JDS Karnataka ರಾಜಕೀಯದಲ್ಲಿ ಯಾವುದೂ ನಿಶ್ಚಿತವಲ್ಲ. ಸಿದ್ಧಾಂತಗಳ ಬಗ್ಗೆ ಪುಂಖಾನುಪುಂಖ ಭಾಷಣ ಬಿಗಿಯುತ್ತಿರುತ್ತಾರೆ.
ಮತದಾರರು ಅವರ ಪಕ್ಷನಿಷ್ಠೆಯನ್ನ ನೋಡಿ ತಲೆದೂಗುತ್ತೇವೆ.
ಶಿವಮೊಗ್ಗದ ಬಿಜಿಪಿ ಒಬ್ಬ ಒಳ್ಳೆಯ ವಾಗ್ಮಿ ಅಂತ ಇದ್ದ ಆಯನೂರು ಮಂಜುನಾಥ್ ಈಗ ತಮ್ಮ ಲಹರಿಯನ್ನೇ ಬದಲಿಸಿಕೊಂಡಿದ್ದಾರೆ.ಬಿಜೆಪಿಯಿಂದ ಶಾಸಕ ರಾಜ್ಯಸಬೆ ಲೋಕಸಭೆ ಸದಸ್ಯತ್ವ ಅನುಭವಿಸಿದ್ದರು.
ಈಗ ಈ ಬಾರಿ ಅವರಿಗೆ ಬಿಜೆಪಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅನುವು ಮಾಡಿಕೊಡಲಿಲ್ಲ. ಹಾಲಿ ಶಾಸಕ
ಈಶ್ವರಪ್ಪನವರ ಮೇಲೆ ಗರಂ ಆಗಿ ಹೇಳಿಕೆ ನೀಡಿದ್ದರು. ಫ್ಲೆಕ್ಸಿ ಹಾಕಿಸಿ ಸುದ್ದಿಮಾಡಿ ಒಂದಿಷ್ಟು ನಾಯಕರ ಗಮನವನ್ನೂ ಸೆಳೆದಿದ್ದರು.
ಅದಕ್ಕೆ ಪ್ರತಿಯಾಗಿ ಈಶ್ವರಪ್ಪನವರ ಪಕ್ಷನಿಷ್ಠೆ ,ಆಯನೂರು ಮಂಜುನಾಥರ ಹೇಳಿಕೆಗಳನ್ನೆಲ್ಲ ಸೋಪಿನಂತೆ ನಿಚ್ಚಳ ಮಾಡಿತು.
JDS Karnataka ಸದ್ಯ ಶೆಟ್ಟರ ಘರ್ ಛೋಡೋ ಅಭಿಯಾನ ಮತ್ತೆಲ್ಲಿ
ಶಿವಮೊಗ್ಗಕ್ಕೂ ಮುಟ್ಟಿತೋ ಅನ್ನುವಷ್ಟರಲ್ಲಿ ಆಯನೂರು ಹಿಂದಿನ ಚಾಳಿಯನ್ನೇ ಮುಂದುವರೆಸಿದ್ದಾರೆ.
ಮಲ್ಯರ ಪಾರ್ಟಿ, ಕಾಂಗ್ರೆಸ್, ಈಗ ಜೆಡಿಎಸ್. ವಿಚಾರಧಾರೆಗೆ ಹೆಸರಾದ ವ್ಯಕ್ತಿ. ಈಗ
ಟಿಕೆಟ್ ಗಾಗಿ ಅಲೆಮಾರಿಯಾಗಿದ್ದರು. ಎಲ್ಲವೂ ಅವರವರ ಆಯ್ಕೆ ನಿಜ. ಆದರೆ ಸದ್ಯ ಅವರು ಪಕ್ಷೇತರರಾಗಿ
ಚುನಾವಣಾ ಅಖಾಡಕ್ಕೆ ಇಳಿದಿದ್ದರೆ
ಅವರ ಅಭಿಮಾನಿಗಳು ಬೇಸರ ಮಾಡಿಕೊಳ್ಳುತ್ತಿರಲಿಲ್ಲ ಅಷ್ಟೆ.
ಚಿತ್ರದುರ್ಗದಲ್ಲಿ ಜೆಡಿಎಸ್ ಮುಖಮಣಿ ಕುಮಾರಸ್ವಾಮಿ ಅವರ ಸಮ್ಮುಖ ಪಕ್ಷ ಸೇರಿದ್ದಾರೆ.
ಕಡೂರು ವೈಎಸ್ ವಿ ದತ್ತ ಅವರ ಸಂಗತಿಗೂ ಮಂಜುನಾಥ್ ಅವರ ವಿಚಾರಕ್ಕೂ ಅಜಗಜಾಂತರವಿದೆ.
ಏನೇ ಆಗಲಿ ಬಿಜೆಪಿಗೆ
ಒಂದು ಮೈನಸ್ಸು. ಆದರೆ ಅಭ್ಯರ್ಥಿಗಳಿಲ್ಲದೇ ಸೊರಗುತ್ತಿದ್ದ ಜೆಡಿಎಸ್ ಒಂದು ಪ್ರಮುಖ ಸೇರ್ಪಡೆ ಎಂಬ ಅಂಶವಂತೂ ದಿಟ.
ಆಯನೂರು ಮಂಜುನಾಥ್ ಅಂಥವರು
ರಾಜಕೀಯದಲ್ಲಿರ ಬೇಕು. ಅವರಿಗೆ ಶುಭವಾಗಲಿ.