youth Hostel Association ಚಾರಣದಲ್ಲಿ ಮಕ್ಕಳು ಪಾಲ್ಗೊಳ್ಳುವುದರಿಂದ ಆತ್ಮವಿಶ್ವಾಸ ವೃದ್ಧಿಯಾಗುವ ಜತೆಯಲ್ಲಿ ಜವಾಬ್ದಾರಿ ಹೆಚ್ಚಿಸುತ್ತದೆ. ಇದರಿಂದ ಧೈರ್ಯ ಮನೋಭಾವ ಬೆಳೆಯುತ್ತದೆ. ಉತ್ತಮ ಜೀವನ ನಡೆಸಲು ಸಹಕಾರಿ ಎಂದು ಯೂತ್ ಹಾಸ್ಟೆಲ್ಸ್ ಮಾಜಿ ಚೇರ‍್ಮನ್ ಮನು ಪಾವರ್ ಹೇಳಿದರು.
ಶಿವಮೊಗ್ಗದಿಂದ ಹಿಮಾಲಯಕ್ಕೆ ಚಾರಣ ಹೊರಟ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಮಕ್ಕಳು ಚಾರಣದಲ್ಲಿ ಪ್ರತಿಯೊಂದು ಉತ್ತಮ ಅಂಶಗಳನ್ನು ಕಲಿಯಬೇಕು. ನೋಡುವ, ಕೇಳುವ ವಿವಿಧ ವಿಷಯಗಳಿಂದ ಜ್ಞಾನ ಪಡೆಯಬೇಕು ಎಂದು ತಿಳಿಸಿದರು.
ವೈಎಚ್‌ಎಐ ರಾಜ್ಯ ಉಪಾಧ್ಯಕ್ಷ ಜಿ.ವಿಜಯ್‌ಕುಮಾರ್ ಮಾತನಾಡಿ, ದಿನ ನಿತ್ಯದ ಸುಭದ್ರ ಜೀವನದಿಂದ ಹೊರ ಬಂದು, ಸಾಮಾನ್ಯರಂತೆ ಜೀವನ ನಡೆಸುವುದನ್ನು ಮಕ್ಕಳಿಗೆ ಕಲಿಸುವುದರಿಂದ ಅವರ ಭವಿಷ್ಯ ಉಜ್ವಲ ವಾಗುತ್ತದೆ ಎಂದು ಹೇಳಿದರು.
youth Hostel Association ತರುಣೋದಯ ಘಟಕದ ಚೇರ‍್ಮನ್ ವಾಗೇಶ್ ಮಾತನಾಡಿ, ಜೀವನದಲ್ಲಿ ತಮ್ಮ ಕೆಲಸವನ್ನು ತಾವೇ ಹೇಗೆ ಮಾಡಿ ಕೊಳ್ಳಬೇಕೆಂದು ಚಾರಣ ಕಲಿಸುತ್ತದೆ. ಜೊತೆಗೆ ಪ್ರಕೃತಿ ವಿಸ್ಮಯ, ದೇಶದ ನಾನಾ ರಾಜ್ಯಗಳ ಜನ ಜೀವನ, ಸಂಸ್ಕೃತಿ ಪರಿಚಯವನ್ನು ಹಾಗೂ ಪ್ರಕೃತಿ ಅಧ್ಯಯನವನ್ನು ಮಕ್ಕಳು ಕಲಿಯುವುದು ಅವಶ್ಯಕ ಎಂದು ತಿಳಿಸಿದರು.
ಹರೀಶ್ ಪಂಡಿತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಚಾರಣಕ್ಕೆ ಕಳುಹಿಸಲು ಬಹಳ ತೊಂದರೆ ತೆಗೆದುಕೊಳ್ಳಬೇಕು. ದೊರೈ ಚಿನ್ನಪ್ಪ ಹಾಗೂ ಅಶ್ವಿನಿ ಅವರು ಜವಾಬ್ದಾರಿ ತೆಗೆದುಕೊಂಡು ನಮಗೆ ಬಹಳ ಸಹಕಾರಿಯಾಗಿದ್ದಾರೆ.
ಹಾಗೆಯೆ ಕಾರ್ಯದರ್ಶಿ ಪ್ರಶಾಂತ್, ನಿರ್ದೇಶಕರಾದ ರಾಘವೇಂದ್ರ, ದೀಪ, ಶೃತಿ, ದಯಾನಂದ್, ಭದ್ರಿನಾಥ್ ಉಳಿದ ಸದಸ್ಯರಿಂದಲೂ ಉತ್ತಮ ಸಹಕಾರ ಸಿಗುತ್ತಿದೆ ಎಂದರು.