Indian National Congress Karnataka ಬಿಜೆಪಿ ಶಾಸಕ ಬಸವಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಕೊಳಕು ನಾಲಿಗೆಯಿಂದ ದೇಶದ ಹಿರಿಯ ರಾಜಕೀಯ ಮುತ್ಸದಿ ಸೋನಿಯಾಗಾಂಧಿಯವರಿಗೆ ವಿಷಕನ್ಯೆ ಎಂದು ಅವ ಹೇಳನ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಹೆಚ್.ಹೆಚ್.ದೇವರಾಜ್ ಹೇಳಿದ್ದಾರೆ.
ಈ ಸಂಬಂಧ ತಮ್ಮ ಹೇಳಿಕೆಯಲ್ಲಿ ತಿಳಿಸಿರುವ ಶಾಸಕ ಯತ್ನಾಳ್ ಅವರ ನಾಲಿಗೆಗೆ ಎಲುಬಿ ಲ್ಲದೇ ಬಾಯಿಬಂದಂತೆ ಮಾತನಾಡುತ್ತಿರುವುದು ಸೂಕ್ತವಲ್ಲ. ಕಾಂಗ್ರೆಸ್ ಹಿರಿಯ ರಾಜಕಾರಣಿ ಸೋನಿಯಾ ಅವರ ಬಗ್ಗೆ ಮಾತನಾಡುವ ಮುನ್ನ ಎಚ್ಚರದಿಂದಿರಬೇಕು. ವಿಷಕನ್ಯೆ ಎಂದು ಹೇಳಿಕೆ ನೀಡಿರುವ ಶಾಸಕರು ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಾರ್ವಜನಿಕ ಬಹಿರಂಗ ಸಭೆಗಳಲ್ಲಿ ಶಾಸಕರು ಈ ರೀತಿಯ ಪ್ರಚೋದಕಾರಿ ಹೇಳಿಕೆ ನೀಡಿರುತ್ತಿರುವುದನ್ನು ಚುನಾವಣಾ ಆಯೋಗ ಗಮನಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಇಂತಹ ಮಾತುಗಳು ಎಲ್ಲೆಡೆ ಹರಡಿ ಜನಸಾಮಾನ್ಯರಲ್ಲಿ ಅಶಾಂತಿ ಮೂಡಲು ಕಾರಣವಾಗುತ್ತದೆ ಎಂದಿದ್ದಾರೆ.
ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರಿಗೆ ಚುನಾವಣಾ ರ‍್ಯಾಲಿ ಸಮಯದಲ್ಲಿ ಕೆಲವು ಕಿಡಿಕೇಡಿಗಳು ಕಲ್ಲಿನ ಹೊಡೆದು ಹಲ್ಲೆಗೊಳಿಸಿರುವುದು ಖಂಡನೀಯ. ಎಲ್ಲಿ ಅವರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ದುರುದ್ದೇಶದಿಂದ ಕೆಲವು ಕಿಡಿಕೇಡಿಗಳು ಕಲ್ಲು ತೂರಾಟ ನಡೆಸಿ ಹಲ್ಲೆಗೊಳಿಸಲಾ ಗಿದ್ದು ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
Indian National Congress Karnataka ರಾಜ್ಯದಲ್ಲಿ ಇಷ್ಟೆಲ್ಲಾ ಚುನಾವಣಾ ಆಯೋಗದ ಕಟ್ಟುನಿಟ್ಟಿನ ಪಾಲನೆಗಳಿದ್ದರೂ ಸಹ ಕಾಂಗ್ರೆಸ್ ನಾಯಕರಿಗೆ ಅವಹೇಳನಕಾರಿ ಹೇಳಿಕೆ ನೀಡುವುದು ಹಾಗೂ ಹಲ್ಲೆಗೊಳಿಸಿರುವುದು ಸರಿಯಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಭದ್ರತೆ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕವಾಗಿ ಭಂಗ ತರುವ ಕೆಲಸಕ್ಕೆ ಕೈಹಾಕುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.