International Labours Day ಪ್ರತಿ ವರ್ಷ ಮೇ 1ರಂದು ದೇಶದಾದ್ಯಂತ ಅಂತರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಕಾರ್ಮಿಕರ ಶ್ರಮವನ್ನ ಗೌರವಿಸುವ ಉದ್ದೇಶವನ್ನು ಕಾರ್ಮಿಕರ ದಿನಾಚರಣೆ ಒಳಗೊಂಡಿದೆ.
ಭಾರತದಲ್ಲಿ 1923 ರಂದು ಕಾರ್ಮಿಕ ದಿನಾಚರಣೆಯನ್ನು ಮೊಟ್ಟ ಮೊದಲಿಗೆ ಆಚರಿಸಲಾಯಿತು. ಮೇ 1 ರಂದು ಕಾರ್ಮಿಕರ ದಿನಾಚರಣೆಯನ್ನು ಆಚರಿಸುವ ಜೊತೆಗೆ ಕಾರ್ಮಿಕರಿಗೆ ರಜೆಯನ್ನು ನೀಡಲಾಗುತ್ತದೆ.
ಕಾರ್ಮಿಕ ದಿನದ ಇತಿಹಾಸವೇನು ಎಂಬುವುದನ್ನು ತಿಳಿದುಕೊಳ್ಳುವುದಾದರೆ…
ಅಮೆರಿಕದಲ್ಲಿ ಕೈಗಾರಿಕಾ ಕ್ರಾಂತಿಯ ಬಳಿಕ ಕಾರ್ಮಿಕರನ್ನು ವಿಪರೀತವಾಗಿ
ದುಡಿಸಿಕೊಳ್ಳುತ್ತಿದ್ದರು. 1886 ರಲ್ಲಿ ಕಾರ್ಮಿಕರ ಒಕ್ಕೂಟವು ಒಂದು ದಿನಕ್ಕೆ 16 ಗಂಟೆಗಳ ಕೆಲಸದ ಅವಧಿಯ ಬದಲಿಗೆ 8 ಗಂಟೆಗಳ ಕಾಲ ಕೆಲಸ ನೀಡಬೇಕು ಎಂದು ಒತ್ತಾಯಿಸಿ ಮುಷ್ಕರಗಳನ್ನ ಕೈಗೊಂಡರು.
ಈ ಮುಷ್ಕರದಲ್ಲಿ ಅನೇಕ ಕಾರ್ಮಿಕರು ಭಾಗಿಯಾದರು.ಇದರಿಂದ ಜನಸಂದಣಿ ಹೆಚ್ಚಾಯಿತು. ಕೆಲವು ಕಾರ್ಮಿಕರು ಜನಸಂದಣಿ ತುಳಿತಕ್ಕೆ ಒಳಗಾಗಿ ಸಾವನಪ್ಪಿದರು. ಇನ್ನೂ ಕೆಲವು ಕಾರ್ಮಿಕರು ಪೋಲಿಸ್ ದಾಳಿಯಿಂದ ತಮ್ಮ ಪ್ರಾಣವನ್ನು ಕಳೆದುಕೊಂಡರು.
ಈ ಘಟನೆಯ ಬಳಿಕ 1916ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನವು ಎಂಟು ಅವಧಿ ಕೆಲಸವನ್ನು ಘೋಷಿಸಿತು.
1889ರಲ್ಲಿ ಕಾರ್ಮಿಕರ ಹಕ್ಕುಗಳ ಹೋರಾಟಕ್ಕೆ ಮತ್ತು ಕಾರ್ಮಿಕರ ಪ್ರಭುತ್ವದ ನೆನಪಿಗೆ ಮೊಟ್ಟಮೊದಲ ಬಾರಿಗೆ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು ಎಂದು ಹೇಳಲಾಗುತ್ತದೆ.
ಕಾರ್ಮಿಕರ ದಿನಾಚರಣೆಯ ಸಮಾಜಕ್ಕೆ ಹಾಗೂ ಕಾರ್ಮಿಕರ ಕೊಡುಗೆ ಅವರ ತ್ಯಾಗವನ್ನು ತಿಳಿಸಿ ಕೊಡುವ ಉದ್ದೇಶ ಒಳಗೊಂಡಿದೆ. ಜೊತೆಗೆ ಕಾರ್ಮಿಕರ ಕಾನೂನು, ಕಾರ್ಮಿಕರ ಹಕ್ಕುಗಳ ಉಲ್ಲಂಘನೆ, ಕೆಲಸದ ಅವಧಿ ಮೊದಲಾದವುಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಮುಖ ಉದ್ದೇಶ ಕಾರ್ಮಿಕರ ದಿನಾಚರಣೆ ಒಳಗೊಂಡಿದೆ.
International Labours Day ಕಾರ್ಮಿಕರೇ ಜಗತ್ತಿನ ಮಹಾನ್ ಶಕ್ತಿ. ದೇಶ ಮತ್ತು ರಾಜ್ಯದ ಅಭಿವೃದ್ಧಿಗಾಗಿ ದುಡಿವ ಎಲ್ಲಾ ಕಾರ್ಮಿಕ ವರ್ಗದವರಿಗೆ ಕೆ ಲೈವ್ ನ್ಯೂಸ್ ವತಿಯಿಂದ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು…