Vijayanagara ವಿಜಯನಗರ ಕ್ಷೇತ್ರದ ರಾಜಕೀಯ ಮುಖಂಡರಾದ ಮಾನ್ಯ ಶ್ರೀ ಆನಂದ್ ಸಿಂಗ್ ರವರ ಮಗ ವಿಜಯನಗರ ಕ್ಷೇತ್ರದ ಬಿ ಜೆ ಪಿ ರಾಷ್ಟೀಯ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ಶ್ರೀ ಸಿದ್ದಾರ್ಥ ಸಿಂಗ್ ಇವರು ದಿನಾಂಕ 24-4-2023 ರಂದು ಸಂಜೆ 7 ಗಂಟೆಗೆ ವಿಜಯನಗರ ಹೊಸಪೇಟೆಯ ಪಟೇಲ್ ನಗರದಲ್ಲಿರುವ ಬಿಜೆಪಿ ಕಛೇರಿಯ ಆವರಣದಲ್ಲಿ ತ್ರಿಮತಸ್ತ ಬ್ರಾಹ್ಮಣ ಸಮಾಜದವರ ಜೊತೆ ಸಮಾಲೋಚನೆ ಸಭೆಯನ್ನು ಆಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ಮಾನ್ಯ ಶ್ರೀ ಅನಂದ್ ಸಿಂಗ್, ಬ್ರಾಹ್ಮಣ ಸಮಾಜದ ಮುಖಂಡರು ಹೊಸಪೇಟೆ ಹುಡಾ ಅದ್ಯಕ್ಷರಾದ ಶ್ರೀ ಅಶೋಕ್ ಜಿರೆ ಮತ್ತು ಬಿಜೆಪಿ ಅಭ್ಯರ್ಥಿ ಶ್ರೀ ಸಿದ್ದಾರ್ಥ ಸಿಂಗ್ ಭಾಗವಹಿಸಿ ಸುಮಾರು ಒಂದು ಘಂಟೆಗಳ ಕಾಲ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮುಕ್ತ ಸಮಾಲೋಚನೆ ಮಾಡಿದರು.
Vijayanagara ಬ್ರಾಹ್ಮಣ ಸಮಾಜದ ಮುಖಂಡರು ಗಳಾದ ಶ್ರೀ ಹನುಮಂತರಾವ್, ಉದ್ಯೋಗ್ ಪೆಟ್ರೋಲ್ ಬಂಕ್ ಮಾಲಿಕರು ಮತ್ತು ಸಮಾಜ ಸೇವಕರಾದ ಶ್ರೀ ಶ್ರೀನಿವಾಸ್, ಶ್ರೀ ದಿವಾಕರ್ , ಹೆಸರಾಂತ ನ್ಯಾಯವಾದಿಗಳಾದ ಸಿನಂಭಟ್, ಶ್ರೀ ರಾಘವೇಂದ್ರ ಡೆಕೋರೇಟರ್ಸ ಮಾಲಿಕರಾದ ಶ್ರೀ ಅಪ್ಪಣ್ಣ, ನ್ಯಾಯವಾದಿ ಶ್ರೀ ಕಲಂಭಟ್ ,ಹಾಗೂ ಅನೇಕ ಮುಖಂಡರು, ಮಹಿಳಾ ಸದಸ್ಯರು ಹಾಗೂ ಸುತ್ತಮುತ್ತಲಿನ ಗ್ರಾಮದ ಬ್ರಾಹ್ಮಣ ಸದಸ್ಯರು, ಕಿರ್ಲೋಸ್ಕರ್, ಬಿಎಂಎಂ ,ಎಸ್ ಎಲ್ ಆರ್ ಕಾರ್ಖಾನೆಯ ಬ್ರಾಹ್ಮಣ ಉದ್ಯೋಗಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಮಾನ್ಯ ಸಚಿವರು ತಮ್ಮ 15 ವರ್ಷದ ಕಾಲಾವಧಿಯಲ್ಲಿ ಮಾಡಲಾದ ಶ್ಲಾಘನೀಯ ಜನಪರ ಕೆಲಸಗಳನ್ನು ತಿಳಿಸಿದರು.
