Saturday, September 28, 2024
Saturday, September 28, 2024

Radio Shivamogga ವಾರ್ಷಿಕೋತ್ಸವದ ಹೊಸ್ತಿಲಲ್ಲಿ ಶಿವಮೊಗ್ಗ ಎಫ್.ಎಂ. ಸಮುದಾಯ ಬಾನುಲಿ ಕೇಂದ್ರ

Date:

Radio Shivamogga ಮಲೆನಾಡಿನ ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರವಾದ ರೇಡಿಯೋ ಶಿವಮೊಗ್ಗ 90.8 ಎಫ್ ಎಂ ನಲ್ಲಿ ಕಾರ್ಯಕ್ರಮ ಪ್ರಸಾರ ಆರಂಭವಾಗಿ ಏ.22ಕ್ಕೆ ಒಂದು ವರ್ಷ ಪೂರೈಸುತ್ತಿದೆ. ಈ ಪಯಣದಲ್ಲಿ ಸಹಕಾರ ನೀಡಿದ ಎಲ್ಲಾ ಕೇಳುಗರಿಗೆ, ಜಾಹೀರಾತುದಾರರು ಹಾಗೂ ಹಿತೈಷಿಗಳಿಗೆ ಬಾನುಲಿ ಕೇಂದ್ರದ ನಿರ್ದೇಶಕರಾದ ಜಿ.ಎಲ್. ಜನಾರ್ದನ್ ಆತ್ಮೀಯ ಧನ್ಯವಾದಗಳನ್ನು ತಿಳಿಸಿದ್ದಾರೆ.

ಕಿಡ್ಸ್ (ಕೊಡಚಾದ್ರಿ ಡೆವೆಲ್ ಪ್ಮೆಂಟ್ ಸೊಸೈಟಿ)ಯ ಕನಸಿನ ಯೋಜನೆ ಈ ಬಾನುಲಿ ಕೇಂದ್ರವಾಗಿದೆ. ಈ ಒಂದು ವರ್ಷದ ಪಯಣದಲ್ಲಿ ಲಕ್ಷಾಂತರ ಕೇಳುಗರ ಹೃನ್ಮನಗಳನ್ನು ರೇಡಿಯೋ ತಲುಪಿದೆ. ದಿನದ 24 ತಾಸೂ ರೇಡಿಯೋ ಪ್ರಸಾರವಾಗುತ್ತಿರುವುದು ವಿಶೇಷವಾಗಿದೆ.

ರೇಡಿಯೋ ಶಿವಮೊಗ್ಗ ಆಪ್ ನ ಮುಖಾಂತರ ಜಗತ್ತಿನಾದ್ಯಂತ 176 ರಾಷ್ಟ್ರಗಳಲ್ಲಿ ಕೇಳುಗ ವಲಯವನ್ನು ವಿಸ್ತರಿಸಿಕೊಂಡಿರುವುದು ನಮ್ಮ ರೇಡಿಯೋದ ಹೆಮ್ಮೆಯಾಗಿದೆ. ಕೇಳುಗರ ವಿನಂತಿಯ ಮೇರೆಗೆ, ಅನೇಕಾನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಾ ಸಮುದಾಯ ಬಾನುಲಿಯಾಗಿ ತನ್ನ ಛಾಪು ಮೂಡಿಸುತ್ತಿರುವುದು ಸಂತಸ ತಂದಿದೆ ಎಂದರು.

