Information Book On Cars ಶಿವಮೊಗ್ಗ ನಗರದ ವಿನೋಬ ನಗರ ನಿವಾಸಿ ವೀರೇಶ್ ರವರು ಬರೆದಿರುವ ಕಾರ್ ಗಳ ಬಗ್ಗೆ ತಿಳಿಯಬೇಕಾದ ಮಾಹಿತಿಗಳು ಪುಸ್ತಕವನ್ನು ಇತ್ತೀಚೆಗೆ ವಿನೋಬ ನಗರದ ವಿಧಾತ್ರಿ ಭವನದಲ್ಲಿ ಆಯೋಜಿಸಿದ್ದ ಕಾರ‍್ಯಕ್ರಮ ದಲ್ಲಿ ಬಿಡುಗಡೆ ಮಾಡಿದರು.
ಪತ್ರಕರ್ತ ರಾಮಚಂದ್ರ ಗುಣಾರಿ ರವರು ಪುಸ್ತಕವನ್ನು ಬಿಡುಗಡೆ ಮಾಡಿದರು. ಲೇಖಕರಾದ ವೀರೇಶ್ ಬಿ., ಡಿಎಸ್‌ಡಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕಿ ಶಿಲ್ಪರಾಣಿ ಪಿ.ಎಸ್. ಉಪಸ್ಥಿತರಿದ್ದರು.
ಪುಸ್ತಕದಲ್ಲಿ ವಿಶೇಷ ಮಾಹಿತಿ : ಈ ಪುಸ್ತಕವು ಕಾರ್‌ಗಳ ವಿನ್ಯಾಸಗಳ ಹಾಗೂ ಕಾರ್‌ಗಳಲ್ಲಿ ಅಳವಡಿಸುರುವ ತಂತ್ರಜ್ಞಾನಗಳ ಬಗೆಗಳನ್ನು ಎಲ್ಲಾ ಜನ ಸಾಮಾನ್ಯ ವರ್ಗದವರಿಗೂ ತಿಳಿಸುವ ಒಂದು ಪ್ರಯತ್ನವಾಗಿದೆ. ಅಷ್ಟೇ ಅಲ್ಲದೇ ಆ ತಂತ್ರಜ್ಞಾನಗಳ ಅವಶ್ಯಕತೆ ಹಾಗೂ ಉಪಯೋಗಗಳ ಅರಿವು ಮೂಡಿಸುವುದು ಈ ಪುಸ್ತಕದ ಮೂಲ ಉದ್ದೇಶವಾಗಿದೆ.
Information Book On Cars ಗ್ರಾಹಕರು ತಮಗೆ ಇಷ್ಟವಾದ ಕಾರ್ ನ ಮಾಡೆಲ್ ನ್ನು ಸ್ಪರ್ಧಾತ್ಮಕ ಮಾಡೆಲ್ ಜೊತೆಗೆ ತುಲನೆ ಮಾಡಬೇಕಾದರೆಬರೀ ಕಾರ್ ಬೆಲೆಯೊಂದೇ ಅಲ್ಲದೆ ಯಾವ್ಯಾವ ಅಂಶಗಳನ್ನು ಪರಿಗಣಿಸಬೇಕು. ಎಂಬ ಅಂಶಗಳ ಕುರಿತಾಗಿ ಸವಿಸ್ತಾರವಾಗಿ ತಿಳಿಸಲು ಈ ಪುಸ್ತಕವು ಅನುವು ಮಾಡಿ ಕೊಡುತ್ತದೆ. ಉದಾಹರಣೆಗೆ ಎಬಿಎಸ್ ಮತ್ತು ಇಬಿಡಿ ಎಂಬ ಸುರಕ್ಷಾ ವೈಶಿಷ್ಟ್ಯ, ಈ ವೈಶಿಷ್ಟ್ಯಗಳು ನನಗೆ ಹಾಗೂ ನನ್ನ ಕುಟುಂಬಕ್ಕೆ ಹೇಗೆ ಸಹಕಾರಿದೆ ಎಂಬಿತ್ಯಾದಿ ಅಂಶಗಳನ್ನು ಬೇರೆ ಕಾರ್‌ಗಳ ಜೊತೆಗೆ ತುಲನೆ ಮಾಡಿ ಯಾವ ಕಾರ್ ಖರೀದಿಸಿದರೆ ಉತ್ತಮ ಎಂಬ ನಿರ್ಧಾರಕ್ಕೆ ಬರಲು ಖಂಡಿತವಾಗಿಯೂ ಈ ಪುಸ್ತಕವು ಅನುಕೂಲ ಮಾಡಿಕೊಡುವಲ್ಲಿ ಯಶಸ್ವಿಯಾಗುತ್ತದೆ ಎಂದು ವೀರೇಶ್ ತಿಳಿಸಿದ್ದಾರೆ.
ಮಾಹಿತಿಗೆ ಹಾಗೂ ಈ ಪುಸ್ತಕವನ್ನು ಖರೀದಿಸಲಿಚ್ಚಿಸು ವವರು ಮೊ. 9538981688 ಅನ್ನು ಸಂಪರ್ಕಿಸಲು ವೀರೇಶ್ ಕೋರಿದ್ದಾರೆ.