DC Shivamogga ಚಿಕ್ಕಮಗಳೂರಿನ ಬಾಳೆಹೊನ್ನೂರು ಸಮೀಪದ ಬೊಗಸೆ ಗ್ರಾಮದ ಶ್ರೀ ತಿರುಮಲ ಲಕ್ಷ್ಮಿ ದೇವಸ್ಥಾನದ ಮುಂಭಾಗದಲ್ಲಿದ್ದ ನಾಗರವಿಗ್ರಹ ಕಿತ್ತುಹಾಕಿ, ತ್ರಿಶೂಲವನ್ನು ಬಗ್ಗಿಸಿ ಹಾಗೂ ಕೆಂಚ ದೇವರ ಹರಿಗೆ ಯನ್ನು ಸ್ಥಾನ ಪಲ್ಲಟ ಮಾಡಿ ಹಿಂದೂ ಸಂಪ್ರದಾಯಕ್ಕೆ ಧಕ್ಕೆ ತಂದಿರುವ ಪ್ರಕರಣ ವರದಿಯಾಗಿದೆ.
ಈ ಸಂಬಂಧ ದೇವಸ್ಥಾನದ ಮುಖ್ಯಸ್ಥ ಶಿವಣ್ಣಗೌಡ ಎಂಬುವವರು ಬಾಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕಡವಂತಿ ಗ್ರಾ.ಪಂ. ಸದಸ್ಯ ವಿನೋದ್ ನೇತೃತ್ವದಲ್ಲಿ ಸ್ಥಳೀಯರಾದ ಮುಕುಂದ ಶೆಟ್ಟಿ, ನರೇಂದ್ರ, ರಾಮಚಂದ್ರ ಹಾಗೂ ಪೊಲೀಸ್ ಶ್ವಾನದಳದೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಗಿದೆ.
ಈ ವೇಳೆ ಮಾತನಾಡಿದ ಕಡವಂತಿ ಗ್ರಾ.ಪಂ. ಸದಸ್ಯ ವಿನೋದ್ ಇತ್ತೀಚೆಗೆ ಬೊಗಸೆ ಗ್ರಾಮದ ದೇವಸ್ಥಾನದ ವರ್ಷದ ಸುಗ್ಗಿ ಹಬ್ಬ ಮುಕ್ತಾಯವಾಗಿತ್ತು. ಈ ನಡುವೆ ದೇವಸ್ಥಾನದ ಮುಂಭಾಗದಲ್ಲಿರುವ ನಾಗರಕಟ್ಟೆಯಲ್ಲಿ ದ್ದ ನಾಗರ ಕಲ್ಲಿನ ವಿಗ್ರಹವನ್ನು ಹಾನಿಗೊಳಿಸಿ, ಚೌಡಮ್ಮ ಗುಡಿಯ ಹೂವಿನ ಹಾರವನ್ನು ಕಿತ್ತು ಬಿಸಾಡಿ ಪಕ್ಕದಲ್ಲಿ ಸ್ಥಾಪಿಸಲಾಗಿದ್ದ ತ್ರಿಶೂಲವನ್ನು ಬಗ್ಗಿಸಿ ಮುರಿಯಲು ಪ್ರಯತ್ನಿಸಿರುವ ಜೊತೆಗೆ ಕೆಂಚಪ್ಪ ಗುಡಿಯ ದೇವರ ಹರಿಗೆ ಯನ್ನು ಸ್ಥಾನ ಪಲ್ಲಟ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
DC Shivamogga ಇಷ್ಟೆಲ್ಲಾ ಹಿಂದೂ ಸಂಪ್ರದಾಯಕ್ಕ ಅವಮಾನಗೊಳಿಸಿದ ಹಿನ್ನೆಲೆಯಲ್ಲಿ ದೇವಾಲಯ ಮುಖ್ಯಸ್ಥರ ಮೂಲಕ ಪ್ರಕರಣ ದಾಖಲಿಸಲಾಗಿದ್ದ ಹಿನ್ನೆಲೆಯಲ್ಲಿ ಗ್ರಾಮದ ಯುವಕನೋರ್ವ ಅದೇ ಜಾಗದಲ್ಲಿ ಅನುಮಾನವಾಗಿ ತಿರು ಗಾಡುತ್ತಿದ್ದನೆಂಬ ಮಾಹಿತಿ ಲಭಿಸಿದ ಹಿನ್ನಲೆಯಲ್ಲಿ ಆತನನ್ನು ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸಿದ ಬಳಿಕ ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಇದೇ ರೀತಿ ಹಿಂದೂ ಸಂಪ್ರದಾಯವನ್ನು ಹಾಳುಗೆಡವಲು ಮುಂದಾಗಿರುವವರನ್ನು ಪೊಲೀಸ್ ಅಧಿಕಾರಿಗಳು ಯಾವುದೇ ದಯೆತೋರದೇ ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