Condemnation of Congress Kisan Cell ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಹಾಗೂ ದಲಿತ ನಾಯಕ ಡಾ. ಜಿ.ಪರಮೇಶ್ವರ್ ಅವರಿಗೆ ಸಾರ್ವಜನಿಕ ಸಭೆಯಲ್ಲಿ ಕೆಲವು ಕಿಡಿಕೇಡಿಗಳು ಕಲ್ಲಿನಿಂದ ಹೊಡೆದು ಹಲ್ಲೆಗೊಳಿರುವುದು ತೀವ್ರ ಖಂಡನೀಯ ಎಂದು ಕಾಂಗ್ರೆಸ್ ಕಿಸಾಲ್ ಸೆಲ್ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್ ಹೇಳಿದ್ದಾರೆ.
ಈ ಸಂಬಂಧ ತಮ್ಮ ಹೇಳಿಕೆಯಲ್ಲಿ ರಾಜ್ಯದ ಅತ್ಯುತ್ತಮ ರಾಜಕಾರಣಿ ಡಾ. ಜಿ.ಪರ ಮೇಶ್ವರ್ ಅವರ ಯಶಸ್ಸನ್ನು ಸಹಿಸಲಾರದೇ ಕೆಲವು ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ಮುಖಂಡರುಗಳು ಸಭೆ ಯಲ್ಲಿ ಕಲ್ಲು ತೂರಾಟ ನಡೆಸಿ ಹಲ್ಲೆಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದ ಒಬ್ಬ ಧೀಮಂತ ನಾಯಕರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ರಕ್ಷಣೆ ನೀಡದವರು ಇನ್ನೂ ಜನ ಸಾಮಾನ್ಯರ ರಕ್ಷಣೆ ಹೇಗೆ ನೀಡಲು ಸಾಧ್ಯ. ಇಂತಹ ಸರ್ಕಾರವನ್ನು ವಿಸರ್ಜನೆಗೊಳಿಸಬೇಕು.
ದೇಶದಲ್ಲಿ ಅಶಾಂತಿ ಮೂಡಿಸಿದ ಪಿಎಫ್‌ಐ ರದ್ದುಗೊಳಿಸಿದಂತೆ ಆರ್‌ಎಸ್‌ಎಸ್ ಸಂಘಟನೆಯನ್ನು ದೇಶದಲ್ಲಿ ರದ್ದುಮಾಡಿ ನೆಮ್ಮದಿ ಯಿಂದ ಜನತೆ ಜೀವಿಸಲು ಅವಕಾಶ ಮಾಡಿಕೊಡಬೇಕು ಎಂದಿದ್ದಾರೆ.
ಶಾಸಕ ಯತ್ನಾಳ್ ಅವರು ತಮ್ಮ ಹರಕು ಬಾಯಿಯಿಂದ ಸಾರ್ವಜನಿಕ ಸಭೆಗಳಲ್ಲಿ ಮನಬಂದಂತೆ ಮಾತನಾಡಿ ಅಶಾಂತಿ ಮೂಡಿಸಲು ಮುಂದಾಗುತ್ತಿದ್ದು ಈ ಬಗ್ಗೆ ಚುನಾವಣಾ ಆಯೋಗವು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ನಾಮಪತ್ರವನ್ನು ರದ್ದು ಮಾಡಬೇಕು. ಮುಂದೆ ಯಾರೊಬ್ಬ ಶಾಸಕರು ಪ್ರಚೋದಕಾರಿ ಹೇಳಿಕೆ ನೀಡಲು ಮುಂದಾಗದೇ ಬಾಯಿಗೆ ಬೀಗ ಬಿದ್ದಂತಾಗುತ್ತದೆ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮಾದರಿಯಲ್ಲಿ ಘೋಷಣೆಗಳನ್ನು ಕೂಗುತ್ತಾ ಬಿಜೆಪಿ ರಾಜ್ಯದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಆದರೆ ಯುಪಿಯಲ್ಲಿ ಪ್ರತಿ ಗಂಟೆಗೊಂದು ಜನಸಾಮಾನ್ಯರ ಮೇಲೆ ಹಲ್ಲೆಗೊಳಗಾಗಿ ಪ್ರಕರಣಗಳು ದಾಖಲಿಲಾಗುತ್ತಿದ್ದು ಅದೇ ರೀತಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಜನತೆಗೆ ತೊಂದರೆ ಯಾಗಲಿದೆ ಎಂದು ತಿಳಿಸಿದ್ದಾರೆ.
Condemnation of Congress Kisan Cell ಇಷ್ಟೆಲ್ಲಾ ಬಿಜೆಪಿ ನಾಯಕರುಗಳು ಭ್ರಷ್ಟಾಚಾರದಲ್ಲಿ ತೊಡಗಿರುವುದು ಜನತೆ ಸೂಕ್ಷ್ಮ ವಾಗಿ ಗಮನಿಸುತ್ತಿದ್ದಾರೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ಕಾಂಗ್ರೆಸ್ ಮತ ನೀಡುವ ಮೂಲಕ ಪೂರ್ಣ ಬಹುಮತದೊಂದಿಗೆ ಅಧಿಕಾರ ನೀಡಲಿದ್ದಾರೆ. ಅದೇ ರೀತಿ ಜಿಲ್ಲೆಯಲ್ಲೂ ಸಹ ಐದು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.