರು ರಸ್ತೆ, ದುರ್ಗಿ ಗುಡಿ, ಹಳೆ ಜೈಲು ರಸ್ತೆ ಮಾರ್ಗಗಳಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು.

ಹೀಗಾಗಿ ಸಂಜೆಯ ಹೊತ್ತಿಗೆ ಶಾಪಿಂಗ್ ಬರುವ ಸಾರ್ವಜನಿಕರಿಗೆ ಹಿರಿಸುಮುರಿಸಾಗಿತ್ತು. ದಿನಸಿ ಅಂಗಡಿ, ತರಕಾರಿ ಅಂಗಡಿಗಳು ಬಂದಾಗಿ ಜನ ಸಾಮಾನ್ಯರಿಗೆ ತೊಂದರೆಯಾಯಿತ್ತು.

5:30 ಗಂಟೆಗೆ ಆರಂಭವಾಗಬೇಕಿದ್ದ ರೋಡ್ ಶೋ ಒಂದುವರೆ ಗಂಟೆ ತಡವಾಗಿ ಆರಂಭವಾಯಿತು. ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಜೈ ಶ್ರೀ ರಾಮ್, ಜೈ ಮೋದಿ, ಜೈ ಅಮಿತ್ ಶಾ, ಜೈ ಯಡಿಯೂರಪ್ಪ ಪಕ್ಷದ ಪರವಾಗಿ ಘೋಷಣೆಗಳು ಮೊಳಗುತ್ತಿದ್ದವು.

ಬಿಗಿ ಭದ್ರತೆಯಿಂದ ಕೂಡಿದ ಕಾರ್ ಮೂಲಕ ಅಮಿತ್ ಶಾ ಅವರು ಶಿವಪ್ಪ ನಾಯಕ ವೃತ್ತವನ್ನು ತಲುಪಿದರು.

ಶಿವಪ್ಪ ನಾಯಕ ವೃತ್ತದಲ್ಲಿ ಆರಂಭಗೊಂಡ ರೋಡ್ ಶೋ, ಅಮೀರ್ ಅಹ್ಮದ್ ಸರ್ಕಲ್, ನೆಹರು ರಸ್ತೆ, ಗೋಪಿ ಸರ್ಕಲ್, ಜೈಲು ವೃತ್ತ ತಲುಪಿ ಮುಕ್ತಾಯವಾಯಿತು.

ಚಂಡೆ, ಡೊಳ್ಳು, ವೀರಗಾಸೆ,ಮುಂತಾದ ಕಲಾತಂಡಗಳಿಂದ ಕೂಡಿದ ರೋಡ್ ಶೋ ಮನಮೋಹಕವಾಗಿತ್ತು.

Amit Shah Road Show in Shivamogga ಈ ಸಂದರ್ಭದಲ್ಲಿ ಸಂಸದ ಬಿ. ವೈ ರಾಘವೇಂದ್ರ, ಶಾಸಕ ಕೆ ಎಸ್ ಈಶ್ವರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಶಿವಮೊಗ್ಗ ನಗರ ವಿಧಾನ ಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಚೆನ್ನಬಸಪ್ಪ, ಕೆ. ಇ. ಕಾಂತೇಶ್ ಇನ್ನು ಮುಂತಾದವರು ರೋಡ್ ಶೋ ನಲ್ಲಿ ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...