Radio Shivamogga ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯ ಹೊರತಾದ ಸಮಗ್ರ ಶಿಕ್ಷಣವನ್ನು ನಮ್ಮ ಬಾನುಲಿ ಕೇಂದ್ರ ಗುರುತಿಸಿ, ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಶಿಕ್ಷಣ ಎಂಬುದನ್ನು ಇಲ್ಲಿ ಮೂರು ಸ್ತರದಲ್ಲಿ ನಾವು ನೋಡುತ್ತಿದ್ದೇವೆ. ಮೊದಲನೆಯದಾಗಿ ಶಾಲಾ ಶಿಕ್ಷಣದ ಹಂತ, ಎರಡನೆಯದಾಗಿ ಉನ್ನತ ಶಿಕ್ಷಣದ ಹಂತ, ಮೂರನೆಯದಾಗಿ ಸಮುದಾಯ ಶಿಕ್ಷಣದ ಹಂತ. ನಮ್ಮೆಲ್ಲ ಕಾರ್ಯಕ್ರಮಗಳ ಒಟ್ಟೂ ಉದ್ದೇಶ ಹೀಗೆ ಮೂರು ಹಂತದಲ್ಲಿ ಶಿಕ್ಷಣವನ್ನು ನೀಡಿ, ಸುಸ್ಥಿರ ಬದುಕಿಗೆ ವೇದಿಕೆಯನ್ನಾಗಿ ರೂಪಿಸಿ, ಭರವಸೆಯ ಭವಿಷ್ಯಕ್ಕಾಗಿ ಬಾನುಲಿಯಲ್ಲಿ ಕಾರ್ಯಕ್ರಮಗಳನ್ನು ನೀಡುವುದಾಗಿದೆ ಎಂದಿದ್ದಾರೆ.

ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ವಿವಿಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. ಕೃಷಿ, ಅರಣ್ಯ, ತೋಟಗಾರಿಕೆ, ಪಶುಸಂಗೋಪನೆ, ವಾಣಿಜ್ಯ, ಶಿಕ್ಷಣ, ಕಲೆ, ಸಂಸ್ಕೃತಿ, ಸ್ಥಳೀಯ ಭಾಷೆಗಳು, ಪರಿಸರ, ಗುಡಿಕೈಗಾರಿಕೆ, ಬ್ಯಾಂಕಿಂಗ್, ಆರೋಗ್ಯ, ಕೈಗಾರಿಕೆ, ಸೇವಾ ಕ್ಷೇತ್ರ, ಡಿಜಿಟಲ್ ತಂತ್ರಜ್ಞಾನ ಇನ್ನಿತರ ವಿಷಯಾಧಾರಿತ ಕಾರ್ಯಕ್ರಮಗಳನ್ನು ಜನರಿಗೆ ನೀಡುತ್ತಿದೆ. ಶ್ರವಣ ಮಾಧ್ಯಮದ ಎಲ್ಲಾ ಸಾಧ್ಯತೆಗಳನ್ನೂ ಒಳಗೊಳ್ಳುವುದು ನಮ್ಮ ಆಶಯವಾಗಿದೆ.

ನಮ್ಮ ಆಪ್‌ ನ ಪಾಡ್‌ಕಾಸ್ಟ್ ಮೂಲಕ ಮುಖ್ಯ ಕಾರ್ಯಕ್ರಮಗಳ ಆಡಿಯೋವನ್ನು ಕೇಳುಗರು ತಮಗೆ ಬೇಕೆಂದಾಗ ಮತ್ತೆ ಮತ್ತೆ ಕೇಳಿಸಿಕೊಳ್ಳುವ ಅವಕಾಶವನ್ನು ರೇಡಿಯೋ ಶಿವಮೊಗ್ಗ ಎಫ್.ಎಂ. ಒದಗಿಸುತ್ತದೆ ಎಂದಿದ್ದಾರೆ.

ಒಂದು ವರ್ಷದ ಸವಿ ಸಂದರ್ಭಕ್ಕೆಂದು ಆಹ್ವಾನಿತ ಶ್ರೋತೃಗಳು, ಗಣ್ಯಮಾನ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರ ಸಮ್ಮುಖದಲ್ಲಿ ರೇಡಿಯೋ ಹಬ್ಬವನ್ನು ಆಯೋಜಿಸಲಾಗಿದೆ. ಇವರಿಂದ ವರ್ಷದ ಹಿನ್ನೋಟ, ಪ್ರತಿಸ್ಫಂದನೆ ಹಾಗೂ ಮುಂದಿನ ಕಾರ್ಯಕ್ರಮಗಳ ರೂಪುರೇಷೆಗಳನ್ನು ಒಗ್ಗೂಡಿಸುವ ಚಿಂತನ – ಮಂಥನ ಇದಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಬೃಹತ್ ಮಟ್ಟದಲ್ಲಿ ಆಯೋಜಿಸುವ ಚಿಂತನೆ ಇದೆ.

