Assembly Election ಚುನಾವಣೆಯಲ್ಲಿ ಮತದಾನ ಪ್ರಮಾಣ ಕಡಿಮೆ ಆಗುವಲ್ಲಿ ವಿದ್ಯಾವಂತರು ಪ್ರಮುಖ ಕಾರಣ ಆಗಿರುತ್ತಾರೆ. ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಾರೆ. ಮತದಾನ ಮಾಡುವುದು ನಮ್ಮೆಲ್ಲರ ಕರ್ತವ್ಯ ಆಗಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ವಾಸುದೇವ್ ಹೇಳಿದರು.
ಶಿವಮೊಗ್ಗ ನಗರದಲ್ಲಿ ಚಾಯ್ ಪೇ ಚರ್ಚಾ, ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮತದಾನ ಮಾಡಲು ಯಾವುದೇ ಆಮಿಷಕ್ಕೆ ಒಳಗಾಗಬಾರದು. ಮೌಲ್ಯರಹಿತ ರಾಜಕಾರಣಿಗಳನ್ನು ಆಯ್ಕೆ ಮಾಡಬಾರದು. ಉತ್ತಮ ಪ್ರತಿನಿಧಿಗಳ ಆಯ್ಕೆಗೆ ಹೆಚ್ಚು ಮತದಾನ ಆಗಬೇಕು. ಮತದಾನದ ಹಕ್ಕನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ವೈದ್ಯ ಶ್ರೀಧರ್ ಮಾತನಾಡಿ, ಕಾರ್ಯನಿಮಿತ ಬೆಂಗಳೂರು ಸೇರಿದಂತೆ ವಿವಿಧೆಡೆ ಕೆಲಸ ಮಾಡುತ್ತಿರುವವರನ್ನು ಕರೆಸಬೇಕು. ಮತದಾನದ ಹಕ್ಕು ಚಲಾಯಿಸಬೇಕು. ಜನರಿಂದ ಜನರಿಗಾಗಿ ಪ್ರತಿನಿಧಿಗಳ ಆಯ್ಕೆ ಮಾಡುವುದರಿಂದ ಸದೃಡ ಕರ್ನಾಟಕ ಮತ್ತು ಸಶಕ್ತ ಭಾರತ ನಿರ್ಮಾಣ ಸಾಧ್ಯ ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ ಹೋಬಳಿದಾರ್ ಮಾತನಾಡಿ, ಎಲ್ಲರೂ ಮತದಾನ ಮಾಡಿ, ಉತ್ತಮರನ್ನು ಆಯ್ಕೆ ಮಾಡೋಣ. ಮತದಾನ ರಾಜ್ಯದ ವಿಕಾಸಕ್ಕೆ ವರದಾನ. ಮತದಾನ ಪ್ರಬಲ ಅಸ್ತ್ರ ಎಂದು ಹೇಳಿದರು.
Assembly Election ವಿಜಯ್‌ಕುಮಾರ್ ಜೈನ್ ಮಾತನಾಡಿ, ಮತದಾನವೇ ಪ್ರಜಾಪ್ರಭುತ್ವದ ಆಧಾರ ಎಂದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಮಾತನಾಡಿ, ಮತದಾನ ನಮ್ಮ ಹಕ್ಕು, ಅದನ್ನು ಕಡ್ಡಾಯವಾಗಿ ಚಲಾಯಿಸೋಣ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸೋಣ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಎಸ್.ಎಸ್.ವಾಗೇಶ್, ಶಿವಾನಂದರಾವ್ ಸಾನು, ದಿಲೀಪ್ ನಾಡಿಗ್, ಎ.ಮಂಜುನಾಥ್, ನಟರಾಜ್, ಚಂದ್ರಹಾಸ ರಾಯ್ಕರ್, ಮಂಜುನಾಥ್ ಕದಂ ಮುಂತಾದವರು ಭಾಗವಹಿಸಿದ್ದರು.