Mallikarjun Kharge ರಾಜ್ಯದಲ್ಲಿ ಕಾಂಗ್ರೆಸ್ ಗೆ ಉತ್ತಮ ವಾತಾವರಣವಿದೆ.
ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
ಕಾಂಗ್ರೆಸ್ ಹಿಂದೆ ಏನು ಅಭಿವೃದ್ಧಿ ಕೆಲಸ ಮಾಡಿದೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ.
ಇಂದಿನ ಸರ್ಕಾರದ ಆಡಳಿತ ಹೇಗೆ ಇದೆ ಎಂಬುದು ಜನರಿಗೆ ಗೊತ್ತಿದೆ ಎಂದು ಎ ಐ ಸಿ ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ,
ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ.
ಪಿಎಸ್ಐ ನೇಮಕಾತಿ ಇಂಜಿನಿಯರ್ ಗಳ ನೇಮಕಾತಿ ಈ ರೀತಿ ಹಲವು ನೇಮಕಾತಿಗಳಲ್ಲಿ ಭ್ರಷ್ಟಾಚಾರ ನಡೆದಿದೆ.
ಗುತ್ತಿಗೆ ಆಧಾರದ ನೇಮಕಾತಿಯಲ್ಲಿಯೂ ಭ್ರಷ್ಟಾಚಾರ ಮಾಡಿರುವುದು ಈ ಸರ್ಕಾರದ ಸಾಧನೆ
ರಾಜ್ಯದಲ್ಲಿರುವುದು 40% ಸರ್ಕಾರ. ಗುತ್ತಿಗೆದಾರನೇ ಪ್ರಧಾನಿ, ಗವರ್ನರ್, ರಾಷ್ಟ್ರಪತಿ ಎಲ್ಲರಿಗೂ ಸಹ ಪತ್ರ ಬರೆದಿದರೂ ಯಾವುದೇ ಕ್ರಮ ಕೈಗೊಂಡಿಲ್ಲ.
ಆದರೆ ಪ್ರಧಾನಿ ತಮ್ಮ ಭಾಷಣದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತಿದ್ದೇವೆ ಎಂದು ಹೇಳುತ್ತಲೇ ಇದ್ದಾರೆ ಎಂದು ಹೇಳಿದ್ದಾರೆ.
ಪ್ರಧಾನಿ ತಮ್ಮ ಭಾಷಣದಲ್ಲಿ ನಾ ಖಾವೂಂಗಾ ನಾ ಖಾನೆದೂಂಗ ಎನ್ನುತ್ತಿದ್ದರು.
ಆದರೆ ಪ್ರಧಾನಿ ನರೇಂದ್ರ ಮೋದಿ ಖಾವೂಂಗ ಮಾಡುವವರನ್ನೇ ತಮ್ಮ ಪಕ್ಕ ಕೂರಿಸಿಕೊಂಡಿದ್ದಾರೆ.
ಹೀಗಾಗಿ ಇದೀಗ ತಮ್ಮ ಭಾಷಣದಲ್ಲಿ ನಾ ಖಾವೂಂಗಾ ನಾ ಖಾನೆದೂಂಗ ಎನ್ನುವ ಮಾತು ಹೇಳುವುದು ಕಡಿಮೆ ಮಾಡಿದ್ದಾರೆ
ನರೇಂದ್ರ ಮೋದಿ ಅವರು ರಾಜ್ಯಕ್ಕೆ ಯಾವುದೇ ದೊಡ್ಡ ಕೊಡುಗೆ ಕೊಟ್ಟಿಲ್ಲ.
ಕೇವಲ ಕಾಂಗ್ರೆಸ್ ಗೆ ಬೈಯುವುದಷ್ಟೇ ಅವರ ಕೆಲಸವಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
Mallikarjun Kharge ನಮ್ಮ ಮಾತುಗಳನ್ನು ತಿರುಚಿ ಮಾತನಾಡುತ್ತಿರುವುದು ಸರಿಯಲ್ಲ.
ಎಲ್ಲಿ ಷೆಡುಲ್ ಕ್ಯಾಸ್ಟ್ ವೋಟ್ ಬೇಕೋ ಅಲ್ಲಿ ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದೆ ಎನ್ನುತ್ತಾರೆ.
ಮೋದ ತಮಗೆ ಕಾಂಗ್ರೆಸ್ 91 ಬಾರಿ ಬೈದಿದೆ ಎಂದು ಹೇಳಿದ್ದಾರೆ. ಅದ್ಹೇಗೆ ಬೈದಿದನ್ನು ನೆನಪಿಟ್ಟುಕೊಂಡಿದ್ದಾರೋ ಗೊತ್ತಿಲ್ಲ.
ಇದೇ ಪ್ರಧಾನಿ ಹಾಗೂ ಬಿಜೆಪಿ ನಾಯಕರು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಎಷ್ಟು ಸಲ ಬೈದಿದ್ದಾರೆ ಎಂಬುದನ್ನು ಅರಿತುಕೊಳ್ಳಲಿ.
ಕಾಂಗ್ರೆಸ್ಸಿಗರು ಬೈದರು ಎಂದು ಸಿಂಪತಿ ಗಿಟ್ಟಿಸಿಕೊಳ್ಳಲು ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಕ್ಷೇತ್ರದ ವಿಧಾನಸಭಾ ಚುನಾವಣೆಯ ಅಭ್ಯರ್ಥಿ H.C ಯೋಗೇಶ್ ಇನ್ನು ಮುಂತಾದವರು ಉಪಸ್ಥಿತರಿದ್ದರು.