Sagara Working Journalists Association ಬಿಜೆಪಿ ಮುಖಂಡರಿಂದ ಪತ್ರಿಕೆಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವ ವಿರುದ್ದ ಚುನಾವಣಾಧಿಕಾರಿಗಳಿಗೆ ಪತ್ರಕರ್ತರ ಸಂಘಟನೆಗಳಿಂದ ಮನವಿ ನೀಡಲಾಯಿತು.
ಸಾಗರ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್ ಟ್ರಸ್ಟ್ ಆಫ್ ಸಾಗರ್ ಇವುಗಳ ಸಂಯುಕ್ತಾಶ್ರಯದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ದಾಖಲಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ಮುಖಂಡ ಸಾಗರ ಬಿಜೆಪಿ ಹಿರಿಯ ಮುಖಂಡ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾಗರಾಜ್ ಪೈ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ದೂರು ಸಲ್ಲಿಸಲಾಯಿತು.
ಶಾಸಕ ಹಾಲಪ್ಪನವರ ವಿರುದ್ಧ ಇಲ್ಲ ಸಲ್ಲದ ಸತ್ತೇ ಹೋಗಿರುವ ಹಳೆಯ ವಿಷಯಗಳನ್ನು ಎತ್ತಿಕೊಂಡು ಸುದ್ದಿ ಮಾಡುತ್ತಿರುವುದನ್ನು ನೋಡಿದರೇ ಕಾಂಚಾಣ ಕೆಲಸ ಮಾಡಿದಂತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹರಿಬಿಟ್ಟಿರುವ ಮೂಲಕ ಪತ್ರಿಕೆಗಳ ಗೌರವ ಘನತೆಗೆ ಚ್ಯುತಿಯುಂಟು ಮಾಡಿರುವ ವಿರುದ್ಧ ಪತ್ರಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Sagara Working Journalists Association ಪತ್ರಿಕಾ ವೃತ್ತಿ ಪವಿತ್ರವಾದ ಮಾಧ್ಯಮದ ಧರ್ಮ ಎಂದುಕೊಂಡು ವೃತ್ತಿ ನಿರ್ವಹಿಸುತ್ತಿರುವ ಪತ್ರಿಕಾ ಸಮೂಹಕ್ಕೆ ಅಪಮಾನ ಮಾಡಿರುವ ವಿಷಯವನ್ನು ಪತ್ರಕರ್ತರುಖಂಡಿಸಿದರು.
ಇಂತಹ ಘಟನೆ ಇದೆ ಮೊದಲಲ್ಲ,ಈ ಹಿಂದೆ ಸ್ವತಃ ಶಾಸಕ ಹಾಲಪ್ಪನವರೇ ಸಾಗರದ ಪತ್ರಕರ್ತರಿಗೆ ನೇರವಾಗಿ ಸಾರ್ವಜನಿಕರ ಎದುರೇ ನಿಮ್ಮ ವಿರುದ್ಧ ಪತ್ರಿಕಾ ಕಚೇರಿಗೆ ಪತ್ರ ಬರೆಯುತ್ತೇನೆ ಎಂದು ಧಮಕಿ ಹಾಕಿರುವ ಕುರಿತು ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಕೆಲವೇ ದಿನಗಳ ಹಿಂದೆ ನಡೆದಿದೆ.
ಶಾಸಕರು ಸೇರಿದಂತೆ ಬಿಜೆಪಿ ಮುಖಂಡರುಗಳು ಪತ್ರಕರ್ತರ ವಿರುದ್ಧದ ನಡವಳಿಕೆಗಳ ವಿರುದ್ಧ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಾಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ್ ಹೆಗಡೆ ಗುಂಡೂಮನೆ,ಪ್ರೆಸ್ ಟ್ರಸ್ಟ್ ಆಫ್ ಸಾಗರ್ ಅಧ್ಯಕ್ಷ ಎಚ್.ವಿ.ರಾಮಚಂದ್ರರಾವ್,ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್.ವಿ.ಹಿತಕರ್ ಜೈನ್,ಪತ್ರಕರ್ತರ ಸಂಘದ ಕಾರ್ಯದರ್ಶಿ ಗಣಪತಿ ಶಿರಳಗಿ,ಹಿರಿಯ ಪತ್ರಕರ್ತ ಎ.ಡಿ.ಸುಬ್ರಹ್ಮಣ್ಯಭಟ್,ಪತ್ರಕರ್ತರುಗಳಾದ ಧರ್ಮರಾಜ್,ರಮೇಶ್.ಎನ್,ರವಿಚಂದ್ರ,ಶ್ರೀಪಾದ್ ಕವಲಕೋಡು,ಅಂತೋನಿ ನಜರತ್,ವಿಜಯೇಂದ್ರ ಶಾನಭಾಗ್,ರಾಜೇಶ್ ಭಡ್ತಿ,ಪ್ರಶಾಂತ್ ಹೆಚ್.ಆರ್,ಶ್ರೀಧರ್ ಭಾಗವತ್,ಕೆ.ಎನ್.ವೆಂಕಟಗಿರಿ ಮೊದಲಾದವರು ಉಪಸ್ಥಿತರಿದ್ದರು.