Thursday, March 19, 2026
Thursday, March 19, 2026

JCI Shivamogga ಶಿವಮೊಗ್ಗ ಸಹ್ಯಾದ್ರಿ ಜೆಸಿಐ ನ ಸತೀಶ್ ಚಂದ್ರ ಅವರಿಗೆ ಜೆಸಿಐ ರಾಷ್ಟ್ರೀಯ ಪುರಸ್ಕಾರ

Date:

JCI Shivamogga 2022-23ರ ಸಾಲಿನ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಸತೀಶ್ ಚಂದ್ರ ಅವರಿಗೆ ಜೆಸಿಐ ರಾಷ್ಟ್ರ ಪ್ರಶಸ್ತಿ ಲಭಿಸಿದೆ. 2022-23ನೇ ಸಾಲಿನಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ವತಿಯಿಂದ ಮಾಡಿದ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.

ಸತೀಶ್ ಚಂದ್ರ ಅವರು ಗ್ರಾಮೀಣ ಶಾಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ರಾಮುಖ್ಯತೆ ನೀಡಿ ಕೆಲಸ ಮಾಡಿದ್ದರು. ಜೆಸಿಐ ಸಂಸ್ಥೆಗಳಲ್ಲಿ ವಿಶೇಷ ಸಾಧನೆ ಮಾಡುವ ಒಂದು ಸಂಸ್ಥೆಗೆ ನೀಡುವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜೆಸಿಐ ವಿಶೇಷ ರಾಷ್ಟ್ರೀಯ ಫ್ಲಾಗ್ ಶಿಪ್ ಕಾರ್ಯಕ್ರಮದ ಪ್ರಯುಕ್ತ ಉತ್ತಮ ಸೇವೆ ನೀಡುವ ಎರಡು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಸುಸ್ಥಿರ ಅಭಿವೃದ್ಧಿ ಪ್ರಾಜೆಕ್ಟ್ ಹಾಗೂ 2022-23ರ ಅವಧಿಯಲ್ಲಿ ಸಲ್ಲಿಸಿದ ಸೇವಾ ಚಟುವಟಿಕೆಗಳಿಗಾಗಿ ರಾಷ್ಟ್ರೀಯ ಪುರಸ್ಕಾರಗಳಿಗೆ ಶಿವಮೊಗ್ಗ ಸತೀಶ್‌ಚಂದ್ರ ಅವರು ಭಾಜನರಾಗಿದ್ದಾರೆ.

JCI Shivamogga ದೆಹಲಿಯಲ್ಲಿ ನಡೆದ ಜೆಸಿಐ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಅಧ್ಯಕ್ಷ ಅನ್ಸೂರ್ ಷರಿಫ್‌ ಅವರು ಪ್ರಶಸ್ತಿ, ಪಾರಿತೋಷಕ, ಪ್ರಮಾಣ ಪತ್ರ ನೀಡಿ ಸನ್ಮಾನಿಸಿದರು.

ವಲಯ ಅಧ್ಯಕ್ಷ ಶಿವಕುಮಾರ, ವಲಯ ಉಪಾಧ್ಯಕ್ಷ ಗೌರೀಶ್, ವಲಯ ನಿರ್ದೇಶಕ ಅನೂಷ್‌ಗೌಡ, ಕೋಟ್ಯನ್ ಶೇಷಗಿರಿ, ಡಾ. ಲಲಿತಾ ಭರತ್, ಡಾ. ಅಕಿಲಾ, ಜಿ.ವಿಜಯ್‌ಕುಮಾರ್, ಮಂಜುನಾಥ್ ಕದಂ, ಪ್ರಮೋದ್ ಶಾಸ್ತ್ರಿ, ಸುಷ್ಮಾ ಹಿರೇಮಠ, ಕಿಶೋರ್, ಸಂತೋಷ್ ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...