Mallikarjun Kharge ಅಂಬೇಡ್ಕರ್ ಅವರು ಕಾಂಗ್ರೆಸ್ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿದ್ದರು.ಸಂವಿಧಾನ ರಚನಾ ಸಮಿತಿಗೆ ಅಂಬೇಡ್ಕರ್ ಅವರನ್ನು ನೇಮಕ ಮಾಡಿದ್ದಕ್ಕೆ ಹರ್ಷವನ್ನೂ ವ್ಯಕ್ತಪಡಿಸಿದ್ದರು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ತಿಳಿಸಿದ್ದಾರೆ
ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಆ ಎಲ್ಲ ದಾಖಲೆಗಳು ಇವೆ.1949 ಸೆಪ್ಟಂಬರ್ ತಿಂಗಳ ಭಾಷಣದಲ್ಲೂ ಅಂಬೇಡ್ಕರ್ ಕಾಂಗ್ರೆಸ್ ಹೊಗಳಿದ್ದಾರೆ ಎಂದು ಹೇಳಿದ್ದಾರೆ.
ಸಂವಿಧಾನ ಸರಿಯಿಲ್ಲ ಎಂದು ಆರ್ ಎಸ್ ಎಸ್ ಟೀಕೆ ಮಾಡಿತ್ತು.ಮನುಸ್ಮೃತಿಯೇ ಸಂವಿಧಾನವಾಗಬೇಕಿತ್ತು ಎಂದು ಟೀಕೆ ಮಾಡಿದವರು ಆರ್ ಎಸ್ ಎಸ್ .
ಹೀಗಿರುವಾಗ ಅಂಬೇಡ್ಕರ್ ಗೆ ಅವಮಾನ ಮಾಡಿದವರು ಯಾರು.ಭಾರತದ ಧ್ವಜದಲ್ಲಿ ಮೂರು ಬಣ್ಣಗಳು ಇರುವುದು ಶುಭವಲ್ಲ ಎಂದು ಟೀಕೆ ಮಾಡಿದವರು ಆರ್ ಎಸ್ ಎಸ್ ನವರು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂವಿಧಾನ ಹುಟ್ಟುತ್ತಿದ್ದಂತೆ ಇಷ್ಟೆಲ್ಲಾ ಟೀಕೆ ಮಾಡಿ ಅವಮಾನ ಮಾಡಿದವರು ಆರ್ ಎಸ್ ಎಸ್.
ಅರ್ ಎಸ್ ಎಸ್ ನ ಫಾಲೋ ಮಾಡುವ ಈ ಮಹಾನ್ ನಾಯಕರು ಕಾಂಗ್ರೆಸ್ ಅಂಬೇಡ್ಕರ್ ಗೆ ಅವಮಾನ ಮಾಡಿದೆ ಎಂದು ಹೇಳುತ್ತಾರೆ.
ಷೆಡ್ಯುಲ್ ಕ್ಯಾಸ್ ವೋಟ್ ಸೆಳೆಯಲು ತಿರುಚಿ ಮುರುಚಿ ಹೇಳಿಕೆ ನೀಡಲಾರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.
ಷೆಡ್ಯುಲ್ ಕ್ಯಾಸ್ಟ್ ಜನ ಬುದ್ಧಿವಂತರಾಗಿದ್ದಾರೆ.
ಎಲ್ಲ ವರ್ಗದ ಜನರು ಪ್ರಜ್ಞಾವಂತರಿದ್ದಾರೆ.
ಜನರನ್ನು ಹುಚ್ಚರನ್ನಾಗಿಸಲು ಮೋದಿ ಅವರು ಹೋಗಬಾರದು.ಜನರ ಬಳಿ ಡಾಕ್ಯುಮೆಂಟ್ ಇವೆ. ನಿಮಗೆ ತಕ್ಕ ಉತ್ತರ ನೀಡುತ್ತಾರೆ ಎಂದು ತಿಳಿಸಿದ್ದಾರೆ.
Mallikarjun Kharge ಎರಡು ಕೋಟಿ ಉದ್ಯೋಗ ವರ್ಷಕ್ಕೆ ನೀಡುತ್ತೇವೆ ಎಂದಿದ್ದರು ಅದರ ಲೆಕ್ಕ ಕೊಡಿ.
ಪ್ರತಿಯೊಬ್ಬರ ಅಕೌಂಟ್ ಗೆ 15 ಲಕ್ಷ ಹಾಕುತ್ತೇನೆ ಎಂದಿದ್ದಿರಿ ಅದರ ಲೆಕ್ಕ ಕೊಡಿ.ಸಿಲಿಂಡರ್ ಬೆಲೆ 410 ರೂಪಾಯಿ ಇದ್ದಾಗ ಹೋರಾಟ ಮಾಡಿದ್ದಿರಿ. ಈಗ ಎಷ್ಟಾಗಿದೆ ಎಂಬ ಲೆಕ್ಕ ಕೊಡಿ.
ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರ ಬಗ್ಗೆ ಲೆಕ್ಕಕೊಡಿ.ರಾಜ್ಯದಲ್ಲಿ ನಿರುದ್ಯೋಗ ಕಡಿಮೆ ಮಾಡಲು ಏನು ಮಾಡಿದ್ದೀರಿ.
ರಾಜ್ಯದ ಸುಮಾರು 2.50 ಲಕ್ಷ ಹುದ್ದೆಗಳು ಖಾಲಿ ಇವೆ.
ಕೇಂದ್ರ ಸರ್ಕಾರದಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇವೆ. ಆದರೆ ಯಾವುದೇ ನೇಮಕಾತಿ ಮಾಡಿಕೊಳ್ಳುತ್ತಿಲ್ಲ.
ಇಂಥ ಸರ್ಕಾರ ಮತ್ತೆ ಬರಬೇಕಾ ಎಂದು ಖರ್ಗೆ ಅವರು ಪ್ರಶ್ನಿಸಿದ್ದಾರೆ.