Thursday, March 19, 2026
Thursday, March 19, 2026

Rotary International Shivamogga ಸಮಯದ ಸದ್ವಿನಿಯೋಗ ಯಶಸ್ಸಿಗೆ ಮೆಟ್ಟಿಲು-ವಿಲಿಯಂ ಡಿಸೋಜಾ

Date:

Rotary International Shivamogga ಪ್ರತಿಯೊಬ್ಬರ ಜೀವನದಲ್ಲಿ ಸಮಯ ಬಹಳ ಮುಖ್ಯ. ಬದುಕಿನಲ್ಲಿ ಮಹತ್ತರ ಪಾತ್ರ ವಹಿಸುವ ಸಮಯದ ಸದ್ವಿನಿಯೋಗ ಮಾಡಿಕೊಂಡರೆ ಯಶಸ್ಸಿನ ಮೆಟ್ಟಿಲು ಹತ್ತಲು ಸಾಧ್ಯ ಎಂದು ರಾಷ್ಟ್ರೀಯ ತರಬೇತುದಾರ ವಿಲಿಯಂ ಡಿಸೋಜಾ ಹೇಳಿದರು.

ಶಿವಮೊಗ್ಗ ನಗರದಲ್ಲಿ ರೋಟರಿ ಸಂಸ್ಥೆಯ ಸದಸ್ಯರ ಆರ್‌ಎಂಬಿ ವ್ಯವಹಾರಿಕ ಸಂಸ್ಥೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ವ್ಯವಹಾರದಲ್ಲಿ ಎಲ್ಲ ಉದ್ಯಮಿಗಳು ಸಮಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಇದರಿಂದ ಉತ್ತಮ ಪ್ರತಿಫಲ ಸಿಗುತ್ತದೆ. ಯಾವುದೇ ಉದ್ಯಮದಾರರಿಗೆ ಮೊದಲು ಗುರಿ, ಛಲ ಪ್ರಾಮಾಣಿಕತೆ, ಮೌಲ್ಯಗಳು ಹಾಗೂ ನೈತಿಕತೆ ಬಹಳ ಮುಖ್ಯ ಆಗಿರುತ್ತವೆ. ಇದೆಲ್ಲವನ್ನು ರೂಡಿಸಿಕೊಂಡರೆ ವ್ಯವಹಾರದಲ್ಲಿ ಅಭಿವೃದ್ಧಿ ನಿಶ್ಚಿತ ಎಂದು ತಿಳಿಸಿದರು.

ವ್ಯವಹಾರದಲ್ಲಿ ಗ್ರಾಹಕರೊಂದಿಗೆ, ಸಿಬ್ಬಂದಿಯೊಂದಿಗೆ ನಮ್ರತೆ, ವಿನಯತೆ ಹಾಗೂ ಸರಳತೆ ಸೌಜನ್ಯದೊಂದಿಗೆ ನಾವುಗಳು ನಡೆದುಕೊಂಡಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ಯಶಸ್ವಿ ಉದ್ಯಮದಾರರು ಯಾವಾಗಲೂ ಕೆಲವು ಸೂತ್ರಗಳನ್ನು ಪಾಲಿಸಬೇಕಾಗುತ್ತದೆ. ಆಧ್ಯಾತ್ಮಿಕತೆ, ಪ್ರಸನ್ನತೆ, ತನ್ಮಯತೆ ಹಾಗೂ ನಾವು ಬೆಳೆಯುವುದರ ಜೊತೆಗೆ ಇತರನ್ನು ಬೆಳೆಸಬೇಕು ಎಂದರು.

Rotary International Shivamogga ಜವಾಬ್ದಾರಿ, ಹೊಣೆಗಾರಿಕೆ, ಪ್ರಾಮಾಣಿಕತೆ, ನಂಬಿಕೆ ಹಾಗೂ ಸಮಗ್ರತೆ ಇವೆಲ್ಲವೂ ರೂಡಿಸಿಕೊಂಡಾಗ ನಾವುಗಳು ವ್ಯವಹಾರದಲ್ಲಿ ಉನ್ನತ ಸ್ಥಾನವನ್ನು ತಲುಪಿಸುವುದು ಸುಲಭ. ನಾವು ಯಾವುದೇ ಕಾರ್ಯ ಮಾಡಿದ್ದಲ್ಲಿ ಪ್ರದರ್ಶನವಾಗಬಾರದು, ಅದು ನಿದರ್ಶನವಾಗಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಆರ್‌ಎಂಬಿ ಸಂಸ್ಥೆಯ ಅಧ್ಯಕ್ಷ ವಸಂತ್ ಹೋಬಳಿದಾರ್ ಮಾತನಾಡಿ, ಯಾವುದೇ ವ್ಯವಹಾರದಲ್ಲಿ ಪ್ರಾಮಾಣಿಕತೆ ಹಾಗೂ ಸರಳತೆ ರೂಢಿಸಿಕೊಳ್ಳಬೇಕು. ಉತ್ತಮ ವ್ಯವಹಾರಿಕ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಆರ್ ಎಂ ಬಿ ಶಿವಮೊಗ್ಗ ಸಂಸ್ಥೆಯ ಕಾರ್ಯದರ್ಶಿ ಮೋಹನ್, ಖಜಾಂಚಿ ಆನಂದ್, ಮೆಂಬರ್‌ಶಿಪ್ ಡೆವಲಪ್‌ಮೆಂಟ್ ಚೇರ್ಮನ್ ವಿಜಯಕುಮಾರ್, ಮಂಜುನಾಥ ಕದಂ, ಕುಮಾರ್ ಎಸ್ ಕೆ, ರಾಕೇಶ್ ಗೌಡ ಹಾಗೂ ಎಲ್ಲ ಆರ್ ಎಂ ಬಿ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...