ಮುಂದಿನ ಯೋಜನೆಯನ್ನು ತಿಳಿಸಿ ಬ್ರಾಹ್ಮಣ ಸಮಾಜದ ಅಭಿವೃದ್ಧಿ ಕೆಲಸಗಳ ಬಗ್ಗೆ ತಿಳಿಸಿದರು. ಶ್ರೀ ಅಶೋಕ ಜಿರೆ ಮತ್ತು ಹನುಮಂತರಾವ್ ರವರು ಬ್ರಾಹ್ಮಣ ಸಮಾಜ ಎದುರಿಸುತ್ತಿರುವ ಸಮಸ್ಯೆಗಳನ್ನು ಮನವರಿಕೆ ಮಾಡಿ ಸಮಾಜದ ಅಭಿವೃದ್ಧಿ ಅನಿವಾರ್ಯ ಕಾರಣ ಬ್ರಾಹ್ಮಣರಲ್ಲಿ ಅನೇಕ ಬಡತನ ಕುಟುಂಬದವರು ಇರುತ್ತಾರೆ. ಕಾರಣ ಅವರು ಆರ್ಥಿಕವಾಗಿ ಕಡು ಬಡತನದಲ್ಲಿ ಇದ್ದು ಉತ್ತಮ ವಿದ್ಯಾಭ್ಯಾಸ ಮಾಡಿರುತ್ತಾರೆ. ಇಂದಿನ ಮೀಸಲಾತಿ ಪದ್ದತಿಯಲ್ಲಿ ಅವರಿಗೆ ಸೀಟುಗಳು ಸಿಗುತ್ತಿಲ್ಲ ಕಾರಣ ಈ ವ್ಯವಸ್ಥೆ ಸರಿಯಾಗಬೇಕಾಗಿದೆ ಎಂದು ತಿಳಿಸಿದರು.
ಅಡುಗೆ ಸಂಘದ ಸದಸ್ಯರು ಮನವಿ ಪತ್ರ ನೀಡಿ ತಮ್ಮ ಸಮಸ್ಯೆಗಳನ್ನು ತಿಳಿಸಿದರು.
ಶ್ರೀ ಸಿದ್ದಾರ್ಥ ಸಿಂಗ್ ರವರು ಮಾತನಾಡುತ್ತ ಮುಂದಿನ ಅವರ ಯೋಜನೆ ,ಕನಸುಗಳನ್ನು ತಮ್ಮ ಭಾಷಣದಲ್ಲಿ ತಿಳಿಸುತ್ತಾ, ಬುದ್ದಿಜೀವಿಗಳಾದ ತಮ್ಮ ಸಮುದಾಯಕ್ಕೆ ಇವುಗಳನ್ನು ತಿಳಿಸುವುದು ಬೇಕಾಗಿಲ್ಲ ಆದರೂ ನನ್ನ ಕರ್ತವ್ಯ ಎಲ್ಲಾ ವಿಚಾರ ತಿಳಿಸಿರುವೆ. ಬಿಜೆಪಿಗೆ ಮತ್ತೊಂದು ಅವಕಾಶ ನೀಡಿ ಇತಿಹಾಸದಲ್ಲಿ ಬೆರೆಯುವ ಹಾಗೆ ನಮ್ಮ ವಿಜಯನಗರ ಜಿಲ್ಲೆಯನ್ನು ಅಭಿವೃದ್ಧಿ ಮಾಡಿ ತೋರಿಸುವೆ ಎಂದು ತಿಳಿಸಿದರು.
ಹೊಸಪೇಟೆ ಬ್ರಾಹ್ಮಣ ಸಮಾಜ ಮತ್ತು ಅಡುಗೆ ಸಂಘದ ಎಲ್ಲಾ ಸದಸ್ಯರು ಶ್ರೀ ಸಿದ್ದಾರ್ಥ ಸಿಂಗ್ ಗೆ ಸನ್ಮಾನಿಸಲಾಯಿತು.
ವರದಿ
ಮುರುಳಿಧರ್ ನಾಡಿಗೇರ್
ಹೊಸಪೇಟೆ