Application Invitation for Various Courses in Kuvempu University ಕುವೆಂಪು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 2023-24ನೇ ಶೈಕ್ಷಣಿಕ ಸಾಲಿನಿಂದ ಹೊಸದಾಗಿ ಕಲಾ, ವಿಜ್ಞಾನ, ವಾಣಿಜ್ಯ, ಆಡಳಿತ ನಿರ್ವಹಣೆ, ದೈಹಿಕ ಶಿಕ್ಷಣ, ಬಿ.ವೋಕ್ ವೃತ್ತಿಪರ ವಿಷಯಗಳು ಹಾಗೂ ಡಿಪ್ಲೋಮಾ ಕೋರ್ಸ್ ವಿಷಯಗಳ ಪದವಿ ಕಾಲೇಜುಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರದ ಅನುದಾನವಿಲ್ಲದೆ ನಡೆಸಲು ಆರ್ಥಿಕ ಸಾಮರ್ಥ್ಯವುಳ್ಳ ನೋಂದಾಯಿತ ಶೈಕ್ಷಣಿಕ ಸೊಸೈಟಿ, ಸಾರ್ವಜನಿಕ ಟ್ರಸ್ಟ್ ಅಥವಾ ಸಂಸ್ಥೆ ಗಳಿಂದ ನವೀನ ಸಂಯೋಜನೆಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನೋಂದಾಯಿತ ಶೈಕ್ಷಣಿಕ ಸೊಸೈಟಿ, ಸಾರ್ವಜನಿಕ ಟ್ರಸ್ಟ್ ಅಥವಾ ಸಂಸ್ಥೆಗಳಿಂದ ನವೀನ ಸಂಯೋಜನೆಗಾಗಿ ಅರ್ಜಿಗಳನ್ನು UUCMS ತಂತ್ರಾಂಶದಲ್ಲಿ https://uucms.karnataka.gov.in ಮೂಲಕ ಸಲ್ಲಿಸಿ, ನಂತರ ಡೌನ್‌ಲೋಡ್ ಮಾಡಿಕೊಂಡ ಹಾರ್ಡ್ ಪ್ರತಿಯನ್ನು ಪೂರಕ ದಾಖಲೆಗಳೊಂದಿಗೆ ದ್ವಿಪ್ರತಿಯಲ್ಲಿ ನಿರ್ದೇಶಕರು, ಕಾಲೇಜು ಅಭಿವೃದ್ಧಿ ಪರಿಷತ್ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ, ಜ್ಞಾನಸಹ್ಯಾದ್ರಿ, ಶಂಕರಘಟ್ಟ- 577451 ಇವರಿಗೆ ಸಲ್ಲಿಸುವುದು.
Application Invitation for Various Courses in Kuvempu University ದಂಡಶುಲ್ಕವಿಲ್ಲದೆ ಏ.29 ರೊಳಗಾಗಿ ಹಾಗೂ ರೂ. 15,000 ದಂಡಶುಲ್ಕದೊAದಿಗೆ ಏ.30 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕುಲಸಚಿವರು, ಕುವೆಂಪು ವಿಶ್ವವಿದ್ಯಾಲಯ, ಜ್ಞಾನಸಹ್ಯಾದ್ರಿ, ಶಂಕರಘಟ್ಟ-577451 ಶಿವಮೊಗ್ಗ ಜಿಲ್ಲೆ. ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮಾಹಿತಿಗಳನ್ನು ವಿಶ್ವವಿದ್ಯಾಲಯದ ಜಾಲತಾಣ www.kuvempu.ac.in ದಲ್ಲಿ ಪಡೆಯಬಹುದಾಗಿದೆ.