Alka Lamba ಬಿಜೆಪಿಯು ಕರ್ನಾಟಕದಲ್ಲಿ ಯುವ ಪೀಳಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿದೆ. ಅಡಿಕೆ ಬೆಳೆಗಾರರಿಗೂ ಅನ್ಯಾಯ ಮಾಡಿದೆ. ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಆದ್ದರಿಂದ, ಆಡಳಿತ ವಿರುದ್ಧ ಸುನಾಮಿಯೇ ಇದೆ. ಲೂಟಿ ಮತ್ತು ಸುಳ್ಳಿನ ಸರ್ಕಾರದಿಂದ ಜನ ಬೇಸತ್ತಿದ್ದಾರೆ ಎಂದು ಎನ್ ಎಸ್ ಯು ಐ ಮಾಜಿ ಅಧ್ಯಕ್ಷೆ ಅಲಕಾ ಲಂಬಾ ಅವರು ಹೇಳಿದ್ದಾರೆ.
ಶಿವಮೊಗ್ಗದ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ವಿರುದ್ಧ ಅಲೆಯಷ್ಟೇ ಅಲ್ಲ. ಸುನಾಮಿಯೇ ಎದ್ದಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಅಲ್ಲ. ಇದು ಹಿಂಸೆ ಮತ್ತು ಅಹಿಂಸೆ, ಕೋಮುವಾದ ಮತ್ತು ಜಾತ್ಯಾತೀತತೆ, ಗೋಡ್ಸೆ ಮತ್ತು ಗಾಂಧಿ ನಡುವೆ ಕದನವಾಗಿದೆ. ಇದರಲ್ಲಿ ಕಾಂಗ್ರೆಸ್ ಜಯಗಳಿಸುವ ಪೂರ್ಣ ವಿಶ್ವಾಸವಿದೆ. ಮತದಾರರು ಪೂರ್ಣ ಬಹುಮತ ನೀಡಬೇಕೆಂದು ಎಂದು ಹೇಳಿದ್ದಾರೆ.
Alka Lamba ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಏನಿಲ್ಲ ಪ್ರಗತಿ ಸಾಧಿಸಲಿದೆ ಎನ್ನುವುದನ್ನು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ. ಇದರ ಬಗ್ಗೆ ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಹುರುಳಿಲ್ಲ. ಕಾರ್ಯಾನುಷ್ಟಾನಕ್ಕೆ ಬರಬಹು ದಾದ ವಿಚಾರಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಂಗೆ ಆಗುತ್ತದೆ ಎಂದು ಬಿಜೆಪಿ ಹಬ್ಬಿಸುತ್ತಿದೆ. ಆದರೆ, ಯಾರ ಅವಧಿಯಲ್ಲಿ ಕೋಮು ಗಲಭೆಗಳಾಗಿದೆ ಎನ್ನುವುದು ಮತದಾರರಿಗೆ ತಿಳಿದಿದೆ. ವಿನಹ ಕೋಮು ಹೆಸರಿನಲ್ಲಿ ಪ್ರಚೋದನೆ ನೀಡುತ್ತಿಲ್ಲ ಎಂದು ಹೇಳಿದ್ದಾರೆ.