karnataka Assembly Election ರಾಜಕೀಯ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಬೆಳವಣಿಗೆಯಾಗುತ್ತಲೇ ಇದೆ. ಒಮ್ಮೆ ಒಬ್ಬ ವ್ಯಕ್ತಿ ರಾಜಕೀಯಕ್ಕೆ ಪ್ರವೇಶಿಸಿದರೆ ಅವರ ಮುಂದಿನ ನಾಲ್ಕೈದು ತಲೆಮಾರು ಕೂತು ತಿನ್ನುವುದು ಲೋಕರೂಢಿ.
ರಾಜಕಾರಣಿಗಳು ತಮ್ಮ ಮುಂದಿನ ತಲೆಮಾರುಗಳು ಕುಳಿತು ತಿನ್ನುವಷ್ಟು ಆಸ್ತಿಯನ್ನು ವ್ಯವಸ್ಥೆ ಮಾಡಿ ಬಿಟ್ಟಿರುತ್ತಾರೆ. ಹೀಗಿರುವಾಗ ಸಮಾಜದ ಬೆಳವಣಿಗೆ ಹೇಗೆ ಸಾಧ್ಯ ಎಬುವುದು ಯಕ್ಷಪ್ರಶ್ನೆಯಾಗಿದೆ.
ಪ್ರತಿಷ್ಠಿತ ರಾಜಕಾರಣಿಗಳ ಆಸ್ತಿ ವಿವರಗಳನ್ನು ಉದಾಹರಣೆ ನೀಡಿರುವುದಾದರೆ,
ಕಾಂಗ್ರೆಸ್ ದಾವಣಗೆರೆ ದಕ್ಷಿಣ ಮೂಲದ ಆಡಳಿತಗಾರರಾದ ಶಾಮನೂರು ಶಿವಶಂಕರಪ್ಪನವರ ಕೃಷಿ ಭೂಮಿ ಮೌಲ್ಯ,- 35 ಕೋಟಿ, ಒಟ್ಟು ಆಸ್ತಿ ವರದಿಯಲ್ಲಿ ನೀಡಿರುವಂತೆ ಹೇಳುವುದಾದರೆ – 292. 83 ಕೋಟಿ ರೂ ಇವರು ಕೃಷಿ ಕ್ಷೇತ್ರದಲ್ಲಿ ಅತಿ ಹೆಚ್ಚು ಲಾಭ ಪಡೆದಿದ್ದಾರೆ.
karnataka Assembly Election ನೂರಾರು ಕೋಟಿ ಒಡೆಯರಾದ ಸಂತೋಷ್ ಲಾಡ್ ಕಲಘಟಗಿಯ ಕಾಂಗ್ರೆಸ್ ಆಡಳಿತಗಾರರ ಬಳಿ ಮಾರುತಿ ಒಮಿನಿಯನ್ನು ಮಾತ್ರ ಕಾಣಬಹುದಾಗಿದೆ. ಇವರ ಬಳಿ ಸುಮಾರು 121. 63 ಕೋಟಿ ರೂ ಹೊಂದಿದ್ದಾರೆ. ಜಾಸ್ತಿ ಹಾಗೂ ಚಿರಾಸ್ತಿಗಳ ಮೂಲಕ ಲಾಡ್ರವರು ಕೋಟಿ ಹಣವನ್ನು ಗಳಿಸಿದ್ದಾರೆ.
ಡಿ,ಕೆ,ಶಿ ಕೋಟಿಸರದಾರ, ಕನಕಪುರದ ಕಾಂಗ್ರೆಸ್ ಆಡಳಿತಗಾರರಾದ ಇವರ ಬಳಿ ಒಟ್ಟು ಆಸ್ತಿ 1114 ಕೋಟಿಯನ್ನು ಹೊಂದಿದ್ದಾರೆ. ಪತಿ ಪತಿ ಇಬ್ಬರೂ ಕೂಡ ತಮ್ಮ 16 ಕೋಟಿಗಳಷ್ಟು ವಾರ್ಷಿಕ ವರಮಾನ ಹೊಂದಿದ್ದಾರೆ.
ಎಂ,ಟಿ,ಬಿ ಎಂದೆ ಹೆಸರಾಗಿರುವ ಬಿಜೆಪಿ ಪಕ್ಷದ ಹೊಸಕೋಟೆಯ ಆಡಳಿತಗಾರರಾದ ಎನ್, ನಾಗರಾಜ್ ರವರು 400 ಕೋಟಿ ಆಸ್ತಿ ಹೆಚ್ಚಳವಾಗಿದೆ ಅಂದಿದ್ದಾರೆ, ಇವರ ಒಟ್ಟು ಆಸ್ತಿ ಮೌಲ್ಯ ವು – 1510 ಕೋಟಿ ಆಗಿರುತ್ತದೆ.
238 ಕೋಟಿ ಒಡೆಯರಾಗಿರುವ ಮಂಜುನಾಥ್ ರವರು, ಜೆ, ಡಿ, ಎಸ್, ಹಾನೂರು ಪಕ್ಷದ ನಾಯಕರು, ಒಟ್ಟು ಆಸ್ತಿ = 238 ಕೋಟಿ ಆಗಿದೆ ಎಂಬುದಾಗಿದೆ.
ಪುರುಷನಿಗಿಂತ ಮಹಿಳೆಯ ಒಂದು ಕೈ ಮೇಲೆ ಎಂಬ ನುಡಿಯಂತೆ, ಲಕ್ಷ್ಮಿ ಅರುಣ ರವರು ಜನಾರ್ಧನ ರೆಡ್ಡಿ ಗಿಂತ ಶ್ರೀಮಂತೆ, ಬಳ್ಳಾರಿ ನಗರದ ಕೆ,ಆರ್, ಪಿ, ಪಿ, ಪಕ್ಷದ ಆಡಳಿತಗಾರರಾಗಿರುವ ಇವರ ಒಂದು ಆಸ್ತಿ 200 ಕೋಟಿಯಾಗಿದೆ ಎಂದು ವರದಿಯಾಗಿದೆ.
ರಾಜಕೀಯ ಎಂಬುದು ಜನರಿಂದ ಆಯ್ಕೆಯಾಗಿ, ಜನರಿಗಾಗಿ ಹಣ ವಿನಿಮಯ ಮಾಡಿ, ಅವರಿಗಾಗಿ ಹೂಡಿಕೆ ಮಾಡಬೇಕು, ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಮಾತ್ರ , ಪ್ರಜೆಗಳ ಮನಗೆಲ್ಲಬಹುದು, ಇಷ್ಟಿದ್ದರೂ ಕೂಡ ನಮ್ಮ ಸುತ್ತಲಿನ ರಾಜಕೀಯ ಪ್ರತಿನಿಧಿಗಳು ಸಾಮಾನ್ಯ ಜನರ ಬಗ್ಗೆ ಚಿಂತಿಸದೇ ಇರುವುದು ದುಃಖಕರ ಸಂಗತಿಯಾಗಿದೆ.
ಬರಹ: ಭಾರ್ಗವಿ
ಪತ್ರಿಕೋದ್ಯಮ ವಿಧ್ಯಾರ್ಥಿನಿ
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಶಿವಮೊಗ್ಗ