Saturday, December 6, 2025
Saturday, December 6, 2025

Akshaya Tritiya 2023 ಅಕ್ಷಯ ತೃತೀಯ ಸಮೃದ್ದಿಯ ಸಂಕೇತ

Date:

Akshaya Tritiya 2023 ಹೆಸರಿನ ಮೊದಲಲ್ಲೇ ಬಂದಿರುವಂತೆ ಈದಿನ ಮಾಡುವ ಒಳ್ಳೆಯ ಕೆಲಸಗಳಿಗೆ ಅಕ್ಷಯಫಲ ದೊರೆಯುವುದು.ಹೆಚ್ಚಿನವರಿಗೆ ಈ ದಿನ ಚಿನ್ನ ಕೊಂಡರೆ ಐಶ್ವರ್ಯ ದುಪ್ಪಟ್ಟಾಗುವುದು ಎಂಬ
ನಂಬಿಕೆ ಇದೆ.
ಇಂದಿನ ದಿನ ಮದುವೆಯಾಗುವ ನವ ದಂಪತಿಗಳಿಗೆ ಜೀವನಪರ್ಯಂತಸುಖ,ಸಂತೋಷಗಳನ್ನು,ದಾಂಪತ್ಯದಲ್ಲಿ ಅನ್ಯೋನ್ಯತೆ ಅನುಭವಿಸುವರುಎಂಬದೃಢವಾದ ನಂಬಿಕೆ ಇದೆ.
ಮತ್ತೆ ಈದಿನ ಆಸ್ತಿ,ಸೈಟು,ವಸ್ತುಗಳನ್ನು ಖರೀದಿಸಿದರೆ
ಐಶ್ವರ್ಯ ಅಕ್ಷಯಹೊಂದುತ್ತದೆ ಎಂಬ ಅಭಿಪ್ರಾಯವೂ ಇದೆ ಜನರಲ್ಲಿ.
ಇಂದಿನ ದಿನಗಳಲ್ಲಿ ಚಿನ್ನದ ಬೆಲೆ ಏಣಿಯನ್ನು ಏರುತ್ತಿರುವ ದಿವಸದಲ್ಲಿ ಎಲ್ಲರಿಗೂ ಆ ಹಳದಿ ಲೋಹವನ್ನು ಕೊಳ್ಳುವುದು ಕಷ್ಟಸಾಧ್ಯವಾದ ವಿಷಯವೇ ಸರಿ.ಏನೋ ಹಣವಿದ್ದವರು ಮಾತ್ರ ಚಿನ್ನ
ಅಥವಾ ಚಿನ್ನದ ಆಭರಣಗಳನ್ನು ಖರೀದಿಸಲು ಮನಸ್ಸು ಮಾಡಬಹುದು.
ಚಿನ್ನವನ್ನು ಮಾತ್ರ ಕೊಳ್ಳುವುದರ ಮೂಲಕ ಅಕ್ಷಯತೃತೀಯವನ್ನು ಆಚರಣೆ ಮಾಡಬೇಕೆಂತ ಚಿಂತೆ ಯಾಕೆ ಮಾಡಬೇಕು?.
ನಾವು ಊಟಮಾಡುವುದರಲ್ಲಿ ಹಸಿದು ಬಂದವರಿಗೆ
ಹೊಟ್ಟೆ ತುಂಬಿಸಿದರೆ ನಿಜಕ್ಕೂ ಆ ಪರಮಾತ್ಮ ಮೆಚ್ಚಿ
ಅಕ್ಷಯಫಲ ಎಂದರೆ ಪುಣ್ಯವನ್ನು ನಮ್ಮ ಖಾತೆಗೆ
ಸೇರಿಸುತ್ತಾನೆ.ಅನ್ನದಾನ ಒಂದು ಶ್ರೇಷ್ಠದಾನ.ಹಸಿದ
ಹೊಟ್ಟೆಗಳನ್ನು ತೃಪ್ತಿ ಪಡಿಸಲು ಊಟವೊಂದೇ ಸಾಧನ.ನೋಡಿ ತೃಪ್ತಿಯಾಗಿ ಇನ್ನು ಸಾಕು ಎಂದು ಹೇಳುವುದು ಊಟದ ವಿಷಯದಲ್ಲಿ ಮಾತ್ರ.
ನೀವು ಹಣ ಕೊಡಿ ಇನ್ನೂ ಬೇಕೆನಿಸುತ್ತದೆ ವಿನ:
ಸಾಕು ಎಂದು ಯಾರೂ ಹೇಳುವುದಿಲ್ಲ.ಹಣ ಕೊಟ್ಟರೆ
ಇನ್ನೂ ಬೇಕುಬೇಕು ಎನ್ನುತ್ತೇವೆಯೇ ಹೊರತು ಸಾಕು
ಎಂದು ಸುತರಾಂ ಹೇಳುವುದಿಲ್ಲ.ಇದು ಮನುಷ್ಯನ
ಸ್ವಾಭಾವಿಕ ಗುಣ.
ಹಣದ ಅನುಕೂಲ ವಿದ್ದವರು ಸ್ಕೂಲುಫೀಸು,ಕಾಲೇಜು ಫೀಸು ಕಟ್ಟಲಿಕ್ಕೆ ಸಾಧ್ಯವಾಗದೇ ಇದ್ದವರಿಗೆ ಫೀಸುಕಟ್ಟಿ ವಿದ್ಯೆಕಲಿಯಲಿಕ್ಕೆ ಅನುಕೂಲ ಮಾಡಬಹುದು.
ವಿದ್ಯೆಕಲಿತವರು ಕಲಿಯುವವರಿಗೆ ವಿದ್ಯೆ ಹೇಳಿಕೊಟ್ಟು
ವಿದ್ಯಾದಾನ ಮಾಡಬಹುದು.ಇದೂ ಒಂದು ಶ್ರೇಷ್ಠವಾದ ದಾನ ಎನ್ನಿಸಿಕೊಂಡಿದೆ.ಒಳ್ಳೆಯ ಸದೃಢ
ಆರೋಗ್ಯವಿದ್ದವರು ,ಹಿರಿಯರಿಗೆ,ವಯಸ್ಸಾದವರಿಗೆ
ಅಂಗವಿಕಲರಿಗೆ ಕೈಲಾದ ಸಹಾಯ ಮಾಡಬಹುದು.
ಈ ದಿನಕ್ಕೆ ಬೇರೆಬೇರೆ ಪೌರಾಣಿಕ ಅರ್ಥಗಳೂ ಉಂಟು.
ಪವಿತ್ರಗಂಗಾಮಾತೆ ಭೂಮಿಗೆ ಬಂದ ದಿನವೂ ಅಕ್ಷಯತೃತೀಯದಂದು ಎಂದು ಹೇಳುತ್ತಾರೆ.
ವೇದವ್ಯಾಸ ಮಹರ್ಷಿಗಳು ಮಹಾಭಾರತವನ್ನು
ವಿಘ್ನೇಶ್ವರನ ಕೈಯಲ್ಲಿ ಬರೆಸಿದ ದಿನವೂ ಇದೇ ಆಗಿದೆ
ಎಂದು ತಿಳಿಯುತ್ತದೆ.
ಸೂರ್ಯದೇವನು ಅಕ್ಷಯ ಪಾತ್ರೆಯನ್ನು ಪಾಂಡವರಾಜ ದರ್ಮರಾಯನಿಗೆ ಕೊಟ್ಟ ದಿನವೂ ಇದೇ ಆಗಿದೆ.
ಗುರುಕುಲದಲ್ಲಿ ಒಟ್ಟಿಗೇ ಸಾಂದೀಪನಿ ಗುರುಗಳಲ್ಲಿ ಕಲಿತು ಸಹಪಾಠಿಗಳಾಗಿದ್ದ ಶ್ರೀಕೃಷ್ಣ ಸುಧಾಮರು ಭೇಟಿಯಾದ ದಿನವೂ ಅಕ್ಷಯ ತೃತೀಯವಾಗಿದೆ.