ಇದಕ್ಕೆ ನಮ್ಮೆಲ್ಲ ಕೇಳುಗರ, ಹಿತೈಷಿಗಳ ಸಹಕಾರ ಮಾರ್ಗದರ್ಶನವೇ ಮುಖ್ಯವಾಗಿದೆ. ಜನ ಸಮುದಾಯಗಳು ಅಪೇಕ್ಷಿಸಿದ ರೀತಿಯಲ್ಲಿ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲೂ ರೂಪಿಸಲಾಗುವುದು ಎಂದರು.

ರೇಡಿಯೋ ಶಿವಮೊಗ್ಗದ ಒಂದು ವರ್ಷದ ಪಯಣದಲ್ಲಿ ಅನೇಕ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದೆ. ಶಿಕ್ಷಣ ತಜ್ಞರು, ಪರಿಸರ ವಿಜ್ಞಾನಿಗಳು, ಜನಪದ ತಜ್ಞರು, ರೈತವಿಜ್ಞಾನಿಗಳು ನಿರಂತರವಾಗಿ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಶಿಕ್ಷಣ ಇಲಾಖೆ ಸಹಯೋಗದಲ್ಲಿ ಎಸ್ ಎಸ್ ಎಲ್ ಸಿ ಪಾಠಗಳು, ಶಿಕ್ಷಕರಿಗೆ ಅಗತ್ಯವಾದ ವಿದ್ಯಾಗಮ ಆನ್ ಲೈನ್ ತರಬೇತಿ ಕಾರ್ಯಕ್ರಮಗಳು ನಮ್ಮ ರೇಡಿಯೋದಲ್ಲಿ ಬಿತ್ತರವಾಗಿದೆ. ವಿಶೇಷವಾಗಿ ರೇಡಿಯೋ ಮುಖಾಂತರ ಬದುಕಿಗಾಗಿ ರಂಗಪಾಠಗಳನ್ನು ಬಿತ್ತರಿಸುತ್ತಾ,ಅಭಿನಯದ ಕುರಿತಾಗಿ ದೂರಶಿಕ್ಷಣದ ಸರ್ಟಿಫಿಕೇಟ್ ಕೋರ್ಸ್ ನ್ನು ನಡೆಸಲಾಗಿದೆ. ವಿವಿಧ ದಿನಾಚರಣೆಗಳಿಗೆ ಕೂಡಾ ಕಾರ್ಯಕ್ರಮಗಳನ್ನು ನಡೆಸಿದೆ. ವೈದ್ಯರ ಸಂದರ್ಶನ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠರು, ಶಾಸಕರು, ಮಹಾಪೌರರ ಜೊತೆಗೆ ನೇರಪ್ರಸಾರದ ಸಂವಾದ ನಡೆಸಲಾಗಿದೆ. ತೃತೀಯ ಲಿಂಗಿ ಹೋರಾಟಗಾರ್ತಿ ಅಕ್ಕಯ್ ಪದ್ಮಶಾಲಿ, ಹಿರಿಯ ಚಲನಚಿತ್ರ ಕಲಾವಿದ ರಮೇಶ್ ಭಟ್ ಅವರೊಂದಿಗೆ ಸಂದರ್ಶನ ನಡೆಸಲಾಗಿದೆ. ಪಂಚಾಯತ್ ರಾಜ್ ಸಚಿವಾಲಯದ ಸಹಯೋಗದೊಂದಿಗೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ಜನರ ಆರೋಗ್ಯ ಮತ್ತು ನೈರ್ಮಲ್ಯದ ಕುರಿತಾದ ವಿಶೇಷ ಕಾರ್ಯಕ್ರಮಗಳು ಕೂಡಾ ಪ್ರಸಾರವಾಗುತ್ತಿದೆ. ದೇಶದ ಚಾರಿತ್ರಿಕ ಪುಟದಲ್ಲಿ ಸದಾ ರಾರಾಜಿಸುವ ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ಬರಹಗಳು- ಚಿಂತನೆಗಳನ್ನು ಪ್ರತಿದಿನ ರೇಡಿಯೋದಲ್ಲಿ ಪ್ರಸಾರ ಮಾಡುತ್ತಿರುವುದು ಮತ್ತೊಂದು ಸಂತಸದ ಸಂಗತಿಯಾಗಿದೆ.

Previous article
Next article

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...