Chamber Of Commerce Shivamogga ಶಿವಮೊಗ್ಗದಲ್ಲಿ ಹೊಟೇಲ್ ಮತ್ತು ಲಾಡ್ಜ್ ಸೇವೆಯನ್ನು
ಉದ್ಯಮವೆಂದು ಪರಿಗಣಿಸಿ ಪ್ರೋತ್ಸಾಹಿಸುವಂತೆ ಶಿವಮೊಗ್ಗ ಜಿಲ್ಲಾ
ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ
ಸಭೆಯ ಸಂದರ್ಭದಲ್ಲಿ ಕೇಂದ್ರ ಬೃಹತ್ ಕೈಗಾರಿಕಾ ಸಚಿವ
ಮಹೇಂದ್ರನಾಥ ಪಾಂಡೆ ಅವರಿಗೆ ಮನವಿ ಸಲ್ಲಿಸಲಾಯಿತು.
ಹೊಟೇಲ್ ಮತ್ತು ಲಾಡ್ಜ್ ಸೇವೆಯು ಅತಿ ಹೆಚ್ಚಿನ ಉದ್ಯೋಗ
ಅವಕಾಶಗಳನ್ನು ನೀಡುತ್ತಿದ್ದು, ಉದ್ಯೋಗದ ಜತೆಯಲ್ಲಿ
ಉಚಿತ ಊಟ ಹಾಗೂ ವಸತಿ ವ್ಯವಸ್ಥೆಯು ಬಹುತೇಕ
ಹೊಟೇಲ್‌ಗಳಲ್ಲಿ ಲಭ್ಯವಿದೆ. ಸೂಕ್ತ ಕೌಶಲ್ಯ ತರಬೇತಿಯು
ನೀಡಲಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
Chamber Of Commerce Shivamogga ಹೊಟೇಲ್ ಹಾಗೂ ಲಾಡ್ಜ್ ಸೇವೆಯನ್ನು ಉದ್ಯಮ ಎಂದು
ಪರಿಗಣಿಸಬೇಕು. ಉದ್ಯೋಗ ಮಾಡುತ್ತಿರುವವರಿಗೆ ಇಎಸ್‌ಐ ಹಾಗೂ
ಪಿಎಫ್‌ಗೆ ಅಗತ್ಯವಿರುವ ಅನುದಾನವನ್ನು ಕೇಂದ್ರ ಸರ್ಕಾರದಿಂದ
ಒದಗಿಸಬೇಕು. ಇದರಿಂದ ಹೊಟೇಲ್, ಲಾಡ್ಜ್ ಸೇವೆಯನ್ನು ಇನ್ನೂ
ಹೆಚ್ಚಿನ ಉದ್ಯೋಗ ಅವಕಾಶಗಳ ಸೃಷ್ಠಿಯಾಗುತ್ತದೆ ಎಂದು
ಮನವಿ ಮಾಡಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಸಂಘ ಮತ್ತು ಕೈಗಾರಿಕಾ ಸಂಘದ
ಅಧ್ಯಕ್ಷ ಎನ್.ಗೋಪಿನಾಥ್ ಅವರು ಹೊಟೇಲ್, ಲಾಡ್ಜ್
ಸೇವೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ
ಸಿಗಬೇಕಾದ ಪೂರಕ ಸೌಕರ್ಯಗಳ ಬಗ್ಗೆ ಕೇಂದ್ರ ಸಚಿವರಿಗೆ
ಮಾಹಿತಿ ನೀಡಿದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಸಂಘ
ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್,
ಕಾರ್ಯದರ್ಶಿ ವಸಂತ ಹೋಬಳಿದಾರ್, ಸಹ ಕಾರ್ಯದರ್ಶಿ
ಜಿ.ವಿಜಯಕುಮಾರ್, ಜೈಮಾತಾ ಗ್ರಾಂಡ್ಯೂರ್ ಮ್ಯಾನೇಜಿಂಗ್
ಡೈರೆಕ್ಟರ್ ಎಂ.ಎಸ್.ಗುರುರಾಜ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು
ಕೈಗಾರಿಕಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.