Akshaya Tritiya 2023 ಹೀಗೆ ಅಕ್ಷಯತೃತೀಯ ದಿನವು ಬಹಳ ಮಹತ್ವ ಹೊಂದಿದ ಶುಭದಿನವಾಗಿದೆ.
ಈ ಶುಭದಿನದಲ್ಲಿ ಮಾಡಬಹುದಾದ ಇನ್ನೊಂದು ವಿಶೇಷವಾದ ಕೆಲಸ ವೆಂದರೆ ದುಡ್ಡು ಖರ್ಚು ಮಾಡದೇಭಗವಂತನಲ್ಲಿತಮ್ಮನ್ನಲ್ಲದೇ,ರಾಜ್ಯದ,ದೇಶದ ಜನರೆಲ್ಲರಿಗೂ ಸನ್ಮಂಗಳವನ್ನು ಕರುಣಿಸುವಂತೆ ಪ್ರಾರ್ಥಿಸಿದರೆಅಕ್ಷಯವಾದಪುಣ್ಯವನ್ನುಅನುಗ್ರಹಿಸುವುದರಲ್ಲಿ ಸಂದೇಹವಿಲ್ಲ.
ಹೀಗೆ ಎಲ್ಲರೂ ಒಬ್ಬರ ಕಷ್ಟಕ್ಕೆ ಒಬ್ಬರು ಪರಸ್ಪರ ಕೈಲಾದ ಸಹಾಯಮಾಡುವ ಮನೋಭಾವನೆಯ ಸಂಕಲ್ಪ ಮಾಡುವುದರ ಮೂಲಕ ಅಕ್ಷಯತೃತೀಯದ ಆಚರಣೆಯನ್ನು ಅರ್ಥಪೂರ್ಣವಾಗಿಸ ಬಹುದು.

ಲೇ; ಎನ್.ಜಯಭೀಮ ಜೊಯಿಸ್ .ಶಿವಮೊಗ್ಗ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...