Legislative Assembly Election ಶಿವಮೊಗ್ಗ ಇಡೀ ರಾಜ್ಯದಲ್ಲೇ ಈಗ ಗಮನ ಸೆಳೆದಿದೆ. ವಿಧಾನ ಸಭಾ ಚುನಾವಣೆ ಟಕೆಟ್ ನೀಡುವ ಸಮಯ ಎಲ್ಲಾ ಪಕ್ಷಗಳೂ ಪರಸ್ಪರ ಎದುರು ಪಕ್ಷದ ಅಭ್ಯರ್ಥಿ ಯಾರು? ಎಂದು ತಾವೇ ತಲೆಕೆರೆದು ಕೊಳ್ಳುತ್ತಿದ್ದವು. ಎದುರು ಪಕ್ದ ಅಭ್ಯರ್ಥಿ ನೋಡಿ ತಮ್ಮ ಪಕ್ಷದ ಅಭ್ಯರ್ಥಿಯನ್ನ ನಿರ್ಧರಿಸುತ್ತಿದ್ದವು.ಈಗ ಟಿಕೇಟು ಕೊಡುವುದು ಯಾರಿಗೆ ? ಅಂತ ಬಿಜೆಪಿಗೇ ತಲೆ ತಿನ್ನುತ್ತಿದೆ.
ಇದಕ್ಕೆ ಕಾರಣರಾಗಿರುವವರು ಹಾಲಿ ಶಾಸಕ ಈಶ್ವರಪ್ಪ. ಅವರು ಚುನಾವಣೆಗೆ ನಿಲ್ಲುವುದಿಲ್ಲ ಎಂದರು. ಹೈಕಮಾಂಡ್ ಗೆ ಸಂತೋಷ ಆಯಿತು. ಆದರೆ ಕ್ಷೇತ್ರದ ಅಭ್ಯರ್ಥಿಯ ಪ್ರಶ್ನೆ ಬಂದಾಗ ಈಶ್ವರಪ್ಒನವರ ಪುತ್ರ ರೇಸಿನಲ್ಲಿದ್ದಾರೆ!.
Legislative Assembly Election ಪಕ್ಷನಿಷ್ಠೆ, ಹಿರಿತನ ಮತ್ತು ಈಗಾಗಲೇ ರಾಜ್ಯದ ಹಲವೆಡೆ ತಂದೆ ನಿವೃತ್ತಿ ಪಡೆದ ಸ್ಥಳಗಳಲ್ಲಿ ಮಕ್ಕಳಿಗೆ ಟಿಕೇಟ್ ಘೋಷಿಸಿ ಆಗಿದೆ.
ಗತ್ಯಂತರವಿಲ್ಲ. ಕಾಂತೇಶ್ ಗೇ ಟಿಕೇಟ್ ಘೋಷಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಇದು ಈಶ್ವರಪ್ಪನವರ ಜಾಣ್ಮೆ. ಹೈ ಕಮಾಂಡ್ ಗೇ ಹೆಡೆಮುರಿ ಕಟ್ಟಿಹಾಕಿಬಿಟ್ಟಿದ್ದಾರೆ.
ಕೊನೆಗೆ ಟಿಕೆಟ್ ಘೋಷಣೆ ಕಾಂತೇಶ್ ಪರವೇ
ಅನಿಸುತ್ತದೆ.